Breaking News

ರಾಜಕೀಯ

ಇಂದು ಮತ್ತೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ : ನಾಳೆ ಬೆಂಗಳೂರಿನಲ್ಲಿ `ಏರೋ ಇಂಡಿಯಾ-2023′ ಉದ್ಘಾಟನೆ

ಬೆಂಗಳೂರು : ಫೆಬ್ರವರಿ 13 ರ ನಾಳೆಯಿಂದ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಏರ್​ಶೋ ವೈಮಾನಿಕ ಪ್ರದರ್ಶನ ನಡೆಯಲಿದೆ. ಹೀಗಾಗಿ ನಗರದ ಹಲವು ರಸ್ತೆಗಳಲ್ಲಿ ಕೆಲವೊಂದು ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಬೆಂಗಳೂರು ನಗರದ ಯಲಹಂಕ ವಾಯುಸೇನಾ ನೆಲೆಯಲ್ಲ ದಿ:13-02-2023 ರಿಂದ 17-02-2023 ರವರೆಗೆ ಪ್ರತಿಷ್ಠಿತ ಏರೋ ಇಂಡಿಯಾ-2023 ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ದಿ:13- 02-2023 ರ ಬೆಳಗ್ಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಗಳು, ರಾಷ್ಟ್ರೀಯ ಮತ್ತು …

Read More »

ಹಿಂದೂ-ಮುಸ್ಲಿಂ ಬೇಧ ಮಾಡುವವರನ್ನು ಮನೆಯಲ್ಲಿ ಕುಳ್ಳಿರಿಸಿ: ಜನಾರ್ದನ ರೆಡ್ಡಿ

ಗಂಗಾವತಿ: ಗಂಗಾವತಿ ನಗರ ಮತ್ತು ಕ್ಷೇತ್ರದಾದ್ಯಂತ ಕೆಲವರು ಹಿಂದೂ-ಮುಸ್ಲಿಂ ಬೇಧಭಾವ ಮಾಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಂಡು ಗೆಲುವು ಪಡೆದು ಸ್ವಾರ್ಥ ಸಾಧಿಸುತ್ತಿದ್ದು ಕ್ಷೇತ್ರದ ಮತದಾರರು ಅಂತವರನ್ನು ಮನೆಯಲ್ಲಿ ಕುಳ್ಳಿರಿಸುವ ಮೂಲಕ ಎಲ್ಲರಿಗೂ ಆದ್ಯತೆ ನೀಡುವವರನ್ನು ಗೆಲ್ಲಿಸಿ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡುವಂತೆ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮನವಿ ಮಾಡಿದರು.   ಅವರು ನಗರದ ಸಂತೆಬಯಲು-ಮಹೆಬೂಬನಗರದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ …

Read More »

ಪ್ರಧಾನಿ ಮೋದಿಯವರಿಗೆ ದುರಹಂಕಾರವಿದೆ:ಸಂಸತ್ತಿನ ಒಳಗೆ ಅಥವಾ ಹೊರಗೆ ವಾಕ್ ಸ್ವಾತಂತ್ರ್ಯವಿಲ್ಲ.ಖರ್ಗೆ

ನವದೆಹಲಿ : ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೇಶದಲ್ಲಿ ವಾಕ್ ಸ್ವಾತಂತ್ರ್ಯವಿಲ್ಲ ಎಂದು ಶನಿವಾರ ಆರೋಪಿಸಿದ್ದಾರೆ. ಜಾರ್ಖಂಡ್‌ನ ಸಾಹೇಬ್‌ಗಂಜ್ ಜಿಲ್ಲೆಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಸಂಸತ್ತಿನಲ್ಲಿ ಮಾಡಿದ ಭಾಷಣದ ಭಾಗಗಳನ್ನು ತೆಗೆದುಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.   ”ಸಂಸತ್ತಿನ ಒಳಗೆ ಅಥವಾ ಹೊರಗೆ ವಾಕ್ ಸ್ವಾತಂತ್ರ್ಯವಿಲ್ಲ. ಯಾರಾದರೂ ಸತ್ಯವನ್ನು ಮಾತನಾಡಿದರೆ, ಅದರ ಬಗ್ಗೆ ಬರೆದರೆ, ತೋರಿಸಿದವರನ್ನು ಬಿಜೆಪಿಯವರು ಕಂಬಿ ಹಿಂದೆ …

Read More »

