Breaking News
Home / ರಾಷ್ಟ್ರೀಯ (page 558)

ರಾಷ್ಟ್ರೀಯ

ಏಪ್ರಿಲ್ 1 ರಿಂದ ಬದಲಾಗಲಿವೆ ಈ 5 ನಿಯಮಗಳು: ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ

ದೆಹಲಿ: ಹಣಕಾಸು ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಹಣಕಾಸು ವರ್ಷ ಏಪ್ರಿಲ್ 1 ರಿಂದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಏಪ್ರಿಲ್ 1 ರಿಂದ ಟ್ರ್ಯಾಕ್‌ಗಳು, ಜಿಎಸ್‌ಟಿ, ಪ್ಯಾನ್-ಆಧಾರ್ ಲಿಂಕ್, ಎಫ್‌ಡಿ ಸೇರಿದಂತೆ ಬ್ಯಾಂಕ್‌ನ ನಿಯಮಗಳು ಬದಲಾಗುತ್ತವೆ. ಹೀಗಾಗಿ ಅಂತಹ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಅತ್ಯಗತ್ಯ. ಅವುಗಳು ಯಾವುವು ಎಂದು ಎಲ್ಲರೂ ತಿಳಿದುಕೊಂಡರೆ ಮುಂದಾಗುವ …

Read More »

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಹೂ ನೀಡಿ ಸ್ವಾಗತಿಸಿದ :ಶಾಸಕ ಅನಿಲ್ ಬೆನಕೆ!

ಬೆಳಗಾವಿ: ಶಾಲಾ- ಕಾಲೇಜುಗಳಲ್ಲಿ ‘ಧರ್ಮವಸ್ತ್ರ’ ಧರಿಸಿ ಬರಕೂಡದು ಎಂಬ ಹೈಕೋರ್ಟ್​ ಆದೇಶದ ಮಧ್ಯೆಯೇ, ಇಂದಿನಿಂದ ಆರಂಭವಾದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಬೆಳಗಾವಿಯ ಶಾಲೆಯೊಂದರಲ್ಲಿ ಮಕ್ಕಳು ಹಿಜಾಬ್​ ಧರಿಸಿ ಬಂದಿದ್ದು, ಬಿಜೆಪಿ ಶಾಸಕ ಅನಿಲ್​ ಬೆನಕೆ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದ್ದಾರೆ.   ನಗರದ ಸರ್ದಾರ್​ ಹೈಸ್ಕೂಲ್​ನಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಆಗಮಿಸಿದಾಗ, ಉಪಸ್ಥಿತರಿದ್ದ ಶಾಸಕ ಅನಿಲ ಬೆನಕೆ ಅವರು, ಮಕ್ಕಳಿಗೆ ಗುಲಾಬಿ ಹೂ ನೀಡಿ ಶುಭ ಕೋರಿದ್ದಾರೆ. ಇದೇ ವೇಳೆ ಹಿಜಾಬ್​ ಧರಿಸಿ …

Read More »

ದೇವೇಗೌಡರ ಪತ್ನಿ ಚನ್ನಮ್ಮಗೆ ಐಟಿ ನೋಟಿಸ್! ಕಬ್ಬಿನ ಗದ್ದೆಗೆ ಅಧಿಕಾರಿಗಳನ್ನ ಆಹ್ವಾನಿಸಿದ ರೇವಣ್ಣ

ಹಾಸನ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರಿಗೆ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ಹಾಸನದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್​.ಡಿ.ರೇವಣ್ಣ, ನಮ್ಮ ತಾಯಿಗೆ ಐಟಿ ಅಧಿಕಾರಿಗಳಿಂದ ನೋಟಿಸ್​ ಬಂದಿದೆ. ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ಹೀಗೆ ಮಾಡ್ತಾರಾ? ದೊಡ್ಡಪುರದ ಬಳಿ ನಮ್ಮ ತಾಯಿ ಹೆಸರಿನ ಜಮೀನಿನಲ್ಲಿ ಕಬ್ಬು ಬೆಳೆದಿದ್ದೀವಿ. ನಮ್ಮ ತಾಯಿಗೆ ಸೇರಿದ ಗದ್ದೆಯಲ್ಲಿ ಕಬ್ಬು ಬೆಳೆದಿದ್ದಕ್ಕೆ ಐಟಿ ನೋಟಿಸ್ ಜಾರಿ ಮಾಡಿದೆ. …

