Home / ರಾಷ್ಟ್ರೀಯ (page 431)

ರಾಷ್ಟ್ರೀಯ

ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಗಿಫ್ಟ್‌ ಪಾಲಿಟಿಕ್ಸ್‌ : ತಟ್ಟೆ, ಲೋಟ, ಸ್ಪೂನ್ ಕೊಟ್ಟ MLA ರಘು

ಬೆಂಗಳೂರು : ಮುಂದಿನ ವಿಧಾನ ಸಭೆ ಚುನಾವಣೆ ಹಿನ್ನೆಲೆ ಸಂಕ್ರಾಂತಿ ಹಬ್ಬಕ್ಕೆ ಭರ್ಜರಿ ಗಿಫ್ಟ್‌ ಪಾಲಿಟಿಕ್ಸ್‌ ಶುರುವಾಗಿದ್ದು, ಮನೆಮನೆಗಳಿಗೆ ಸಿವಿ ರಾಮನ್ ನಗರದಲ್ಲಿ ಸ್ಥಳೀಯ ಶಾಸಕ ರಘು ಜನ್ರಿಗೆ ತಟ್ಟೆ, ಲೋಟ, ಸ್ಪೂನ್ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.     ಸಿಲಿಕಾನ್‌ ಸಿಟಿಯ ಕೆಲ ಭಾಗಗಳಲ್ಲಿ ರಾಜಕೀಯ ನಾಯಕರು ಚುನಾವಣೆಗಾಗಿ ಸಕಲ ಸಿದ್ದತೆಯಲ್ಲಿ ತೊಡಗಿದ್ದು, ಜನರಿಗೆ ಗಿಫ್ಟ್‌ ನೀಡುವ ಮೂಲಕ ಮತ ಪಡೆಯೋದಕ್ಕೆ ಮುಂದಾಗಿದ್ದಾರೆ. ಅದರಲ್ಲೂ …

Read More »

IAS ಪಾಸ್​ ಮಾಡಲು ಎಷ್ಟು ಗಂಟೆ ಓದಬೇಕು? ಸೆಲೆಬ್ರಿಟಿ ಅಧಿಕಾರಿ ಟೀನಾ ಡಾಬಿ ಕೊಟ್ಟ ಉತ್ತರ ವೈರಲ್​

ನವದೆಹಲಿ: ಐಎಎಸ್​ ಅಧಿಕಾರಿಯಾಗಲು ದಿನಕ್ಕೆ ಎಷ್ಟು ಗಂಟೆ ಅಧ್ಯಯನ ಮಾಡಬೇಕು ಎಂ ವಿದ್ಯಾರ್ಥಿನಿಯ ಪ್ರಶ್ನೆಗೆ ಸೆಲೆಬ್ರಿಟಿ ಐಎಎಸ್​ ಅಧಿಕಾರಿ ಟೀನಾ ಡಾಬಿ ಅವರು ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.   ಟೀನಾ ಡಾಬಿ ಅವರು ಪ್ರಸ್ತುತ ರಾಜಸ್ಥಾನದ ಜೈಸಲ್ಮೇರ್​ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಯೋನಿರ್​ ಜೈಸನ್ ಶಕ್ತಿ (ಮಹಿಳೆಯರು ಮೊದಲು) ಕಾರ್ಯಕ್ರಮದ ಭಾಗವಾಗಿ ಜೈಸಲ್ಮೇರ್​ನ ಇಂಧಿರಾ ಗಾಂಧಿ ಇಂದೋರ್​ ಸ್ಟೇಡಿಯಂನಲ್ಲಿ ವಿದ್ಯಾರ್ಥಿನಿಯರಿಗೆ ವೃತ್ತಿ ಸಮಾಲೋಚನೆ ಕುರಿತು ಹಮ್ಮಿಕೊಳ್ಳಲಾಗಿದ್ದ …

Read More »

