Breaking News

ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ದೋಷ – ಉತ್ಪಾದನೆ ಕುಂಠಿತ

Spread the love

ರಾಯಚೂರು: ಜಿಲ್ಲೆಯ ಯರಮರಸ್‌ನಲ್ಲಿರುವ ವೈಟಿಪಿಎಸ್  ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎರಡನೇ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರೀ ಅನಾಹುತ ತಪ್ಪಿದೆ.

ತಾಂತ್ರಿಕ ದೋಷ  ಹಿನ್ನೆಲೆ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗಿದ್ದು, ಕಲ್ಲಿದ್ದಲು ಪೂರೈಸುವ ಟಿಪ್ಲರ್ ಯೂನಿಟ್‌ನ ಬೆಲ್ಟ್ ಹಾಗೂ ಪುಲ್ಲಿಗಳು ಕುಸಿದು ಬಿದ್ದು ಸಮಸ್ಯೆ ಉಂಟಾಗಿದೆ. ನಿರಂತರವಾಗಿ ದುರಸ್ತಿ ಕಾರ್ಯ ನಡೆದಿದೆ. 

ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯ ಅಸಮರ್ಪಕ ನಿರ್ವಹಣೆ ಆರೋಪ ಕೇಳಿಬಂದಿದೆ. 1600 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರದಲ್ಲಿ 533 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ತಾಂತ್ರಿಕ ಸಮಸ್ಯೆ ಕಾರಣಕ್ಕೆ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದೆ.


Spread the love

About Laxminews 24x7

Check Also

ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ತಾಂತ್ರಿಕ ದೋಷ – ಉತ್ಪಾದನೆ ಕುಂಠಿತ

Spread the loveರಾಯಚೂರು: ಜಿಲ್ಲೆಯ ಯರಮರಸ್‌ನಲ್ಲಿರುವ ವೈಟಿಪಿಎಸ್  ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎರಡನೇ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