ಭೋಪಾಲ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು 71 ಅಡಿ ಉದ್ದದ ಸಿರಿಂಜ್ ಆಕಾರದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ನ ಲಾಲ್ ಘಾಟಿ ಚೌರಹಾದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಈ ವೇಳೆ ಕೋವಿಡ್ -19 ಲಸಿಕೆ ಅಭಿಯಾನಕ್ಕಾಗಿ ಪಕ್ಷದ ಕಾರ್ಯಕರ್ತರು ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಂಭ್ರಮಾಚರಣೆ ವೇಳೆ ಪಕ್ಷದ ಕಾರ್ಯಕರ್ತರು ಬಿಳಿ ಟೀ ಶರ್ಟ್ ಮತ್ತು ಮುಖವಾಡಗಳನ್ನು ಧರಿಸಿದ್ದರು. …
Read More »ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಅಂಗೀಕಾರ: ಮೀಸಲಾತಿ ನಾಶದ ಹುನ್ನಾರ ಎಂದ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಸಭಾತ್ಯಾಗದ ಮಧ್ಯೆಯೂ ಇಂದು ವಿಧಾನಸಭೆಯಲ್ಲಿ ಇಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯರ್ ರಾಜ್ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರಗೊಂಡಿದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ದಾರೆ. ಸರಣಿ ಟ್ವೀಟ್ಗಳನ್ನು ಮಾಡುವ ಮೂಲಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಹಿಂದಿನಿಂದಲೂ ಮೀಸಲಾತಿ ವಿರೋಧಿಯಾಗಿದೆ. ಈಗ ಕ್ಷೇತ್ರಗಳ ಪುನರ್ ವಿಂಗಡನೆಗೆ ಆಯೋಗ ರಚನೆ ಮಾಡಿ, ಮೀಸಲಾತಿಯನ್ನು ನಾಶಮಾಡುವ ಹುನ್ನಾರ ಮಾಡಿದೆ. ಇದು ಸಂವಿಧಾನದ ಮೇಲಿನ ದಾಳಿಯಾಗಿದೆ. ರಾಜ್ಯ …
Read More »ಮಾಧುಸ್ವಾಮಿ ಕೊಟ್ಟ CD ನೋಡಿ ಗಾಬರಿಯಾದೆ -ಪರಿಷತ್ ಕಲಾಪ
ಬೆಂಗಳೂರು: ಪರಿಷತ್ ಕಲಾಪದ ವೇಳೆ ಇಂದು CD ವಿಚಾರ ಪ್ರಸ್ತಾಪವಾಯಿತು. ಕಲಾಪದ ವೇಳೆ ಹಾಸ್ಯ ಚಟಾಕಿ ಹಾರಿಸಿದ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, ‘CD ನೋಡಿ ಗಾಬರಿಯಾದೆ’ ಅನ್ನೋ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಗೆ ಶ್ರೀಕಂಠೇಗೌಡ ಪ್ರಶ್ನೆ ಕೇಳಿದ್ದರು. ಪ್ರಶ್ನೆಗೆ ಸಂಬಂಧಿಸಿದ ಮಾಹಿತಿಯನ್ನ ಸಚಿವರು ಸಿಡಿಯಲ್ಲಿ ನೀಡಿದ್ದರು. ಈ ಸಿಡಿ ನೋಡಿ ನನಗೆ ಗಾಬರಿ ಆಯ್ತು ಅಂತಾ ಶ್ರೀಕಂಠೇಗೌಡ ಹಾಸ್ಯ ಚಟಾಕಿ ಹಾರಿಸಿ, ಆ ಸಿಡಿಯನ್ನ …
Read More »ಮತ್ತೆ ಗಾಳಿಪಟ-2 ಹಾರಾಟ.. ಸೆ. 18ರಿಂದ ಚಿತ್ರೀಕರಣ
ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ ಭಟ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ “ಗಾಳಿಪಟ-2′ ಚಿತ್ರದ ಚಿತ್ರೀಕರಣಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ನಿಂದ “ಗಾಳಿಪಟ-2′ ಚಿತ್ರದ ಚಿತ್ರೀಕರಣ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಈಗ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿರುವುದರಿಂದ ಮತ್ತೆ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ಯೋಗರಾಜ್ ಭಟ್, “ಈಗಾಗಲೇ ಮುಕ್ಕಾಲು ಭಾಗ ಶೂಟಿಂಗ್ ಪೂರ್ಣಗೊಂಡಿದೆ. …
Read More »ವಿಮಾನದ ಟಿಕೆಟ್ ಗಿಂತ ಈ ಬಸ್ ಗಳ ಟಿಕೆಟ್ ದರ ಜಾಸ್ತಿ: ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ ರಮೇಶ್ ಕುಮಾರ್
