Home / ರಾಜಕೀಯ (page 518)

ರಾಜಕೀಯ

ಎರಡನೇ ರೈಲ್ವೆ ಗೇಟ್ ಸಮೀಪದ ಹೆರವಾಡ್ಕರ್ ಶಾಲೆಯ ಬಳಿ ಟಾಟಾ ಓಮಿನಿ, ಟಾಟಾ ಏಸ್ ಸೇರಿ ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿದೆ.

ಬೆಳಗಾವಿ: ನಗರದ ಎರಡನೇ ರೈಲ್ವೆ ಗೇಟ್ ಸಮೀಪದ ಹೆರವಾಡ್ಕರ್ ಶಾಲೆಯ ಬಳಿ ಟಾಟಾ ಓಮಿನಿ, ಟಾಟಾ ಏಸ್ ಸೇರಿ ನಾಲ್ಕು ವಾಹನಗಳು ಬೆಂಕಿಗಾಹುತಿಯಾಗಿದೆ. ಹೌದು ಮೊದಲು ಆಕಸ್ಮಿಕವಾಗಿ ಒಂದು ವಾಹನಕ್ಕೆ ಬೆಂಕಿ ತಗುಲಿದ್ದು, ಬಳಿಕ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಬೆಂಕಿ ವ್ಯಾಪಿಸಿದ ಪರಿಣಾಮ ನಾಲ್ಕು ವಾಹನಗಳು ಹೊತ್ತಿ ಉರಿದಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ …

Read More »

ಸಿದ್ದಣ್ಣ ಅಂದ್ರೆ ಈ ವಿಶೇಷ ಚೇತನ ಯುವಕನಿಗೂ ಎಷ್ಟು ಪ್ರೀತಿ ನೋಡಿ;

ಸಿದ್ದಣ್ಣ ಅಂದ್ರೆ ಈ ವಿಶೇಷ ಚೇತನ ಯುವಕನಿಗೂ ಎಷ್ಟು ಪ್ರೀತಿ ನೋಡಿ; ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ ಸಂಪೂರ್ಣ ಬಹುಮತದಿಂದ ಗೆದ್ದುಬೀಗಿದೆ. ಅದರಂತೆ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದು, ಇಂದು(ಮೇ.19) ಸಿದ್ದಣ್ಣ ಅವರ ಮನೆ ಮುಂದೆ ಒಬ್ಬ ವಿಶೇಷ ಚೇತನ ಯುವಕ ಸಿದ್ದರಾಮಯ್ಯ ಮನೆ ಬಳಿ ಬಂದು, ಗೇಟ್ ಮುಂದೆನೇ ಕಾದು ಕೂತಿದ್ದ.ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ (Karnataka Assembly Elections 2023 Result) ಬಂದಿದ್ದು, …

Read More »

ಲಿಂಬೆ, ಈರುಳ್ಳಿ ಬೆಲೆ ದಿಢೀರ್‌ ಕುಸಿತ

ವಿಜಯಪುರ: ಲಿಂಬೆ ಕಣಜ ಬಸವನಾಡಿನ ಲಿಂಬೆ, ಈರುಳ್ಳಿ ಬೆಳೆಗಾರ ಈಗ ಬೆಲೆ ಕುಸಿತದಿಂದ ಕಂಗಾಲಾಗಿದ್ದಾನೆ. ವಿಜಯಪುರ ಜಿಲ್ಲೆಯ ಲಿಂಬೆ, ಈರುಳ್ಳಿಗೆ ಮಾರುಕಟ್ಟೆ ಹೊಂದಿದ ದಿಲ್ಲಿ, ಮುಂಬಯಿ ಮಾರುಕಟ್ಟೆಗೆ ಅನ್ಯ ರಾಜ್ಯಗಳ ಉತ್ಪನ್ನಗಳು ಪ್ರವೇಶಿಸಿ ಪೈಪೋಟಿ ನೀಡಿರುವುದೇ ಇದಕ್ಕೆ ಪ್ರಮುಖ ಕಾರಣ.   ವಿಜಯಪುರ ಜಿಲ್ಲೆಯ ಲಿಂಬೆ ರಫ್ತು ಗುಣಮಟ್ಟ ಹೊಂದಿದ್ದು, ಜಿಲ್ಲೆಯಲ್ಲಿ 15,500 ಹೆಕ್ಟೇರ್‌ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಹೊಂದಿದೆ. ವಿಶೇಷವಾಗಿ ಭೀಮಾ ನದಿ ತೀರದ ಇಂಡಿ ಭಾಗದಲ್ಲಿ …

