Home / ರಾಜ್ಯ (page 1558)

ರಾಜ್ಯ

‘ಖಾತೆ ಬದಲಾವಣೆಗೆ ಪಟ್ಟು ಹಿಡಿದವರನ್ನು ಸಂಪುಟದಿಂದ ವಜಾ ಮಾಡಿ’

ಬೆಳಗಾವಿ: ತಮಗೆ ನೀಡಲಾದ ಖಾತೆಗಳ ಗೌಪ್ಯತೆ ಕಾಪಾಡದ ಸಚಿವರನ್ನು ಸಂಪುಟದಿಂದ ವಜಾ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿರುವ ಭೀಮಪ್ಪ ಗಡಾದ ಅವರು, 1992ರಲ್ಲಿ ಸಚಿವರಿಗಾಗಿ ಆಡಳಿತ ಸುಧಾರಣೆ ಸಚಿವಾಲಯದಿಂದ ನೀತಿ ಸಂಹಿತೆ ಜಾರಿ ಮಾಡಲಾಗಿದೆ. ಆದರೆ ಸಚಿವರಾದ ಆನಂದ ಸಿಂಗ್, ಎಂಟಿಬಿ ನಾಗರಾಜ್, ಶ್ರೀರಾಮುಲು, ಶಶಿಕಲಾ ಜೊಲ್ಲೆ ಪ್ರಬಲ ಖಾತೆಗಳಿಗಾಗಿ ಲಾಬಿ ಮಾಡಿ ನೀತಿ ಸಂಹಿತೆಯಲ್ಲಿನ ಕ್ರಮ ಸಂಖ್ಯೆ 13 …

Read More »

ಆ.23ರಿಂದ ಶಾಲಾ-ಕಾಲೇಜು ಪ್ರಾರಂಭ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬೆಂಗಳೂರು,ಆ.12-ಕೋವಿಡ್ ಸೋಂಕು ಉಲ್ಬಣವಾಗದಿದ್ದರೆ ಈಗಾಗಲೇ ಪ್ರಕಟಿಸಿರುವಂತೆ ಶಾಲಾಕಾಲೇಜುಗಳನ್ನು ಆ.23ರಿಂದ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಗ್ರಂಥಾಲಯ ದಿನಾಚರಣೆ ಅಂಗವಾಗಿ ಕಬ್ಬನ್ ಉದ್ಯಾನವನದಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದದರು. ಮಕ್ಕಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದೇನೆ. ಯಾವ ವಯಸ್ಸಿನವರಲ್ಲಿ ಸೋಂಕು ಹೆಚ್ಚಾಗುತ್ತಿದೆ ಮತ್ತು ಅದರ ತೀವ್ರತೆ ಬಗ್ಗೆ …

Read More »

ಗೊಂದಲಗಳನ್ನು ನಿಭಾಯಿಸಲು ಸಿಎಂ ಬೊಮ್ಮಾಯಿ ಸಮರ್ಥರಿದ್ದಾರೆ : ದೇವೇಗೌಡರು

ನವದೆಹಲಿ,ಆ.12-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೊಂದಲಗಳನ್ನು ನಿಭಾಯಿಸಲು ಸಮರ್ಥರಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ ಗೊಂದಲಗಳನ್ನು ನಿಭಾಯಿಸಲು ಮುಖ್ಯಮಂತ್ರಿ ಸಮರ್ಥರಿದ್ದಾರೆ ಎಂದುಕೊಂಡಿದ್ದೇನೆ. ಬೊಮ್ಮಾಯಿ ಅವರು ಮತ್ತು ನಾನು ಉತ್ತಮ ಗೆಳೆಯರು. ಮುಖ್ಯಮಂತ್ರಿಯಾದ ಬಳಿಕ ನನ್ನ ಮನೆಗೆ ಬಂದಿದ್ದರು. ಆಗ ರಾಜ್ಯ ಸರ್ಕಾರಕ್ಕೆ ನಮ್ಮಿಂದ ಏನೂ ತೊಂದರೆಯಾಗುವುದಿಲ್ಲ. ನೆಲ-ಜಲ …

Read More »

ಡಾ.ರಾಜ್ ಸಮಾಧಿಗೆ ಸಚಿವ ಸುನಿಲ್ ಕುಮಾರ್ ಪುಷ್ಪ ನಮನ

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ ಸುನಿಲ್ ಕುಮಾರ್ ಅವರು ಇಂದು ಕನ್ನಡದ ಮೇರುನಟ ಡಾ. ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.ನಂತರ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ಸಮಾಧಿಗೂ ಗೌರವಾರ್ಪಣೆ ಮಾಡಿದರು.ಇದೇ ಸಂದರ್ಭದಲ್ಲಿ ಡಾ. ಅಂಬರೀಶ್ ಅವರ ಸಮಾಧಿ ಸ್ಥಳಕ್ಕೆಕೂಡ ಭೇಟಿ ನೀಡಿದ ಸಚಿವ ವಿ ಸುನಿಲ್ ಕುಮಾರ್ ಅಂಬರೀಶ್ ಸಮಾಧಿಗೆ ಪುಷ್ಪ ನಮನ …