ವೇಷದ ಜತೆಗೆ ಭಾಷೆಯನ್ನೂ ಬದಲಾಯಿಸಿದ್ದ ಸ್ಯಾಂಟ್ರೋ ರವಿ! ಈತನ ಮಾತು ಕೇಳಿ ಪೊಲೀಸರೇ ಅರೆಕ್ಷಣ ಗಲಿಬಿಲಿ

ಮೈಸೂರು: ಅತ್ಯಾಚಾರ, ಪತ್ನಿಗೆ ವಂಚನೆ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಜರಾತ್​ನ ಅಹಮದಾಬಾದ್​ನಲ್ಲಿ ತಲೆಮರೆಸಿಕೊಂಡಿದ್ದ. 11 ದಿನದ ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಮೈಸೂರಿಗೆ ಕರೆತಂದಿದ್ದಾರೆ. ಬಂಧನದ ವೇಳೆಯೂ ಅಹಮದಾಬಾದ್​ನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದ. ಪೊಲೀಸರಿಗೆ ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಆತ ತನ್ನ ವೇಷ ಬದಲಾಯಿಸಿದ್ದು ಮಾತ್ರವಲ್ಲದೆ ಭಾಷೆಯನ್ನೂ ಬದಲಾಯಿಸಿದ್ದ! ತಲೆಯ ವಿಗ್​ ತೆಗೆದು ಮೀಸೆ ಬೋಳಿಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನ ಗುರುತಿರುಸುವುದು ಕಷ್ಟವಾಗಿತ್ತು. …

Read More »

ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರತಂಡದಿಂದ ಸಂಕ್ರಾಂತಿಗೆ ಡಿಫರೆಂಟ್ ವಿಷ್!

ಬೆಂಗಳೂರು: ಯಾವಾಗಲೂ ತನ್ನ ವೈಶಿಷ್ಟ್ಯದೊಂದಿಗೇ ಗಮನ ಸೆಳೆಯುವ ನಟ-ನಿರ್ದೇಶಕ ಉಪೇಂದ್ರ, ಇದೀಗ ತಮ್ಮ ನಿರ್ದೇಶನದ ಹೊಸ ಸಿನಿಮಾ ‘ಯುಐ’ ತಂಡದಿಂದ ಸಂಕ್ರಾಂತಿ ಶುಭಾಶಯ ಕೋರುವುದರಲ್ಲೂ ಡಿಫರೆಂಟ್ ಎನಿಸಿಕೊಂಡಿದ್ದಾರೆ. ರಿಯಲ್​ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾದ ಟೈಟಲ್​ಗಳೇ ಡಿಫರೆಂಟ್ ಆಗಿರುತ್ತವೆ. ಅದೇ ರೀತಿ ಅವರು ನಿರ್ದೇಶನ ಮಾಡುತ್ತಿರುವ ನೂತನ ಸಿನಿಮಾ ಹೆಸರೇ ‘ನಾಮ’ದ ರೂಪದಲ್ಲಿದ್ದು ಘೋಷಣೆ ಆದಾಗಲೇ ಭಾರಿ ಗಮನ ಸೆಳೆಯಲಾಗಿತ್ತು. ದೇವರ ನಾಮದ ರೂಪದಲ್ಲಿ ವಿನ್ಯಾಸ ಮಾಡಲಾಗಿರುವ ಈ ಚಿತ್ರದ ಶೀರ್ಷಿಕೆಯನ್ನು …

Read More »