Read More »

ಒಬಿಸಿ ಮೀಸಲಾತಿ ಅಂತಿಮಗೊಳಿಸಿಯೇ ಜಿಪಂ, ತಾಪಂ ಚುನಾವಣೆ ನಡೆಸುತ್ತೇವೆ : ಸಚಿವ ಈಶ್ವರಪ್ಪ

ಬೆಂಗಳೂರು : ರಾಜ್ಯದಲ್ಲಿ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್‌ ಈಶ್ವರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2022 ಅನ್ನು ಸಚಿವ ಈಶ್ವರಪ್ಪ ಮಂಡಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ …

Read More »

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ- ಸಂಸದ ಈರಣ್ಣಾ ಕಡಾಡಿ

ಬೆಳಗಾವಿ: ಸ್ವತಂತ್ರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೆಗಾಗಿ ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲೆಯ ಸಂಗೋಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸೈನಿಕ ಶಾಲೆಯನ್ನು ಕೇಂದ್ರ ರಕ್ಷಣಾ ಇಲಾಖೆಯ ಅಧೀನದಲ್ಲಿ ತೆಗೆದುಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಎಂದು ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು. ರವಿವಾರ ಮಾ-27 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು ದೇಶಾದ್ಯಂತ 100 ಹೊಸ ಸೈನಿಕ …

Read More »

ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡಿರುವದನ್ನು ಖಂಡಿಸಿ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿಗಳ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಬೆಳಗಾವಿ- ಬೆಳಗಾವಿಯಲ್ಲಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡಿರುವದನ್ನು ಖಂಡಿಸಿ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿಗಳು ಇಂದು ಡಿಸಿ ಕಚೇರಿ ಎದುರು ಅರಬೆತ್ತಲೆಯಾಗಿ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಜೈ ಕಿಸಾನ್ ಮಾರುಕಟ್ಟೆ ಅನಧಿಕೃತ ವಾಗಿದೆ ಈ ಮಾರುಕಟ್ಟೆಯಿಂದಾಗಿ ಎಪಿಎಂಸಿ ಯಾರ್ಡ್ ನಲ್ಲಿದ್ದ ತರಕಾರಿ ಮಾರುಕಟ್ಟೆ ಸಂಪೂರ್ಣವಾಗಿ ಸ್ಣಗಿತವಾಗಿದೆ.ಲಕ್ಷಗಟ್ಟಲೆ ಹಣ ಪಾವತಿ ಮಾಡಿ ಎಪಿಎಂಸಿ ಯಾರ್ಡ್ ನಲ್ಲಿ ಮಳಿಗೆ ಪಡೆದಿದ್ದೆವು ಆದ್ರೆ ಖಾಸಗಿ ತರಕಾರಿ ಮಾರುಕಟ್ಟೆಯಿಂದ ಎಪಿಎಂಸಿ ತರಕಾರಿ ಮಾರುಕಟ್ಟೆ …

Read More »

ಮಾಜಿ ಸಿದ್ದರಾಮಯ್ಯನವರು ಚುನಾವಣೆಗೆ ಮುನ್ನವೇ ಹತಾಶರಾಗಿದ್ದಾರೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಗೆ ಮುನ್ನವೇ ಹತಾಶರಾಗಿ ಹೇಳಿಕೆ ನೀಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ನಂತರ ಹತಾಶರಾಗುತ್ತಾರೆ ಎಂದುಕೊಂಡಿದ್ದೆವು. ಮುಖ್ಯಮಂತ್ರಿಯಾದವರು ಸ್ವಾಮೀಜಿಗಳ ಕುರಿತು ಹೇಳಿರುವ ಹೇಳಿಕೆ ಸರಿಯಲ್ಲ. ಚುನಾವಣೆಗೂ ಮುಂಚೆಯೇ ಸೋಲು ಒಪ್ಪಿಕೊಂಡಿದ್ದಾರೆ.ಎಲ್ಲವನ್ನು ತ್ಯಾಗ ಮಾಡಿ ಸಮಾಜ ಸೇವೆ ಮಾಡುವ ಸ್ವಾಮೀಜಿಗಳ ಬಗ್ಗೆ ಅವರು ಮಾತನಾಡಿರುವುದು ಸರಿಯಲ್ಲ. ಹೀಗಾಗಿ ಸ್ವಾಮೀಜಿಗಳ ಕ್ಷಮೆಯನ್ನು ಸಿದ್ದರಾಮಯ್ಯ ಯಾಚಿಸಬೇಕು. ವೋಟ್ …