Read More »

ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದವರಿಗೆ ಮಾತ್ರ ಮಾಲ್ ಪ್ರವೇಶಕ್ಕೆ ಅನುಮತಿ

ಮುಂಬೈ: ಕೋವಿಡ್ ಲಸಿಕೆಯ ಎರಡು ಡೋಸ್ ಗಳನ್ನು ಪಡೆದವರಿಗೆ ಮಾತ್ರ ಮುಂಬೈ ಹಾಗೂ ಮಹಾರಾಷ್ಟ್ರದ ಇತರ ನಗರಗಳಲ್ಲಿನ ಮಾಲ್‌ಗಳಿಗೆ ಪ್ರವೇಶಿಸಲು ಅನುಮತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇಂದು ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ, ಆಗಸ್ಟ್ 15 ರಿಂದ ಸರಕಾರವು ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಿದೆ ಎಂದು ಹೇಳಿದರು. “ಡಬಲ್ ಡೋಸ್ ಪಡೆದಿರುವ ಜನರು ಸ್ಥಳೀಯ ರೈಲುಗಳನ್ನು ಹತ್ತಬಹುದು. ರಾಜ್ಯ ಸರಕಾರವು …

Read More »

ವಾಹನ ಸವಾರರೇ ಎಚ್ಚರ! ಇನ್ಮುಂದೆ ಹೈವೇನಲ್ಲಿ ಸ್ಪೀಡ್​​ ಆಗಿ ಓಡಿಸಿದ್ರೆ ಬೀಳುತ್ತೇ ಭಾರೀ ದಂಡ

ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೂಕ್ತ ಕ್ಯಾಮರಾಗಳ ಅಳವಡಿಕೆಗೆ ಕೇಂದ್ರ ಸಾರಿಗೆ ಇಲಾಖೆ ಮುಂದಾಗಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಹೆದ್ದಾರಿಗಳಲ್ಲೂ ಸಾರಿಗೆ ಇಲಾಖೆ ಕ್ಯಾಮರಾ ಅಳವಡಿಕೆ ಅಗತ್ಯ ತಯಾರಿ ನಡೆಸಿಕೊಂಡಿದೆ. ಇನ್ಮುಂದೆ ಒಂದು ವೇಳೆ ಸವಾರರು ಅಗತ್ಯಕ್ಕಿಂತ ವೇಗವಾಗಿ ವಾಹನ ಚಲಾಯಿಸಿದರೆ ದಂಡ ತೆರಲೇಬೇಕಾಗುತ್ತದೆ. ಹೌದು, ವಾಹನ ಸವಾರರು ಇನ್ಮುಂದೆ ಎಚ್ಚರಿಕೆಯಿಂದ ಇರಲೇಬೇಕು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಪೀಡ್​​ ಆಗಿ ವಾಹನ ಓಡಿಸುವ ಮುನ್ನ ಎರಡು ಬಾರಿ …

Read More »

ವೈದ್ಯನ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪ; ಕ್ಲಿನಿಕ್ ಎದುರು ಶವ ಇಟ್ಟು ಯುವಕನ ಕುಟುಂಬಸ್ಥರ ಧರಣಿ

ಮಂಡ್ಯ: ವೈದ್ಯರೊಬ್ಬರ ನಿರ್ಲಕ್ಷ್ಯದಿಂದ ಯುವಕ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿ, ಕ್ಲಿನಿಕ್ ಎದುರು ಶವ ಇಟ್ಟು ಯುವಕನ ಕುಟುಂಬಸ್ಥರು ಧರಣಿ ನಡೆಸಿದ್ದಾರೆ. ಮಂಡ್ಯದ ವಿವಿ ಫಾರಂ ಬಳಿಯ ಕ್ಲಿನಿಕ್ ಎದುರು ಈ ಪ್ರತಿಭಟನೆ ನಡೆದಿದೆ. ಚಂದಗಾಲು ಗ್ರಾಮದ ನಿಶಾಂತ್(17) ಮೃತ ದುರ್ದೈವಿ. 2 ದಿನದ ಹಿಂದೆ ಜ್ವರ ಹಿನ್ನೆಲೆ ನಿಶಾಂತ್ ಕ್ಲಿನಿಕ್‌ಗೆ ಬಂದಿದ್ದ. ಈ ವೇಳೆ ಕ್ಲಿನಿಕ್‌ನ ವೈದ್ಯರೊಬ್ಬರು ನಿಶಾಂತ್‌ಗೆ ಇಂಜೆಕ್ಷನ್ ನೀಡಿದ್ದರು. ಆದರೆ ನಿಶಾಂತ್‌ಗೆ ಜ್ವರ ಕಡಿಮೆಯಾಗುವ ಬದಲು ಹೆಚ್ಚಾದ …

