Breaking News

ರಾಜಕೀಯ

ಧರ್ಮಗಳಿಗೆ ನೋವುಂಟು ಮಾಡಿದರೆ ಒಳ್ಳೆಯಾಗುವುದಿಲ್ಲ: ಶೋಭಾ ಕರಂದ್ಲಾಜೆ

ಉಡುಪಿ: ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ದೇವಸ್ಥಾನ ಧ್ವಂಸ ವಿಚಾರದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆಯ ವಿಚಾರವಾಗಿ ಉಡುಪಿಯಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಶ್ರದ್ಧಾ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅಕ್ರಮ ಸ್ಥಳಗಳಲ್ಲಿ ಶ್ರದ್ಧಾ ಕೇಂದ್ರಗಳು ನಿರ್ಮಾಣವಾಗಿದ್ದರೆ ಪೂರ್ವ ಸೂಚನೆ ನೀಡಬೇಕು. ತೆರವುಗೊಳಿಸುವುದು …

Read More »

ಲಸಿಕೆ​ ಸೆಂಟರ್​ ಕ್ಲೋಸ್​ ಮಾಡ್ಬೇಡಿ ಅಂದಿದ್ಕೆ ನಗರಸಭೆ ಆಯುಕ್ತರ ಮೇಲೆ ಹಲ್ಲೆ ಆರೋಪ

ಹಾಸನ: ಕೋವಿಡ್​ ಲಸಿಕೆ ವಿತರಣೆ ಕೇಂದ್ರವನ್ನ ಕ್ಲೋಸ್​ ಮಾಡದಂತೆ ಹೇಳಿದ ನಗರಸಭೆ ಆಯುಕ್ತರ ಮೇಲೆ ಕಾಲೇಜು ಮಾಲೀಕರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಇಂದು ದೇಶಾದ್ಯಂತ ಬೃಹತ್​ ಲಸಿಕಾ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಅದರ ನಿಮಿತ್ತ ಹೇಮಾವತಿನಗರದಲ್ಲಿನ ಯತೀಂದ್ರ ಪ್ಯಾರಾಮೆಡಿಕಲ್‌ ಸೈನ್ಸ್ ಕಾಲೇಜಿನಲ್ಲಿ ಲಸಿಕಾ ಕೇಂದ್ರವನ್ನು ತೆರೆಯಲಾಗಿತ್ತು. ಈ ವೇಳೆ ಸಂಜೆ ಐದು ಗಂಟೆಯವರೆಗೆ ಕಾಲೇಜು ಕ್ಲೋಸ್ ಮಾಡದಂತೆ ಆಯುಕ್ತರು ಕಾಲೇಜು ಮಾಲೀಕ ಯತೀಶ್ ಎಂಬುವವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. …

Read More »

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮೃತದೇಹಗಳ ನಡುವೆ 3 ವರ್ಷದ ಹೆಣ್ಣು ಮಗು

ಬೆಂಗಳೂರು: ನಗರದ ಬ್ಯಾಡರಹಳ್ಳಿ ಹಳ್ಳಿ ಠಾಣಾ ವ್ಯಾಪ್ತಿಯ ತಿಗರಪಾಳ್ಯದಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದು, ಘಟನೆಯಲ್ಲಿ ಮೂರು ವರ್ಷದ ಮಗು ಮಾತ್ರ ಜೀವಂತವಾಗಿ ಪತ್ತೆಯಾಗಿದೆ. ಕಳೆದ ಐದು ದಿನಗಳ ಹಿಂದೆ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಈ ವೇಳೆ ಮನೆಯಲ್ಲಿ 3 ವರ್ಷದ ಹೆಣ್ಣು ಮಗು ಮೃತದೇಹಗಳ ನಡುವೆಯೇ ಕಳೆದ ಐದು ದಿನಗಳಿಂದ ಕಾಲ ಕಳೆದಿರುವುದು ತಿಳಿದು ಬಂದಿದೆ. ಕೌಟುಂಬಿಕ ಸಮಸ್ಯೆಯಿಂದಲೇ ಒಂದೇ ಮನೆಯ ಐವರು ಬಲಿಯಾದರ …

Read More »