ಪ್ರಕೃತಿ ಆರಾಧನೆ ಈ ಹಬ್ಬ ಮಕರ ಸಂಕ್ರಾಂತಿ ಈ ದಿನದ ವಿಶೇಷ ಏನು

ಕ್ಯಾಲೆಂಡರ್​ ಪ್ರಕಾರ ವರ್ಷದ ಮೊದಲ ಹಬ್ಬವಾಗಿರುವ ಮಕರ ಸಂಕ್ರಾಂತಿ (Makar Sankranti 2023) ಹಿಂದುಗಳ ಹಬ್ಬವಾಗಿದೆ. ಅದರಲ್ಲೂ ಸಂಕ್ರಾಂತಿಯನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತದೆ. ಪ್ರಕೃತಿ ಆರಾಧನೆ ಈ ಹಬ್ಬ ಭಾಗವಾಗಿದೆ. ಮಕರ ಸಂಕ್ರಾಂತಿಯನ್ನು ಉತ್ತರಾಯಣದ ಹಬ್ಬವೆಂತಲೂ ಕರೆಯುತ್ತಾರೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಕ್ಷಣ ಇದಾಗಿದೆ. ಸಮೃದ್ಧಿಯ ಸಂಕೇತವಾಗಿರುವ ಮಕರ ಸಂಕ್ರಾಂತಿಯನ್ನು ದಾನದ ವಿಶೇಷ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ದಿನ ದಾನ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ. ಉತ್ತರಾಯಣ …

Read More »

ಯತ್ನಾಳ್ ರನ್ನು ಸಹಿಸಿಕೊಂಡಾಯ್ತು, ಇನ್ನು ನಿರ್ಧಾರ ಮಾಡಬೇಕಿದೆ: ಕಿಡಿಕಾರಿದ ನಿರಾಣಿ

ದಾವಣಗೆರೆ: ‘ಪಿಂಪ್ ಸಚಿವ’ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಮುರುಗೇಶ ನಿರಾಣಿ ನೊಂದುಕೊಂಡ ಘಟನೆ ನಡೆಯಿತು. ಯತ್ನಾಳ್ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ನಿರಾಣಿ ಭಾವುಕರಾದರು. ಬಿಜೆಪಿ ಸಂಸ್ಕೃತಿ ಹೊಂದಿರುವ ಪಕ್ಷ, ನಮ್ಮ ಸಮುದಾಯವೂ ಸಂಸ್ಕೃತಿ ಹೊಂದಿದೆ. ಶಾಸಕ ಯತ್ನಾಳ ಅಸಂವಿಧಾನಿಕ ಮಾತುಗಳನ್ನು ಆಡುತ್ತಾರೆ ಸಿದ್ದೇಶ್ವರ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ಬೆಳೆದವರು ನಾವು. ಅವರನ್ನು 0.5 ರಷ್ಟು ನಾವು ಅನುಕರಣೆ ಮಾಡಿದರೂ ಸಾಕು ಎಂದರು. \ …

Read More »

ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಜಾರಿ: ಸಿಎಂ ಬೊಮ್ಮಾಯಿ

ದಾವಣಗೆರೆ: ಮೀಸಲಾತಿ ವಿಚಾರವಾಗಿ ಈಗಾಗಲೇ ಕೆಲಸ ಮಾಡಿದ್ದೇವೆ. ಕ್ಯಾಬಿನೆಟ್ ನಲ್ಲಿ ಪಾಸ್ ಮಾಡಿದ್ದೇವೆ. ತಮಿಳುನಾಡು ಮಾದರಿಯಲ್ಲಿ ನಾವು ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಉಚಿತ ವಿದ್ಯುತ್ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಜನರನ್ನು ಮರಳು ಮಾಡುತ್ತಿದೆ. ಕಾಂಗ್ರೆಸ್ ನವರು ಕ್ರೇಜಿವಾಲ್ ದಾರಿಯಲ್ಲಿ ಹೋಗುತ್ತಿದ್ದಾರೆ. ಕಾಂಗ್ರೆಸ್ ನವರು ಹತಾಶರಾಗಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ …

Read More »

