Breaking News
Home / ರಾಜಕೀಯ (page 322)

ರಾಜಕೀಯ

ಶಕ್ತಿ ಯೋಜನೆ ಎಫೆಕ್ಟ್?: ಸಾರಿಗೆ ಇಲಾಖೆಯ ಪ್ರಮುಖ ಯೋಜನೆಗಳಿಗೆ ಬಿಡುಗಡೆಯಾಗದ ಬಿಡಿಗಾಸು

ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯೂ ಒಂದು. ಸಾಮಾನ್ಯ ಸರ್ಕಾರಿ ಬಸ್​ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಅನುಷ್ಠಾನದ ಉತ್ಸಾಹದಲ್ಲಿ ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ಇತರ ಪ್ರಮುಖ ಯೋಜನೆಗಳನ್ನು ನಿರ್ಲಕ್ಷಿಸಿದೆಯೇ? ಎಂಬ ಅನುಮಾನ ಮೂಡಿದೆ. ‘ಶಕ್ತಿ ಯೋಜನೆ’ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅನುಷ್ಠಾನ ಮಾಡಿದ ಮೊದಲ ಗ್ಯಾರಂಟಿ ಯೋಜನೆ. 2023-24ರ ಸಾಲಿನಲ್ಲಿ ಮಹತ್ವಾಕಾಂಕ್ಷೆಯ ಈ ಗ್ಯಾರಂಟಿ ಯೋಜನೆಗೆ …

Read More »

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪೋಷಣ್​ ಅಭಿಯಾನದ ಅಡಿ ಈ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪೋಷಣ್​ ಅಭಿಯಾನ ಯೋಜನೆಯಡಿ ಈ ಹುದ್ದೆ ಭರ್ತಿ ನಡೆಸಲಾಗುವುದು. ಒಟ್ಟು ಐದು ಹುದ್ದೆಗಳ ನೇಮಕಾತಿ ನಡೆಸಲಾಗುವುದು. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಸೂಚನೆಹುದ್ದೆ ವಿವರ: ಪೋಷಣ್​ ಅಭಿಯಾನ ಯೋಜನೆ ಅಡಿ …

Read More »

ದಳಪತಿ ವಿಜಯ್​ ನಟನೆಯ ‘ಲಿಯೋ’ ಚಿತ್ರದ ಕನ್ನಡ ಪೋಸ್ಟರ್​ ಔಟ್​

ಚಿತ್ರತಂಡ ‘ಲಿಯೋ’ ಸಿನಿಮಾದ ಕನ್ನಡ ಪೋಸ್ಟರ್​ ಅನ್ನು ಅನಾವರಣಗೊಳಿಸಿದೆ. ಕಾಲಿವುಡ್​ ಸೂಪರ್​ಸ್ಟಾರ್​ ನಟ ದಳಪತಿ ವಿಜಯ್​ ಅವರ ‘ಲಿಯೋ’ 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಲೋಕೇಶ್​ ಕನಕರಾಜ್​ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಶೂಟಿಂಗ್​ ಅಂತಿಮ ಹಂತಕ್ಕೆ ತಲುಪಿದೆ. ಇದೀಗ ಚಿತ್ರತಂಡ ‘ಲಿಯೋ’ದ ಕನ್ನಡ ಪೋಸ್ಟರ್​ ಅನ್ನು ಅನಾವರಣಗೊಳಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ‘ಲಿಯೋ’ ಸಿನಿಮಾದ ಕನ್ನಡ ಪೋಸ್ಟರ್​ ಸಖತ್​ ವೈರಲ್​ ಆಗುತ್ತಿದೆ. ‘ಲಿಯೋ’ ಸಿನಿಮಾದ ನಿರ್ಮಾಣ …

Read More »

ಜಲಸಂಪನ್ಮೂಲ ಸಚಿವರು ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ:H.D.K.

