Breaking News

ದೇವೇಗೌಡರ ಪತ್ನಿ ಚನ್ನಮ್ಮಗೆ ಐಟಿ ನೋಟಿಸ್! ಕಬ್ಬಿನ ಗದ್ದೆಗೆ ಅಧಿಕಾರಿಗಳನ್ನ ಆಹ್ವಾನಿಸಿದ ರೇವಣ್ಣ

Spread the love

ಹಾಸನ: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರಿಗೆ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಈ ಕುರಿತು ಹಾಸನದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್​.ಡಿ.ರೇವಣ್ಣ, ನಮ್ಮ ತಾಯಿಗೆ ಐಟಿ ಅಧಿಕಾರಿಗಳಿಂದ ನೋಟಿಸ್​ ಬಂದಿದೆ.

ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ಹೀಗೆ ಮಾಡ್ತಾರಾ? ದೊಡ್ಡಪುರದ ಬಳಿ ನಮ್ಮ ತಾಯಿ ಹೆಸರಿನ ಜಮೀನಿನಲ್ಲಿ ಕಬ್ಬು ಬೆಳೆದಿದ್ದೀವಿ. ನಮ್ಮ ತಾಯಿಗೆ ಸೇರಿದ ಗದ್ದೆಯಲ್ಲಿ ಕಬ್ಬು ಬೆಳೆದಿದ್ದಕ್ಕೆ ಐಟಿ ನೋಟಿಸ್ ಜಾರಿ ಮಾಡಿದೆ. ಐಟಿ ಅಧಿಕಾರಿಗಳು ಬಂದು ನೋಡ್ಬೇಕು ನಾವು ಎಷ್ಟು ಬೆಳೀತೀವಿ ಅಂತ. ನಮ್ಮ ಜಮೀನನ್ನು ಜಿಲ್ಲಾಧಿಕಾರಿಗಳೇ ಬಂದು ಅಳೆಯಲಿ. ಅಧಿಕಾರಿಗಳು ನೂರಾರು ಕೋಟಿ ಮಾಡುತ್ತಿದ್ದಾರೆ. ಆರ್​ಟಿಒ ಅಧಿಕಾರಿಗಳು 200 ಕೋಟಿ ರೂ. ಮಾಡ್ತಿದ್ದಾರೆ. ಅವರನ್ನ ಬಿಟ್ಟು ಓರ್ವ ಮಾಜಿ ಪ್ರಧಾನಿ ಮನೆಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