ಆದಿಚುಂಚನಗಿರಿ ಶ್ರೀಗಳು ಬಿಜೆಪಿಯ ಸಿಎಂ ಅಭ್ಯರ್ಥಿಯೇ? ಆರ್.ಅಶೋಕ್ ಹೇಳಿದ್ದೇನು

ಯಡಿಯೂರಪ್ಪನವರು ಸಿಎಂ ಹುದ್ದೆಗೆ ಪದತ್ಯಾಗ ಮಾಡಿದ ಸನ್ನಿವೇಶವನ್ನೊಮ್ಮೆ ಮೆಲುಕು ಹಾಕಿಕೊಳ್ಳೋಣ. ಕರ್ನಾಟಕದ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಬಿಜೆಪಿಯ ವರಿಷ್ಠರು ಕೂಡಾ ಕೊಂಚ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ಅರವಿಂದ್ ಬೆಲ್ಲದ್, ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಳ್ ಯತ್ನಳ್, ಬೊಮ್ಮಾಯಿ ಈ ರೀತಿ ಹಲವು ಹೆಸರುಗಳು ಸಿಎಂ ಅಭ್ಯರ್ಥಿ ಎಂದು ಮುನ್ನಲೆಗೆ ಬರುತ್ತಿತ್ತು. ಆ ಸಂದರ್ಭದಲ್ಲಿ ಮುನ್ನಲೆಗೆ ಬಂದಿದ್ದ ಇನ್ನೊಂದು ಹೆಸರೆಂದರೆ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರದ್ದು. …

Read More »

ಅಮಿತ್ ಶಾ ಒಂಥರಾ ರೌಡಿ ಇದ್ದಂಗೆ, ನಾನೇ ಸಿಎಂ ಆದ್ರೂ ಆದೆ

ಬೆಂಗಳೂರು: ‘ಅಮಿತ್ ಶಾ ಒಂಥರಾ ರೌಡಿ ರೀತಿ. ನಾನೇ ಸಿಎಂ ಆದರೂ ಆದೆ…’ ಎಂದು ಎಂಎಲ್ಸಿ ಸಿ.ಪಿ.ಯೋಗೇಶ್ವರ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಬಿಜೆಪಿಯ ಚಾಣಾಕ್ಷ ಅಮಿತ್​ ಶಾ ಅವರನ್ನ ರೌಡಿ ಎಂದಿರುವ ಮಾತು ಸ್ವಪಕ್ಷಕ್ಕೆ ಭಾರೀ ಮುಜುಗರ ತರಿಸಿದೆ. ಸಿಎಂ ಖುರ್ಚಿ ಮೇಲೆ ಯೋಗೇಶ್ವರ್​ ಕಣ್ಣಿಟ್ಟಿದ್ದಾರೆ ಎಂಬುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಆಪರೇಷನ್​ ಕಮಲಕ್ಕೆ ಜೆಡಿಎಸ್-ಕಾಂಗ್ರೆಸ್​ ಮೈತ್ರಿ ಸರ್ಕಾರ ಬಲಿಯಾಗಿತ್ತು. ಆಡಳಿತಾರೂಢ ಬಿಜೆಪಿ …

Read More »

ತಲೆಯಲ್ಲಿ ಕೂದಲೇ ಇಲ್ಲ ನೀನು ನನ್ನ ಮದುವೆ ಆಗ್ತೀಯಾ?’ ಮದುವೆ ಪ್ರಪೋಸಲ್ ನಿರಾಕರಿಸಿದ ಅನುಶ್ರೀ!

ಸದ್ಯ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮ ದಿನದಿಂದ ದಿನಕ್ಕೆ ವಿವಿಧ ಕಾರಣಕ್ಕೆ ಸುದ್ದಿಯಾಗುತ್ತಿದೆ. ರಾಜ್ಯ ಸರ್ಕಾರದ ಪ್ರಾಯೋಕತ್ವ ಇರುವ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕನ್ನಡದ ನಟ ಹಾಗೂ ನಟಿಯರು ಮಿಂಚಿದ್ದಾರೆ. ಕೇವಲ ಕನ್ನಡ ನಟ ಹಾಗೂ ನಟಿಯರು ಮಾತ್ರವಲ್ಲದೇ ತೆಲುಗಿನ ಕಲಾವಿದರನ್ನೂ ಸಹ ಈ ಕಾರ್ಯಕ್ರಮಕ್ಕೆ ಕರೆಸಲಾಗಿದೆ. ಇನ್ನು ಮೊದಲಿಗೆ ಕಿಚ್ಚ ಸುದೀಪ್, ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. …

Read More »