ಜಾಗತಿಕ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಅಪಾರ ಪ್ರಧಾನಿಗಳ ಜನ್ಮದಿನಕ್ಕೆ ಶುಭಕೋರಿದ-ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಕೋವಿಡ್ ಸೋಂಕಿನ ಸಂರಕ್ಷಣೆಗಾಗಿ ಅರಭಾಂವಿ ವಿಧಾನಸಭಾ ಮತಕ್ಷೇತ್ರದಲ್ಲಿ ಶೇ.60ರಷ್ಟು ಲಸಿಕೆಗಳನ್ನು ನೀಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರದಂದು ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ನಿಗದಿತ ಗುರಿ ತಲುಪಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವದಾಗಿ ಹೇಳಿದರು. ಅರಭಾವಿ ಕ್ಷೇತ್ರದಾದ್ಯಂತ 2.95 ಲಕ್ಷ ಜನರಿಗೆ ಲಸಿಕೆ ಗುರಿಯನ್ನು ಹೊಂದಿದ್ದು, ಇಲ್ಲಿಯವರಿಗೆ ಸುಮಾರು 1.60 ಲಕ್ಷ ಜನರಿಗೆ ಲಸಿಕೆಗಳನ್ನು ಹಾಕಲಾಗಿದ್ದು, ಕೊವೀಡ್ …

Read More »

ಪ್ರಿಯಾಂಕಾ ಜಾರಕಿಹೊಳಿ ನೇತೃತ್ವದಲ್ಲಿ ನಿರುದ್ಯೋಗ ದಿನ ಆಚರಣೆ; ರಸ್ತೆಯಲ್ಲೇ ಪಕೋಡಾ ತಯಾರಿಸಿ ಆಕ್ರೋಶ

    ಗೋಕಾಕ: ನಗರದಲ್ಲಿ ಇಂದು ಗೋಕಾಕ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ವತಿಯಿಂದ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿಯವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಬದಲು ‘ರಾಷ್ಟ್ರೀಯ ನಿರುದ್ಯೋಗ ದಿನ’ ಆಚರಿಸಿ, ಪ್ರತಿಭಟನೆ ನಡೆಸಲಾಯಿತು.   ಇಲ್ಲಿನ ಬಸವೇಶ್ವರ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ಪಕೋಡಾ (ಮಿರ್ಚಿ ಬಜಿ) ತಯಾರಿಸಿ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ …

Read More »

ಬೆಂಗಳೂರಿನಲ್ಲಿ ಮಾಜಿ ಶಾಸಕರ ಪುತ್ರನಿಂದ ಉದ್ಯಮಿಯ ಪುತ್ರನ ಮೇಲೆ ಹಲ್ಲೆ

ಬೆಂಗಳೂರಿನಲ್ಲಿ ರಾಜಕಾರಣಿಯೊಬ್ಬರ ಪುತ್ರ ಉದ್ಯಮಿಯೊಬ್ಬರ ಪುತ್ರನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಮಾಜಿ ಶಾಸಕ, ಸದ್ಯ ಹಟ್ಟಿ ಗಣಿ ಅಧ್ಯಕ್ಷರಾಗಿರುವ ಮಾನಪ್ಪ ವಜ್ಜಲ್ ಅವರ ಪುತ್ರ ಆಂಜನೇಯ ವಜ್ಜಲ್ ಅವರ ವಿರುದ್ಧ ಈ ಹಲ್ಲೆ ಆರೋಪ ಕೇಳಿ ಬಂದಿದೆ. ಇನ್ನು ಬೆಂಗಳೂರಿನ ವಸಂತನಗರ ಎಂಬೆಸಿ ಅಪಾರ್ಟ್ಮೆಂಟ್ ಬಳಿ ಈ ಜಗಳ ನಡೆದಿದ್ದು, ಈ ಘಟನೆಯ …

Read More »

ಬೈಕ್ ಸವಾರನ ಎಡವ‌ಟ್ಟು: ಇನ್ನೊಬ್ಬ ಸವಾರನ ಕೈಮೇಲೆ ಹರಿದ ಲಾರಿ ಚಕ್ರ

ಚಿಕ್ಕಮಗಳೂರು: ಫೋನ್‌ನಲ್ಲಿ ಮಾತಾಡಿಕೊಂಡು ಬಂದ ಬೈಕ್ ಸವಾರನ ಎಡವಟ್ಟಿನಿಂದಾಗಿ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್‌ ಸವಾರನ ಕೈಮೇಲೆ ಲಾರಿ ಚಕ್ರ ಹರಿದು ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಏಕಮುಖ ಸಂಚಾರದಲ್ಲಿ ಫೋನ್ ನಲ್ಲಿ ಮಾತನಾಡಿಕೊಂಡು ಬರುತ್ತಿದ್ದ ಬೈಕ್ ಸವಾರ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್‌ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾಗುತ್ತಿದ್ದಂತೆ ಕೆಳಗೆ ಬಿದ್ದ ಮತ್ತೊಂದು ಬೈಕ್ ಸವಾರನ ಕೈಮೇಲೆ ಲಾರಿ ಚಕ್ರ ಹರಿದಿದ್ದು, ಸವಾರ ಸುಂದರ್ ಎಡಗೈಗೆ ಗಂಭೀರ ಗಾಯಗಳಾಗಿವೆ. …

