Breaking News
Home / ರಾಷ್ಟ್ರೀಯ (page 23)

ರಾಷ್ಟ್ರೀಯ

ಅಲ್ಲು ಅರ್ಜುನ್ ಹುಟ್ಟು ಹಬ್ಬಕ್ಕೆ ಬಿಡುಗಡೆಯಾಗಲಿದೆ ‘ಪುಷ್ಪ 2’ ಟೀಸರ್

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2 ದಿ ರೂಲ್’ ಆಗಸ್ಟ್ 15ಕ್ಕೆ ವಿಶ್ವಾದ್ಯಂತ ತೆರೆ ಕಾಣಲಿದ್ದು, ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪುಷ್ಪ ಚಿತ್ರತಂಡ ಇಂದು ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಇದೇ ಏಪ್ರಿಲ್ 8 ಅಲ್ಲು ಅರ್ಜುನ್ ಹುಟ್ಟು ಹಬ್ಬದ ದಿನದಂದೇ ಟೀಸರ್ ರಿಲೀಸ್ ಮಾಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಅಲ್ಲು …

Read More »

ದೆಹಲಿಯಲ್ಲಿ ಪ್ರತಿಪಕ್ಷಗಳ ಸಮಾವೇಶ: ಚುನಾವಣಾ ಆಯೋಗಕ್ಕೆ INDIA ಮೈತ್ರಿಕೂಟದ ನ 5 ಬೇಡಿಕೆಗಳು ಇಂತಿವೆ…

ನವದೆಹಲಿ: ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳ ಸಮಾವೇಶ ಇಂದು ನಡೆದಿದ್ದು, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಆಮ್ ಆದ್ಮಿ ಪಕ್ಷ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಮದ್ಯ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಭೂಹಗರಣದ ಸಂಬಂಧ ಬಂಧನಕ್ಕೆ ಒಳಗಾಗಿರುವ ಜಾರ್ಖಂಡ್ ನ ಮಾಜಿ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಮುಕ್ತಗೊಳಿಸಬೇಕೆಂದು ಪ್ರತಿಪಕ್ಷಗಳು ಈ ಸಭೆಯಲ್ಲಿ ಒತ್ತಾಯಿಸಿವೆ.   ದೇಶದ …

Read More »

ʼಬಿಜೆಪಿ ಸೇರಿದರೆ, ಕೇಸ್ ಕ್ಲೋಸ್ʼ: ಸುದ್ದಿಗೋಷ್ಠಿಯಲ್ಲಿ ವಾಶಿಂಗ್‌ ಮೆಶಿನ್‌ ಪ್ರದರ್ಶಿಸಿ ಬಿಜೆಪಿಯನ್ನು ಲೇವಡಿ ಮಾಡಿದ ಕಾಂಗ್ರೆಸ್‌

ಹೊಸದಿಲ್ಲಿ: ಕಾಂಗ್ರೆಸ್ ತನ್ನ ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿ ವಾಷಿಂಗ್ ಮೆಷಿನ್ ಅನ್ನು ಪ್ರದರ್ಶಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿ ಆಟೋಮ್ಯಾಟಿಕ್‌ ವಾಷಿಂಗ್‌ ಮೆಶೀನ್ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. “ಬಿಜೆಪಿ ಸೇರಿದರೆ, ಕೇಸ್ ಕ್ಲೋಸ್” ಕ್ಲೀನ್‌ ಚಿಟ್‌ ಪಡೆದು ಹೊರ ಬರಬಹುದು ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ ಭ್ರಷ್ಟಾಚಾರದ ಆರೋಪಗಳಿರುವ ವಿಪಕ್ಷ ನಾಯಕರು ಬಿಜೆಪಿಗೆ ಸೇರಿದ ಬಳಿಕ ಆರೋಪ ಮುಕ್ತರಾಗುತ್ತಿರುವ ಬಗ್ಗೆ ಕಾಂಗ್ರೆಸ್‌ ಟೀಕೆ ಮಾಡಿದೆ. ವಾಶಿಂಗ್‌ ಮೆಶೀನ್‌ ನ ಸಾಂಕೇತಿಕ ಪ್ರದರ್ಶನ …

Read More »