Read More »

ರಾಜ್ಯದಲ್ಲಿ ಲಸಿಕೆ ಕೊರತೆ: ಜನಸಾಮಾನ್ಯರ ಪರದಾಟ

ರಾಜಧಾನಿಯಲ್ಲಿ ವ್ಯಾಕ್ಸಿನ್ ಗೆ ಅಭಾವ ಶುರುವಾಗಿದೆ. ಯಾವುದೇ ವ್ಯಾಕ್ಸಿನ್ ಸೆಂಟರ್ ನೋಡಿದರೆ ಲಸಿಕೆ ಲಭ್ಯವಿಲ್ಲ ಅನ್ನುವ ಬೋರ್ಡ್ ಹಾಕಿದ್ದಾರೆ. ಇದ್ದರಿಂದಾಗಿ ಜನಸಾಮಾನ್ಯರು ನಿತ್ಯ ಲಸಿಕೆಗಾಗಿ ಪರದಾಡುವಂತೆಯಾಗಿದೆ. ಬೆಂಗಳೂರಿನ ನಗರದ ಕೆಸಿ ಜನರಲ್ ನ ಕೋವಿಡ್ ಕೇರ್ ಸೆಂಟರ್ ನಲ್ಲಂತೂ ನಿತ್ಯವು ಜನವೋ ಜನ. ರಸ್ತೆ ಉದ್ದಕ್ಕೂ ಜನರು ಸಾಲುಗಟ್ಟಿ ನಿಂತಿರುತ್ತಾರೆ. ಆದರೂ ಲಸಿಕೆ ಮಾತ್ರ ಸಿಗುವುದಿಲ್ಲ. ಕೆಲವರಿಗೆ ಅಂದ್ರೆ ದಿನಕ್ಕೆ 50 ರಿಂದ 60 ಜನರಿಗೆ ಮಾತ್ರ ಲಸಿಕೆ ಲಭ್ಯವಾಗುತ್ತೆ. …

Read More »

ರಾಜ್ಯಸಭೆ ಸಚೇತಕರಾಗಿ ಕರ್ನಾಟಕದ ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಸೈಯ್ಯದ್ ನೇಮಕ

ಕರ್ನಾಟಕ ಸಂಸದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ವಾರಗಳ ನಂತರ, ರಾಜ್ಯದ ಮತ್ತೊಬ್ಬ ಸಂಸದ ಡಾ. ಸೈಯದ್ ನಸೀರ್ ಹುಸೇನ್ ಅವರನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಚೇತಕರಾಗಿ ನೇಮಕ ಮಾಡಲಾಗಿದೆ. ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಕರ್ನಾಟಕದ ಸಂಸದರಾಗಿದ್ದು, ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ 38 ಸದಸ್ಯರನ್ನು ಹೊಂದಿದೆ. ಮುಖ್ಯ ಸಚೇತಕ ಮತ್ತು ಸಚೇತಕ ಈ ಇಬ್ಬರೂ ಕಾಂಗ್ರೆಸ್ ಸದಸ್ಯರು ಮತ್ತು …

Read More »

ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಜೀವನ ರೂಪಿಸಿಕೊಳ್ಳೋ ಕನಸು ಕಂಡಿದ್ದ ಅಂಗನವಾಡಿ ಶಿಕ್ಷಕಿಯ ಪ್ರೇಮಿ ಹತ್ಯೆ; ಮಾಜಿ ಪತಿ ಸೇರಿ 3 ಅರೆಸ್ಟ್

ರಾಯಚೂರು: ಜಿಲ್ಲೆಯ ಅಂಗನವಾಡಿ ಶಿಕ್ಷಕಿಯ ಲವ್ವಿ ಡವ್ವಿ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಗುಂಡಪ್ಪ, ಮೌನೇಶ ಮತ್ತು ಕನಕಪ್ಪರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಡಿವೋರ್ಸ್ ನೀಡಿದ್ದ ಪತ್ನಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದ ಎಂಬ ಕಾರಣಕ್ಕೆ ಗುಂಡಪ್ಪ ಮೌನೇಶನಾಯಕನನ್ನು ಕೊಲೆ ಮಾಡಿದ್ದು ಸದ್ಯ ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಘಟನೆ ಹಿನ್ನೆಲೆ 7 ವರ್ಷಗಳ ಹಿಂದೆ ಗುಂಡಪ್ಪ ವಿಜಯಲಕ್ಷ್ಮೀಯನ್ನ ಮದ್ವೆಯಾಗಿದ್ದ. ಆದ್ರೆ ಸಂಸಾರದಲ್ಲಿ ಸಾಮರಸ್ಯ ಇಲ್ಲದೆ ಗುಂಡಪ್ಪ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದ. …

Read More »