Read More »

ಮಾರೀಹಾಳ: ವೈಯಕ್ತಿಕ ದ್ವೇಷ ಹಿನ್ನೆಲೆ; ಯುವಕನ ಬರ್ಬರ ಹತ್ಯೆ

ಬೆಳಗಾವಿ: ವೈಯಕ್ತಿಕ ದ್ವೇಷ ಹಿನ್ನೆಲೆಯಲ್ಲಿ ಯುವಕನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಮಾರೀಹಾಳ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮಾರಿಹಾಳ ಗ್ರಾಮದ ಮಹಾಂತೇಶ ರುದ್ರಪ್ಪ ಕರಲಿಂಗನವರ(23) ಎಂಬ ಯುವಕನನ್ನು ನಾಲ್ಕೈದು ಜನ ಯುವಕರು ಸೇರಿ ಹತ್ಯೆಗೈದಿದ್ದಾರೆ. ಅತ್ತೆಗೆ ನಿಖ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಹಳೆಯ ದ್ವೇಷದಿಂದಲೇ ಕೊಲೆಗೈದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸ್ಥಳಕ್ಕೆ ಅಪರಾಧ ವಿಭಾಗದ ಡಿಸಿಪಿ ಪಿ.ವಿ. ಸ್ನೇಹ ಹಾಗೂ ಮರೀಹಾಳ ಇನ್ಸ್ಪೆಕ್ಟರ್ ಭೇಟಿ ನೀಡಿ …

Read More »

ಮದ್ಯಸೇವಿಸಿ ಕಾರು ಚಾಲಕನ ನಿರ್ಲಕ್ಷ್ಯ; ಆಟೋ ಪಲ್ಟಿ

ವಿಜಯಪುರ: ಮದ್ಯ ಸೇವಿಸಿದ್ದ ಕಾರು ಚಾಲಕನೊಬ್ಬ ನಿರ್ಲಕ್ಷದಿಂದ ಚಲಾಯಿಸಿ ಅಪಘಾತ ಮಾಡಿದ್ದರಿಂದ ಆಟೋ ಪಲ್ಟಿಯಾಗಿದ್ದು, ಕುಪಿತ ಪ್ರಯಾಣಿಕ ಮಹಿಳೆ ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಗರದಲ್ಲಿ ಜರುಗಿದೆ. ನಗರದ ಸ್ಟೇಷನ್ ರಸ್ತೆಯಲ್ಲಿ ಭಾನುವಾರ ರಾತ್ರಿ ಮದ್ಯ ಸೇವಿಸಿದ್ದ ಚಾಲಕ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರಿಂದ ಎರಡು ಆಟೋ, ಒಂದು ಬೈಕ್ ಮಧ್ಯೆ ಅಪಘಾತ ಸಂಭವಿದ್ದು, ಇದರಲ್ಲಿ ಒಂದು ಆಟೋ ಪಟ್ಟಿಯಾಗಿದೆ.   ಪಲ್ಟಿಯಾದ ಅಟೋದಲ್ಲಿದ್ದ ಮಹಿಳೆಯಿಂದ ಕುಪಿತಳಾಗಿ, ಕಾರು ಚಾಲಕನಿಗೆ …

Read More »

ಒಳ ಮೀಸಲಾತಿ ಶಿಫಾರಸು ಆದೇಶ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು : ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಅಧ್ಯಕ್ಷ ರವಿಮಾಕಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತಾಮನಾಥ ಹೆಗಡೆ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ …

Read More »

ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್​ಗೆ ಡಿಜಿಸಿಎ ಅನುಮತಿ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಸಮಯ ವಿಮಾನಗಳ ಲ್ಯಾಂಡಿಂಗ್‌ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ. ಈವರೆಗೆ ನಿಲ್ದಾಣ ಮುಂಜಾನೆಯಿಂದ ಸಂಜೆಯವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು. ವಿಮಾನ ನಿಲ್ದಾಣ ನಿರ್ದೇಶಕರ ಪ್ರತಿಕ್ರಿಯೆ: “ರನ್‍ ವೇ 27 ರ ಸಮೀಪದಲ್ಲಿ ಯಾವುದೇ ಸಂಭಾವ್ಯ ಎತ್ತರದ ನಿರ್ಬಂಧಗಳಿಲ್ಲದ ಕಾರಣ ಡಿಜಿಸಿಎ ರಾತ್ರಿ ಲ್ಯಾಂಡಿಂಗ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ರನ್‍ವೇ ಥ್ರೆಶೋಲ್ಡ್ ಶಿಫ್ಟ್ ಕೈಗೊಳ್ಳಲು ಸೂಚಿಸಿದೆ. ರಾತ್ರಿ ಲ್ಯಾಂಡಿಂಗ್‍ಗೆ ಅನುಮತಿ ಪಡೆಯಲು ಶ್ರಮಿಸಿದ …

Read More »

ಕ್ರೂಸರ್‌ ಟ್ರಾಕ್ಟರ್‌ ನಡುವೆ ಮುಖಾಮುಖಿ ಡಿಕ್ಕಿ

ವಿಜಯಪುರ : ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಬಲಾದಿ ಗ್ರಾಮದ ಸಮೀಪ ಯಲ್ಲಮ್ಮ ದೇವಿ ದರ್ಶನ ಮಾಡಿಕೊಂಡು ವಾಪಸ್‌ ಊರಿಗೆ ಹೋಗುತ್ತಿದ್ದ ಕ್ರೂಸರ್‌ ಹಾಗೂ ಕಟ್ಟಿಗೆಯನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಕ್ರೂಸರ್ ನಲ್ಲಿದ್ದ ರೇವಣಸಿದ್ದ ಜಾತಗೊಂಡ (14) ಹಾಗೂ ಅಮಸಿದ್ದ ಬಂಡೆ (27) ಸ್ಥಳದಲ್ಲಿ ಮೃತಪಟ್ಟಿದ್ದಾರೆ. 6ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಇಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. …

Read More »

ಗ್ಯಾರಂಟಿಗೆ ಬದ್ಧ: AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌

ಬೆಂಗಳೂರು: ಕರ್ನಾ ಟಕದ ಮಹಾಜನತೆ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು ಕೊಟ್ಟಿದ್ದು, ನಾವು ಕೊಟ್ಟ ಗ್ಯಾರಂಟಿ ಯೋಜನೆ ಗಳನ್ನು ಈಡೇರಿಸುತ್ತೇವೆ. ಅದು ನಮ್ಮ ಬದ್ಧತೆಯೂ ಹೌದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದರು.   ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೆಸರಿನ ಅಧಿಕೃತ ಘೋಷಣೆಗೆಂದು ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಯ್ಕೆಯಲ್ಲಿ ಸ್ವಲ್ಪ ತಡವಾಗಿದೆ. ಕರ್ನಾಟಕದಲ್ಲಿ ನಮ್ಮದು ಬಲಿಷ್ಠ ನಾಯಕತ್ವ. ಪ್ರತಿಯೊಬ್ಬರದೂ …

Read More »

26/11 ಪಾತಕಿ ತಹಾವ್ವುರ್‌ ಭಾರತಕ್ಕೆ ಗಡಿಪಾರು: ಅಮೆರಿಕ ಕೋರ್ಟ್‌ ಮಹತ್ವದ ಆದೇಶ

ನ್ಯೂಯಾರ್ಕ್‌/ನವದೆಹಲಿ: 2008ರ ಮುಂಬೈನಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವ್ವುರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನ್ಯಾಯಾಲಯ ಅನುಮತಿ ನೀಡಿದೆ. ಇದು ಭಾರತಕ್ಕೆ ಮಹತ್ವದ ಕಾನೂನು ಜಯ ಎಂದು ಬಣ್ಣಿಸಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಆಹ್ವಾನ ಮೇರೆಗೆ ಜೂ.22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅಧಿಕೃತ ಅಮೆರಿಕ ಭೇಟಿ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವ ಪಡೆದಿದೆ. ಅಮೆರಿಕದ …

Read More »