Read More »

ನಾನು ಬದುಕುಳಿಯುವ ಹಾಗೆ ಕಾಣುತ್ತಿಲ್ಲ, ತುಂಬಾ ನರಳುತ್ತಿದ್ದೇನೆ; ನಾನು ಸತ್ತರೆ ಕಲಾವಿದರೇ ಕಾರಣ: ನಟಿ ವಿಜಯಲಕ್ಷ್ಮಿ

ಆಗಾಗ್ಗೆ ವಿಡಿಯೋಗಳನ್ನು ರಿಲೀಸ್ ಮಾಡುವ ಮೂಲಕ ಸುದ್ದಿಯಲ್ಲಿರುವ ನಟಿ ವಿಜಯಲಕ್ಷ್ಮೀ ಈಗ ಮತ್ತೊಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ, ನಾನು ಇನ್ನು ಬದುಕುವುದು ಅನುಮಾನ ಎಂದು ನಟಿ ವಿಜಯ ಲಕ್ಷ್ಮಿ ಆತಂಕದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನನಗೆ ಕೊರೊನಾ ಸೋಂಕು ಬಂದಿದೆ. ನಾನು ಉಳಿಯುವಂತೆ ಕಾಣುತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನನಗೆ ಕೋವಿಡ್ ಪಾಸಿಟಿವ್ ಆಗಿ ನ್ಯುಮೋನಿಯಾ ಆಗಿತ್ತು. ಆಸ್ಪತ್ರೆಯ ಖರ್ಚಿಗೂ …

Read More »

ಮಧ್ಯಾಹ್ನದ ವೇಳೆಗೆ 1 ಕೋಟಿ ಜನರಿಗೆ ಲಸಿಕೆ; ದಾಖಲೆ ನಿರ್ಮಿಸಿದ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಇಂದು ದೇಶಾದ್ಯಂತ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನದ ವೇಳೆಗೆ ಬರೋಬ್ಬರಿ 1 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಈ ಮೂಲಕ ದೇಶದಲ್ಲಿ ಹೊಸ ದಾಖಲೆ ಬರೆಯಲಾಗಿದೆ. ಇಂದು ದೇಶಾದ್ಯಂತ 1 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. ಇದರೊಂದಿಗೆ ಭಾರತ ವಿಶ್ವದಲ್ಲೇ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನದ ಸಾಧನೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಸಂಜೆವರೆಗೂ ಕೋವಿಡ್ …

Read More »

ಮಾಜಿ-ಹಾಲಿ ಶಾಸಕರ ನಡುವೆ ಜಟಾಪಟಿ; ಗ್ರಾಮದವರಿಗೆ ಕಲುಷಿತ ನೀರು ಕುಡಿಯುವ ಭಾಗ್ಯ

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ ನಿವಾಸಿಗಳು ಕಳೆದ ನಾಲ್ಕು ತಿಂಗಳಿಂದ ಕಲುಷಿತ ನೀರನ್ನ ಕುಡಿದು ಆಸ್ಪತ್ರೆ ಪಾಲಾಗುತ್ತಿದ್ದಾರಂತೆ. ಇಲ್ಲಿನ ನೀರು ಹೇಗಿದೆ ಅಂದ್ರೆ ನೀರು ಬಗೆ ಬಗೆ ಬಣ್ಣಕ್ಕೆ ತಿರುಗಿದೆ. ಕುಡಿಯುವ ಜಲವೂ ವಾಸನೆ ಬರುತ್ತಿದೆ. ದಾಹ ತಣಿಸುವ ಹನಿಯೆಲ್ಲವೂ, ಒಗರೊಗರು ರುಚಿ ಬರುತ್ತಿದೆ. ಶುದ್ಧ ನೀರಿನಲ್ಲಿ ಯಾವೆಲ್ಲ ಗುಣಗಳು ಇರಬಾರದೋ ಅದೆಲ್ಲವೂ ಈ ನೀರಿನಲ್ಲಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ, ಮಾಜಿ ಶಾಸಕ ಅಶೋಕ ಪಟ್ಟಣ, ಹಾಲಿ ಬಿಜೆಪಿ ಶಾಸಕ …

Read More »