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ: ಶರದ್ ಪವಾರ್

ಮುಂಬೈ: ಶಾಂತಿ ಮತ್ತು ಸಹೋದರತ್ವವನ್ನು ಖಚಿತಪಡಿಸಿಕೊಳ್ಳಲು ದೇಶದ ಸಂವಿಧಾನವನ್ನು ರಕ್ಷಿಸುವ ಅಗತ್ಯವಿದೆ ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಹೇಳಿದರು. ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯ ಕೆಲ ನಾಯಕರು ಸಂವಿಧಾನದ ಬದಲಾವಣೆ ಮಾಡುವ ಮಾತುಗಳನ್ನಾಡುತ್ತಿದ್ದಾರೆ.ಇಂತಹ ಹೇಳಿಕೆಗಳು ಕಳವಳಕಾರಿಯಾಗಿದೆ’ ಎಂದು ಸಂಸದ ಅನಂತಕುಮಾರ್‌ ಹೆಗಡೆ ಹೇಳಿಕೆಯನ್ನು ಉಲ್ಲೇಖಿಸಿದರು. ‘ಒಬ್ಬ ವ್ಯಕ್ತಿಯ ಹಿತಕ್ಕಾಗಿ ಇಡೀ ದೇಶದ ಪ್ರಜಾಪ್ರಭುತ್ವವನ್ನೇ ನಾಶಪಡಿಸಿದ ನೆರೆಹೊರೆಯ ಕೆಲ ದೇಶಗಳ ಸ್ಥಿತಿ ನಮ್ಮ ದೇಶಕ್ಕೆ ಎಂದಿಗೂ ಬರಬಾರದು …

Read More »

ಪಕ್ಷಾಂತರಿಗಳಿಗೆ ಕಡಿವಾಣ ಹಾಕದಿದ್ದರೆ ರಾಜಕೀಯ ಶುದ್ಧೀಕರಣ ಅಸಾಧ್ಯ: ಸಿರಿಗೆರೆ ಶ್ರೀ

ಚಿತ್ರದುರ್ಗ: ಪಕ್ಷಾಂತರಗಳಿಗೆ ಕಡಿವಾಣ ಹಾಕದಿದ್ದರೆ ರಾಜಕೀಯ ಶುದ್ಧೀಕರಣ ಅಸಾಧ್ಯ. ಕಾರ್ಯಕರ್ತರ ಅಸಮಾಧಾನ ಹೆಚ್ಚಾಗುತ್ತದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಸದ್ಧರ್ಮ ನ್ಯಾಯ ಪೀಠದಲ್ಲಿ ಮಾತನಾಡಿದ ಶ್ರೀಗಳು, ಪಕ್ಷಾಂತರಗಳಿಗೆ ಕಡಿವಾಣ ಬೀಳದೆ ರಾಜಕೀಯ ಶುದ್ಧೀಕರಣ ಮರೀಚಿಕೆಯಾಗಿದೆ ಎಂದು ಹೇಳಿದ್ದಾರೆ. ರಾಜಕೀಯ ಶುದ್ಧೀಕರಣ ಇಂದಿನ ಅಗತ್ಯವಾಗಿದೆ. ಇದಕ್ಕೆ ಬದ್ಧವಾಗಿರಲು ರಾಜಕಾರಣಿಗಳು ಮುಂದಾಗಬೇಕು. ಪಕ್ಷಾಂತರ ನಿಷೇಧ …

Read More »

ಬಿಳಿ ಕೂದಲಿಗೆ ಇಲ್ಲಿದೆ ಶಾಶ್ವತ ಪರಿಹಾರ; ಪಾರ್ಲರ್​ ಹೋಗ್ಬೇಡಿ ಈ ಎಣ್ಣೆಯನ್ನು ಕಾಫಿಪುಡಿಗೆ ಬೆರೆಸಿ ಹಚ್ಚಿದ್ರೆ ಸಾಕು.

ಬೆಂಗಳೂರು: ಬಿಳಿ ಕೂದಲು ಸಮಸ್ಯೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೆಲಮಿಕಲ್ ಇರುವ ಪ್ರಾಡೆಕ್ಟ್​​ ಬಳಕೆ ಮಾಡುತ್ತೇವೆ. ಆದರೆ ಬಿಳಿಕೂದಲು ಸಮಸ್ಯೆಗೆ ಶಾಶ್ವತವಾದ ಪರಿಹಾರ ಮಾತ್ರ ಸಿಗುವುದು ಕಡಿಮೆ. ಹೀಗಿರುವಾಗ ನಾವು ಇಂದು ಹೇಳುತ್ತಿರುವ ಮನೆ ಮದ್ದಿನಿಂದ ನೀವು ನಿಮ್ಮ ಕೂದಲಿನ ಮಸ್ಯೆಗೆ ಯಾವುದೇ ಹಾನಿ ಇಲ್ಲದೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.   ಕಾಫಿ ಪುಡಿ, ಜೇನುತುಪ್ಪ, 1 ಚಮಚ ತೆಂಗಿನ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಹೇರ್ ಮಾಸ್ಕ್ …

Read More »

ಇಫ್ತಾರ್‌ ಕೂಟಕ್ಕಾಗಿ ರಸ್ತೆಯೇ ಬಂದ್‌!