2 ವಿಭಾಗಗಳ 33 ಕ್ಷೇತ್ರಗಳನ್ನು ಗೆಲ್ಲಲು ಅಮಿತ್ ಶಾ ಸೂತ್ರ ; ಮಂಗಳೂರಿನಲ್ಲಿ ಮಹತ್ವದ ಸಭೆ

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ರಣತಂತ್ರಗಳನ್ನು ರೂಪಿಸಿರುವ ಬಿಜೆಪಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.   ಬಿಜೆಪಿಯ ಶಿವಮೊಗ್ಗ, ಮಂಗಳೂರು ವಿಭಾಗಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಿ, ನಾಯಕರಿಗೆ ಚುನಾವಣೆ ಸಂಬಂಧಿಸಿ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ , ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ …

Read More »

“ಕಾಂಗ್ರೆಸ್‌ಗೆ ಪ್ರಜಾಧ್ವನಿ ಬಸ್‌ನಲ್ಲಿರುವಷ್ಟೇ ಸ್ಥಾನ’: ಅಶ್ವತ್ಥ ನಾರಾಯಣ

 ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಬಸ್‌ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಾರೋ ಅಷ್ಟೇ ಸೀಟು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಿಗಲಿದೆ ಎಂದು ಸಚಿವ ಡಾ| ಅಶ್ವತ್ಥ ನಾರಾಯಣ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರಲಿದೆ. ಇಡೀ ದೇಶದಲ್ಲೇ ಕಾಂಗ್ರೆಸ್‌ ಮುಕ್ತವಾಗಿದೆ. ಎಲ್ಲ ರಾಜ್ಯಗಳೂ ಕಾಂಗ್ರೆಸ್‌ ಮುಕ್ತವಾಗುತ್ತಿದೆ. ನಮ್ಮ ರಾಜ್ಯವೂ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಕ್ತವಾಗಲಿದೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ …

Read More »

ಮಂಗಳನಲ್ಲಿ ನೀರು: ಮತ್ತೊಂದು ಸಾಕ್ಷ್ಯ

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿದ್ದ ಸರೋವರದ ಅಲೆಗಳೇ ಕಲ್ಲುಗಳಾಗಿ ಮಾರ್ಪಾಡಾಗಿರುವ ಚಿತ್ರವನ್ನು ನಾಸಾದ ರೋವರ್‌ ಒಂದು ಸೆರೆ ಹಿಡಿದಿದೆ. ಈ ಮೂಲಕ ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರಿತ್ತು ಎನ್ನುವ ವಾದಗಳಿಗೆ ಮತ್ತೊಂದು ಪುಷ್ಟಿ ಸಿಕ್ಕಿದಂತಾಗಿದೆ.   ಮಂಗಳನಲ್ಲಿ ಸಂಚರಿಸುತ್ತಿರುವ ನಾಸಾದ “ಕ್ಯೂರಿಯಾಸಿಟಿ ರೋವರ್‌’, “ಸಲ್ಫೆಟ್‌-ಬಿಯರಿಂಗ್‌ ಯೂನಿಟ್‌’ ಎನ್ನುವ ಪ್ರದೇಶದಲ್ಲಿ ಸಂಚರಿಸುತ್ತಿರುವ ವೇಳೆ ಕೆಲವು ಚಿತ್ರಗಳನ್ನು ಸೆರೆ ಹಿಡಿದೆ. ಇದು ಪರ್ವತ ಸಾಲಿನಲ್ಲಿರುವ ಪ್ರದೇಶವಾಗಿದ್ದು,ಚಿತ್ರಗಳು ಆ ಪ್ರದೇಶದಲ್ಲಿ ಪುರಾತನ ಸರೋವರವಿತ್ತು ಎನ್ನುವುದಕ್ಕೆ …

Read More »

ಕುಂದರಗಿ ಮಹಾಲಕ್ಷ್ಮಿ ಜಾತ್ರೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ವಿಧಾನ ಪರಿಷತ್ ಸದಸ್ಯರಾದಲಖನ ಜಾರಕಿಹೊಳಿ