ರಾಮನಗರ: ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಬಿಡದಿದ್ದರೆ ತಪ್ಪಾಗುತ್ತದೆ ಎಂದು ಜಲಸಂಪನ್ಮೂಲ ಮಂತ್ರಿಗಳು ರಾತ್ರಿಯಿಂದ ನೀರು ಬಿಟ್ಟಿದ್ದಾರೆ. ನಿನ್ನೆಯೇ ಸಚಿವರು ತರಾತುರಿಯಲ್ಲಿ ಈ ನಿರ್ಧಾರ ಮಾಡಿ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಮಾಜಿ‌ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹರಿಹಾಯ್ದರು. ರಾಮನಗರ ಜಿಲ್ಲೆ ಬಿಡದಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಆ ಸಮಯದಲ್ಲಿ ಕಾವೇರಿ ನೀರಾವರಿ ನಿರ್ವಹಣಾ ಪ್ರಾಧಿಕಾರಕ್ಕೆ ತಮಿಳುನಾಡು ಒತ್ತಡ …

Read More »

ಹಾವೇರಿ: ಒನ್​ಟೈಮ್​ ಸೆಟಲ್​ಮೆಂಟ್​ಗೆ ಸ್ಪಂದಿಸದ ಆರೋಪ.. ಬ್ಯಾಂಕ್​ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತ

ಹಾವೇರಿ: ಒಟಿಎಸ್ ಸೌಲಭ್ಯದಿಂದ ವಂಚಿತ ರೈತನೊಬ್ಬ ಬ್ಯಾಂಕನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಮಾಕನೂರು ಗ್ರಾಮದಲ್ಲಿ ನಡೆದಿದೆ. ಬ್ಯಾಂಕ್​ನಲ್ಲಿ ಬೆಳೆಸಾಲ ಮಾಡಿದ್ದ ಸಂಜೀವ ಕುರುಬರ ಅನ್ನೋ ರೈತ ಸಂಜೀವ್​ ಆತ್ಮಹತ್ಯೆಗೆ ಮುಂದಾಗಿದ್ದ. ಸಂಜೀವ್ ಬ್ಯಾಂಕನಲ್ಲಿ 3 ಲಕ್ಷದ 45 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದಾನೆ. ಈ ಸಾಲಕ್ಕೆ ವರ್ಷದಿಂದ ವರ್ಷಕ್ಕೆ ಬಡ್ಡಿ ಹೆಚ್ಚಾಗಿ ಸುಮಾರು 10 ಲಕ್ಷ ರೂಪಾಯಿ ಆಗಿ ಬೆಳೆದಿದೆ. ಒನ್ ಟೈಮ್ ಸೆಟಲಮೆಂಟ್ (ಒಟಿಎಸ್) …

Read More »

ನಿವೃತ್ತ ಶಿಕ್ಷಕನಿಂದ ಮಣ್ಣಿನ ಗಣಪತಿ ನಿರ್ಮಾಣ; ತಂದೆಯ ನೆರವಿಗೆ ವಿದೇಶದಿಂದ ಬರುವ ಮಕ್ಕಳು

ವಿಜಯಪುರ: ನಿಮಗೆ ಗಣೇಶನ ಮೂರ್ತಿ ಬೇಕಿದ್ದರೆ ನೀವು ಇವರ ಬಳಿ ಒಂದು ತಿಂಗಳ ಮುಂಚಿತವೇ ಕಾಯ್ದಿರಿಸಬೇಕು. ಮೂರ್ತಿಗಳ ಆಕರ್ಷಕ ವಿನ್ಯಾಸವೇ ಇದಕ್ಕೆ ಕಾರಣ. ಹೌದು, ಇವರ ಹೆಸರು ಮನೋಹರ ಪತ್ತಾರ. ನಿವೃತ್ತ ಚಿತ್ರಕಲಾ ಶಿಕ್ಷಕರು. ಶಿಲ್ಪ ಅಕಾಡೆಮಿ ನಿರ್ದೇಶಕರಾಗಿದ್ದವರು. ತಲೆತಲಾಂತರದಿಂದ ಬಳುವಳಿಯಾಗಿ ಬಂದ ಆಭರಣ ತಯಾರಿಕೆ ಇವರ ಮೂಲ ಕಸುಬು. ಆದರೆ ಇವರ ಕುಟುಂಬ ಆಯ್ದುಕೊಂಡಿದ್ದು ಮಾತ್ರ ಮಣ್ಣಿನ ಗಣೇಶ ಮೂರ್ತಿ ತಯಾರಿಕೆ ಕೆಲಸ. ಇವರ ಪುತ್ರರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದಾರೆ. ಗಣೇಶ …

Read More »

ಚೈತ್ರಾ ಕುಂದಾಪುರಗೆ ಸೇರಿದ ಕಾರು ಮುಧೋಳದಲ್ಲಿ ಪತ್ತೆ..