ಮಂಗಳೂರು : ಇಫ್ತಾರ್‌ (iftar) ಕೂಟಕ್ಕಾಗಿ ಇಡೀ ರಸ್ತೆಯನ್ನೇ ಬಂದ್‌ ಮಾಡಿರುವ ಘಟನೆ ಮಂಗಳೂರಲ್ಲಿ(mangaluru) ನಡೆದಿದೆ. ರಸ್ತೆ ತುಂಬೆಲ್ಲಾ ಚೇರ್‌ ಹಾಕಿ ಒಂದಿಡೀ ರಸ್ತೆಯನ್ನೇ ಬಂದ್‌ ಮಾಡಿ ಆಹಾರ ಸೇವನೆಗೆ ವ್ಯವಸ್ಥೆ ಮಾಡಿರುವ ಕ್ರಮಕ್ಕೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.   ಮಂಗಳೂರಿನ ಮುಡಿಪು ಜಂಕ್ಷನ್‌ನಲ್ಲಿ (mudipu junction) ಈ ರೀತಿ ರಸ್ತೆ ಬ್ಲಾಕ್‌ ಮಾಡಿ ಇಫ್ತಾರ್‌ ಆಯೋಜಿಸಲಾಗಿದೆ. ಇದರ ಪರಿಣಾಮ ಟೂ-ವೇ ಇದ್ದ ರಸ್ತೆ ಒನ್‌-ವೇ ಆಗಿದ್ದು, ವಾಹನಗಳೆಲ್ಲಾ …

Read More »

BJP: ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿಯಿಂದ ಈಶ್ವರಪ್ಪ, ಅನಂತ್‌ ಹೆಗಡೆಗಿಲ್ಲ ಅವಕಾಶ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಟಿಕೆಟ್‌ ವಂಚಿತರಾದ ನಳಿನ್‌ ಕುಮಾರ್‌ ಕಟೀಲು ಹಾಗೂ ಪ್ರತಾಪಸಿಂಹ ಅವರಿಗೆ ಅವಕಾಶ ನೀಡಿದೆ. ಆದರೆ ವರಿಷ್ಠರ ವಿರುದ್ಧ ಮುನಿಸಿಕೊಂಡಿರುವ ಅನಂತ್‌ ಕುಮಾರ್‌ ಹೆಗಡೆ ಹಾಗೂ ಕೆ.ಎಸ್‌.ಈಶ್ವರಪ್ಪ ಅವರನ್ನು ಪರಿಗಣಿಸದೆ ನಿರ್ಲಕ್ಷಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹಿತ 40 ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಕರ್ನಾಟಕದಲ್ಲಿ ಬಿಜೆಪಿ ಪರ …

Read More »

ಬಿಜೆಪಿ ದೂರಿನ ಬೆನ್ನಲ್ಲೇ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ‌ನಿಂಬಾಳ್ಕರ್ ವರ್ಗಾವಣೆ

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ‌ಇಲಾಖೆಯ ನೂತನ ಆಯುಕ್ತರಾಗಿ 2012ರ ಐಎಎಸ್‌ ಬ್ಯಾಚ್ ನ ಸೂರಳ್ಕರ್ ವಿಕಾಸ್ ಕಿಶೋರ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ಗಮಿತ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ನೂತನ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಅವರಿಗೆ ಶನಿವಾರ ಸಂಜೆ ಅಧಿಕಾರ ಹಸ್ತಾಂತರಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾಗಿ ಕರ್ತವ್ಯ …

Read More »

ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ

ಮಂಡ್ಯ: ನಾನು ಮತ್ತು ಅಂಬರೀಶ್‌ ಹಲವು ವರ್ಷಗಳ ಸ್ನೇಹಿತರು. ಸಂಸದೆ ಸುಮಲತಾ ಅವರು ಕೂಡ ನನಗೆ ಊಟ ಬಡಿಸಿದ್ದಾರೆ. ನಾವು ಶಾಶ್ವತ ಶತ್ರುಗಳಲ್ಲ. ಅವರು ನನಗೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ಅವರು ಸೂಕ್ತ ನಿರ್ಧಾರವೊಂದನ್ನು ಘೋಷಿಸಲಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಸಮನ್ವಯ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ಕೆಲಸ ಮಾಡಿದ್ದೇವೆ, ಅದರ ಕೂಲಿ ಕೇಳುತ್ತಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ ನಾವೇನೂ …

Read More »