ಗೋಕಾಕ: ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರೆಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭೇಟಿ ನೀಡಿದ್ದಾರೆ.   ಜಾತ್ರೆಯ ಸಂಭ್ರಮ ಜಿಲ್ಲೆ ಯಾದ್ಯಂತ ಸುಮಾರ ಕಡೆ ಗ್ರಾಮ ದೇವಿಯ ಜಾತ್ರೆಗಳು ನಡಿತಿವೆ. ಲಖನ ಜಾರಕಿಹೊಳಿ ಅವರು ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದು ದೇವರ ಕೃಪೆಗೆ ಪಾತ್ರ ರಾಗಿದ್ದಾರೆ. ಗ್ರಾಮದ ವಿಶೇಷ ಕುಂದು ಕೊರತೆಗಳ ಹಾಗೂ ದೇವಿಯ ಜಾತ್ರೆಗೆ ಬೇಕಾಗುವು ವ್ಯವಸ್ಥೆ ಬಗ್ಗೆ ಗಮನ ಹರಿಸಿ …

Read More »

ಅಧಿಕಾರವಿದ್ದಾಗ ಖಾನಾಪುರದ ಜನರಿಗಾಗಿ ಏನನ್ನೂ ಮಾಡದ ಕಾಂಗ್ರೆಸ್ ಮತ್ತು ಜೆಡಿಎಸ್ : ಸೋನಾಲಿ ಸರ್ನೋಬತ್

ಬೆಳಗಾವಿ :  ಅಧಿಕಾರವಿದ್ದಾಗ ಖಾನಾಪುರದ ಜನರಿಗಾಗಿ ಏನನ್ನೂ ಮಾಡದ ಕಾಂಗ್ರೆಸ್ ಮತ್ತು ಜೆಡಿಎಸ್ ಈಗ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಯಾತ್ರೆಯ ನೆಪ ಮಾಡಿಕೊಂಡು ಜನರ ಬಳಿ ಬರುತ್ತಿವೆ ಎಂದು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಗ್ರಾಮೀಣ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಟೀಕಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಖಾನಾಪುರ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡದ ಕಾಂಗ್ರೆಸ್ ಶಾಸಕರು ಹಾಥ್ ಸೇ ಹಾಥ್ ಜೋಡೋ ಎನ್ನುತ್ತ …

Read More »

ಫೆಬ್ರವರಿ ಕೊನೆಯ ವಾರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ: ಸಿದ್ದರಾಮಯ್ಯ

ವಿಜಯಪುರ: ಫೆಬ್ರವರಿ ಕೊನೆಯ ವಾರದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಶನಿವಾರ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನಡೆಸಿರುವ ಮೂರು ಸಮೀಕ್ಷೆ ಆಧಾರದಲ್ಲಿ ಗೆಲ್ಲುವ ಶಕ್ತಿ ಇರುವವರಿಗೆ ಟಿಕೆಟ್ ನೀಡಲಾಗುತ್ತದೆ ಎಂದರು.   150 ಕ್ಷೇತ್ರಗಳಲ್ಲಿ ವಿಜಯ ಸಾಧಿಸುವ ಗುರಿಯೊಂದಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಟಿಕೆಟ್ ನೀಡಲಾಗುತ್ತದೆ. ಗೆಲ್ಲುವ …

Read More »

ಕಾಂಕ್ರೀಟ್ ಲಾರಿಯೊಂದು ಬೈಕ್ ಗೆ ರಭಸವಾಗಿ ಡಿಕ್ಕಿ ಸ್ಥಳದಲ್ಲಿಯೇಸಾವನ್ನಪ್ಪಿದ ಮಹಿಳೆ

ಕಾಂಕ್ರೀಟ್ ಲಾರಿಯೊಂದು ಬೈಕ್ ಗೆ ರಭಸವಾಗಿ ಡಿಕ್ಕಿ ಹೊಡೆದು ಮಹಿಳೆಯೋರ್ವಳ ಮೇಲೆ ಹರಿದು ಪರಿಣಾಮವಾಗಿ ಸ್ಥಳದಲ್ಲಿಯೇ ಭೀಕರವಾಗಿ ಸಾವನ್ನಪ್ಪಿದ ಘಟನೆ ನಗರದ ನೂರಾನಿ ಮಾರ್ಕೆಟ್ ಬಳಿ ಇಂದು ಸಂಭವಿಸಿದೆ. ಮಹಿಳೆಯ ತಲೆಯ ಮೇಲೆ ಹರಿದು ಛಿದ್ರ ಛಿದ್ರವಾಗಿದ್ದು, ಮಹಿಳೆಯ ಹೆಸರು‌ ತಿಳಿದು ಬಂದಿಲ್ಲ. ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಹಿಳೆಯ ಜೊತೆಗೆ ಇದ್ದ ವ್ಯಕ್ತಿಯೋರ್ವನಿಗೆ ಗಂಭೀರವಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. …

Read More »