Read More »

ಚಾಮರಾಜನಗರ ಹಾಲಿ ನಗರಸಭಾ ಸದಸ್ಯನಿಗೆ ಜೈಲು ಶಿಕ್ಷೆ

ಚಾಮರಾಜನಗರ: ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದರ ಜೊತೆಗೆ ನಗರಸಭೆ ಆಯುಕ್ತರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಗರಸಭೆಯ ಹಾಲಿ ಸದಸ್ಯ ಆರ್‌.ಪಿ.ನಂಜುಂಡಸ್ವಾಮಿಗೆ ಚಾಮರಾಜನಗರದ ನ್ಯಾಯಾಲಯ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.   2010ರ ನವೆಂಬರ್‌ 10ರಂದು ಈ ಪ್ರಕರಣ ನಡೆದಿತ್ತು. ಆರ್‌.ಪಿ.ನಂಜುಂಡಸ್ವಾಮಿ ಅವರು ಆಗ ನಗರಸಭೆಯ ಸದಸ್ಯರಾಗಿದ್ದರು. ಈಗಲೂ ಅವರು 15ನೇ ವಾರ್ಡ್‌ ಸದಸ್ಯರಾಗಿದ್ದಾರೆ. ಅವರ ವಿರುದ್ಧ ಅಂದಿನ ನಗರಸಭೆ ಆಯುಕ್ತ ಎಸ್‌.ಪ್ರಕಾಶ್‌ ಅವರು ‍ಪೊಲೀಸರಿಗೆ ದೂರು …

Read More »

ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ರಂಗಭೂಮಿ ಕಲಾವಿದರು ಸ್ಥಳದಲ್ಲೇ ಸಾವು

ಹಾವೇರಿ : ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ರಂಗಭೂಮಿ ಕಲಾವಿದರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ಗೀತಾ ದಾವಣಗೆರೆ (34) ಮತ್ತು ಮಂಜುಳಾ (36) ಎಂದು ಗುರುತಿಸಲಾಗಿದೆ. ಮೃತರು ದಾವಣಗೆರೆ ಮೂಲದವರು ಎಂದು ತಿಳಿದುಬಂದಿದೆ. ಲಾರಿಯನ್ನು ಓವರ್ ಟೇಕ್ ಮಾಡಲು ಹೋದಾಗ, ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ದಾವಣಗೆರೆಯಿಂದ ಕಾರವಾರಕ್ಕೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ …

Read More »

ಮಂಡ್ಯ ತಹಸೀಲ್ದಾರ್​ ಅಮಾನತು: ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ಗ್ರಾಮಸ್ಥರು

ಮಂಡ್ಯ: ಮಂಡ್ಯ ತಹಸೀಲ್ದಾರ್ ಅಮಾನತುಗೊಂಡಿದ್ದಕ್ಕೆ ಹಳೇ ಬೂದನೂರು ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿರುವ ಅಪರೂಪದ ಪ್ರಸಂಗ ವರದಿಯಾಗಿದೆ. ಕರ್ತವ್ಯ ಲೋಪ, ಲಂಚಕ್ಕೆ ಬೇಡಿಕೆ ಮತ್ತು ದುರ್ನಡತೆ ಆರೋಪದಡಿ ತಹಸೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ಎಂಬುವರನ್ನು ಅಮಾನತು ಮಾಡಲಾಗಿದೆ. ತಹಸೀಲ್ದಾರ್ ಅಮಾನತು ಆಗಿದ್ದಕ್ಕೆ ಡಿಸಿ ಅಶ್ವಥಿಗೆ ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮಸ್ಥರು ಜೈಕಾರ ಕೂಗಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಗ್ರಾಮಸ್ಥರು ಸ್ವಂತ ಮನೆಗಾಗಿ ಹಲವು ಬಾರಿ ಹೋರಾಟ ನಡೆಸಿದ್ದಾರೆ. ಆದರೆ, …

Read More »