ಬಾಗಲಕೋಟೆ: ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣದ ಹಿನ್ನೆಲೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಚೈತ್ರಾ ಕುಂದಾಪುರ ಅವರಿಗೆ ಸೇರಿದ ಕಾರು ಪತ್ತೆಯಾಗಿದೆ. ಈ ಪ್ರಕರಣ ಮುಧೋಳ ಪಟ್ಟಣದವರೆಗೆ ವ್ಯಾಪಿಸಿದ್ದು ನೋವಿನ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರ್ ಬಿ‌ ತಿಮ್ಮಾಪುರ ಹೇಳಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಕೆಟ್​ ಡೀಲ್​ನಲ್ಲಿ​ ದೊಡ್ಡ ಜಾಲವೇ ಇರಬಹುದು ಎಂಬ ಭಾವನೆ ನನ್ನದು. ಕುಂದಾಪುರ ಎಲ್ಲಿ, ಮುಧೋಳ ಎಲ್ಲಿ, ಪೊಲೀಸ್ ಇಲಾಖೆ …

Read More »

ಹಳೆ ಸಂಸತ್ ಭವನಕ್ಕೆ ಗುಡ್‌ ಬೈ: ಲೋಕಸಭಾ, ರಾಜ್ಯಸಭಾ ಸದಸ್ಯರ ಗ್ರೂಪ್​ ಫೋಟೋ

ನವದೆಹಲಿ: ಹಳೆ ಸಂಸತ್ ಭವನದಿಂದ ಕಲಾಪಗಳು ಹೊಸ ಸಂಸತ್ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮುನ್ನ ಇಂದು (ಮಂಗಳವಾರ) ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಒಟ್ಟಾಗಿ ಫೋಟೋ ತೆಗೆಸಿಕೊಂಡರು. ಉಪರಾಷ್ಟ್ರಪತಿ, ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಎರಡೂ ಬದಿಗಳಲ್ಲಿ ನಿಂತು ಸದಸ್ಯರು ಫೋಟೋಗೆ ಪೋಸ್ ಕೊಟ್ಟರು.     ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, …

Read More »

ಯುನೆಸ್ಕೋ ವಿಶ್ವಪಾರಂಪರಿಕ ತಾಣಗಳ ಪಟ್ಟಿಗೆ ರಾಜ್ಯದ ಹೊಯ್ಸಳರ ದೇವಾಲಯ: ಪಿಎಂ ಮೋದಿ, ಸಿಎಂ ಸಿದ್ದರಾಮಯ್ಯ ಹರ್ಷ

ಬೆಂಗಳೂರು: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ)ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಪ್ರಸಿದ್ಧ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.       ವಿಶ್ವಮಟ್ಟದ ಮೂಲಸೌಲಭ್ಯ, ಸುರಕ್ಷತೆ ಒದಗಿಸಲು ಬದ್ಧ: ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಸಿಎಂ, “ಇದು ಖುಷಿ, ಹೆಮ್ಮೆಯ ಸಂಗತಿ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ …

Read More »

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಆರೋಪಿಗಳ ಬ್ಯಾಂಕ್ ಖಾತೆ ಸ್ಥಗಿತ, ಕಾರು ಜಪ್ತಿ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಹಂತ-ಹಂತವಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿಗಳ ಆಸ್ತಿ ಶೋಧ ಪ್ರಕ್ರಿಯೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ. ಆರೋಪಿಗಳ ಬ್ಯಾಂಕ್‌ ಖಾತೆಯಲ್ಲಿದ್ದ ಠೇವಣಿ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಶನಿವಾರ, 81 ಲಕ್ಷ ನಗದು ಜಪ್ತಿ ಮಾಡಲಾಗಿದ್ದು, ನಂತರ ಆರೋಪಿಗಳ ಎಫ್.ಡಿ ಖಾತೆಯಲ್ಲಿ ಒಟ್ಟು 1.08 ಕೋಟಿ ಠೇವಣಿ ಪತ್ತೆಯಾಗಿದೆ. ಬ್ಯಾಂಕ್‌ಗಳ ಮೂಲಕ ಠೇವಣಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಸಿಬಿ …

Read More »