Breaking News
Home / ರಾಜಕೀಯ / ಮಂಗಳನಲ್ಲಿ ನೀರು: ಮತ್ತೊಂದು ಸಾಕ್ಷ್ಯ

ಮಂಗಳನಲ್ಲಿ ನೀರು: ಮತ್ತೊಂದು ಸಾಕ್ಷ್ಯ

Spread the love

ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿದ್ದ ಸರೋವರದ ಅಲೆಗಳೇ ಕಲ್ಲುಗಳಾಗಿ ಮಾರ್ಪಾಡಾಗಿರುವ ಚಿತ್ರವನ್ನು ನಾಸಾದ ರೋವರ್‌ ಒಂದು ಸೆರೆ ಹಿಡಿದಿದೆ. ಈ ಮೂಲಕ ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರಿತ್ತು ಎನ್ನುವ ವಾದಗಳಿಗೆ ಮತ್ತೊಂದು ಪುಷ್ಟಿ ಸಿಕ್ಕಿದಂತಾಗಿದೆ.

 

ಮಂಗಳನಲ್ಲಿ ಸಂಚರಿಸುತ್ತಿರುವ ನಾಸಾದ “ಕ್ಯೂರಿಯಾಸಿಟಿ ರೋವರ್‌’, “ಸಲ್ಫೆಟ್‌-ಬಿಯರಿಂಗ್‌ ಯೂನಿಟ್‌’ ಎನ್ನುವ ಪ್ರದೇಶದಲ್ಲಿ ಸಂಚರಿಸುತ್ತಿರುವ ವೇಳೆ ಕೆಲವು ಚಿತ್ರಗಳನ್ನು ಸೆರೆ ಹಿಡಿದೆ. ಇದು ಪರ್ವತ ಸಾಲಿನಲ್ಲಿರುವ ಪ್ರದೇಶವಾಗಿದ್ದು,ಚಿತ್ರಗಳು ಆ ಪ್ರದೇಶದಲ್ಲಿ ಪುರಾತನ ಸರೋವರವಿತ್ತು ಎನ್ನುವುದಕ್ಕೆ ಪುರಾವೆ ಒದಗಿಸಿವೆ. ತೀರಾ ಆಳವಿಲ್ಲದ ಸಮುದ್ರ ಕಾಲಾಂತರದಲ್ಲಿ ಒಣಗಿ ಹೋಗಿದ್ದು, ಬಳಿಕ ಅಲೆಗಳೇ ಬಂಡೆಗಳಾಗಿ ಮಾರ್ಪಾಡಾಗಿವೆ ಎಂದು ನಾಸಾ ಹೇಳಿದೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