Breaking News

ʻಪಾಕಿಸ್ತಾನಿ ಔಟ್ ಫಿಟ್ʼ ಧರಿಸಿ ಬನ್ನಿ – ವಿವಾದದ ಬಳಿಕ ಬೆಂಗ್ಳೂರಲ್ಲಿ ಆಯೋಜಿಸಿದ್ದ ದರ್-ಎ-ನಿಜಾತ್‌ ಕಾರ್ಯಕ್ರಮ ರದ್ದು

Spread the love

ಬೆಂಗಳೂರು: ನಗರದ ಫ್ರೇಝರ್ ಟೌನ್‌ನಲ್ಲಿ ಆಯೋಜಿಸಲಾಗಿದ್ದ DAR-E-NIJAATH (ಮೋಕ್ಷದ ಬಾಗಿಲು) ಕಾರ್ಯಕ್ರಮಕ್ಕೆ ಪಾಕಿಸ್ತಾನಿ ಔಟ್ ಫಿಟ್ ಧರಿಸಿ ಬರುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ವಿವಾದ ಭುಗಿಲೆದ್ದ ಬೆನ್ನಲ್ಲೇ ಕಾರ್ಯಕ್ರಮವನ್ನು ರದ್ದು ಮಾಡಿ ಪೊಲೀಸ್ ಕಮಿಷನರ್ ಆರ್.ಹೀತೇಂದ್ರ ಅವರು ಆದೇಶ ಹೊರಡಿಸಿದ್ದಾರೆ.

ನ.28 ರಂದು ದರ್-ಎ-ನಿಜಾತ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸ್ಕ್ರೀಮಿಂಗ್ ನೈಟ್ ಕಾರ್ಯಕ್ರಮಕ್ಕೆ ಪಾಕಿಸ್ತಾನಿ ಔಟ್ ಫಿಟ್ ಧರಿಸಿ ಬನ್ನಿ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿಸಲಾಗಿತ್ತು. ಅಲ್ಲದೇ 1999 ರೂ. ಎಂಟ್ರಿ ಫೀಸ್ ಇಡಲಾಗಿತ್ತು. ಪಾರ್ಟಿಗೆ ಬರುವವರು ಪಾಕಿಸ್ತಾನಿ ಔಟ್ ಫಿಟ್ ಧರಿಸಿ ಬರಲು ಸೂಚಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಕಾರ್ಯಕ್ರಮಕ್ಕೆ ಪೊಲೀಸರು ಹೇಗೆ ಅನುಮತಿ ನೀಡಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದರು. ಇದರಿಂದ ಎಚ್ಚೆತ್ತ ಪೊಲೀಸ್‌ ಇಲಾಖೆ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದು, ಕಾರ್ಯಕ್ರಮ ರದ್ದು ಮಾಡಿ ಆದೇಶ ಹೊರಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀಫ್ ಪೊಲೀಸ್ ಕಮಿಷನರ್ ಆರ್.ಹೀತೇಂದ್ರ ಅವರು, ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು – 2 ವಾರಗಳಲ್ಲಿ ಶರಣಾಗುವಂತೆ ಸುಪ್ರೀಂ ಸೂಚನೆ

Spread the loveನವದೆಹಲಿ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ  ಹೈಕೋರ್ಟ್ ಬೇಲ್ ಮೇಲೆ ಹೊರಗೆ ಬಂದಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