ಬೆಂಗಳೂರು : ಬಸ್‍ಗಳ ಟಿಕೆಟ್ ದರ ಹೆಚ್ಚಿಸುವವರಿಗೆ ಜನರ ಬವಣೆ ಗೊತ್ತಿಲ್ಲ. ವಿಮಾನದ ಟಿಕೆಟ್‍ಗಿಂತ ಈ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ ಕಾಲದಿಂದಲೂ ಬಸ್ ಟಿಕೆಟ್ ದರ ಹೆಚ್ಚು ಮಾಡಿಕೊಂಡು ಬರುತ್ತಿದ್ದಾರೆ. ಟಿಕೆಟ್ ದರ ಹೆಚ್ಚಿಸೋರಿಗೆ ಜನರ ಬವಣೆ ಗೊತ್ತಿಲ್ಲ. ಹಬ್ಬದ ವೇಳೆ ಜನ ಊರುಗಳಿಗೆ …
Read More »ವಿಧಾನಸೌಧದ ಗೇಟ್ ನಂಬರ್ 2ರಲ್ಲಿ ರಸ್ತೆ ಕುಸಿತ
ಬೆಂಗಳೂರು : ವಿಧಾನಸೌಧದ ಗೇಟ್ ನಂಬರ್ 2ರಲ್ಲಿ ಡಾಂಬರು ಹಾಕಿದ ರಸ್ತೆಯಲ್ಲಿ ಕುಸಿತ ಉಂಟಾಗಿದೆ. ಬಸ್, ಕಾರು ಸೇರಿದಂತೆ ವಾಹನಗಳು ನಿರಂತರವಾಗಿ ಸಂಚರಿಸುವ ರಸ್ತೆಯಲ್ಲಿ ಸುಮಾರು 10 ಅಡಿ ಅಗಲ, 10 ಅಡಿ ಆಳದ ರಂಧ್ರ ಸೃಷ್ಟಿಯಾಗಿದೆ. ಭೂಮಿ ಕುಸಿಯುವಾಗಲೇ ಕಾರೊಂದು ಸ್ವಲ್ಪ ಅಂತರದಲ್ಲಿ ಭೂ ಕುಸಿತದ ಪ್ರಮಾದಿಂದ ಪಾರಾಗಿದೆ. ಡಾಬರು ರಸ್ತೆಯಲ್ಲಿ ಕುಸಿತ ಉಂಟಾಗಿರುವುದು ವಿಧಾನಸೌಧದ ಬಳಿ ನೆರೆದವರಲ್ಲಿ ಆತಂಕ ಮೂಡಿಸಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Read More »ಹಿರಿಯ ಐಪಿಎಸ್ ಅಧಿಕಾರಿ, ಪ್ರಸ್ತುತ ರೈಲ್ವೆ ಇಲಾಖೆ ಎಡಿಜಿಪಿಯಾಗಿರುವ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅವಕಾಶ ಕೋರಿದ್ದಾರೆ.
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ, ಪ್ರಸ್ತುತ ರೈಲ್ವೆ ಇಲಾಖೆ ಎಡಿಜಿಪಿಯಾಗಿರುವ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅವಕಾಶ ಕೋರಿದ್ದಾರೆ. ಈ ಮೂಲಕ ಪೊಲೀಸ್ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಪಡೆದು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ ಎಂಬ ಚರ್ಚೆ ಆರಂಭವಾಗಿದೆ. ಭಾಸ್ಕರ್ ರಾವ್ ಅವರ ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದರೆ ಈಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಸ್ವಯಂ ನಿವೃತ್ತಿಗಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು …
Read More »ಚಿತ್ರರಂಗದಲ್ಲಿ ಕಷ್ಟಪಡುತ್ತಿದ್ದ ಯುವತಿಯರೇ ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ದಂಧೆಗೆ ಟಾರ್ಗೆಟ್
ಉದ್ಯಮಿ ರಾಜ್ ಕುಂದ್ರಾ ವಿರುದ್ಧ ದಾಖಲಾಗಿರುವ ಅಶ್ಲೀಲ ಸಿನಿಮಾ ತಯಾರಿಕೆ ಮತ್ತು ಹಂಚಿಕೆ ಪ್ರಕರಣ ಕುಂದ್ರಾ ಪಾಲಿಗೆ ಮತ್ತಷ್ಟು ಉರುಳಾಗಿದೆ. ದಂಧೆಯಿಂದ ಕೋಟಿಗಟ್ಟಲೆ ಹಣವನ್ನು ರಾಜ್ ಸಂಪಾದಿಸಿದ್ದಾರೆ ಎಂದು ಪೊಲೀಸರು ಚಾರ್ಜ್ಶೀಟಿನಲ್ಲಿ ಆರೋಪಿಸಿದ್ಧಾರೆ. ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಭಾಗಿಯಾಗಿರುವ ‘ಪೋರ್ನ್ ಫಿಲ್ಮ್ ಕೇಸ್’ಗೆ ಸಂಬಂಧಪಟ್ಟಂತೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 1,500 ಪುಟಗಳ ಈ ಚಾರ್ಜ್ ಶೀಟ್ನಲ್ಲಿ ರಾಜ್ ಕುಂದ್ರಾರನ್ನು …
Read More »ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆಗೆ ಪೂರ್ಣಕುಂಭ ಸ್ವಾಗತ
ವಿಶ್ವವಿಖ್ಯಾತ ದಸರಾ ಮಹೋತ್ಸವದ ಗಜಪಡೆ ಗುರುವಾರ ಅರಣ್ಯಭವನದಿಂದ ಅರಮನೆ ಪ್ರವೇಶಿಸಿದ್ದು, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಅರಣ್ಯಭವನದಲ್ಲಿ ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳನ್ನು ಸಿಂಗರಿಸಿ ಗಜಪಡೆಗೆ ಪೂಜಾ ಕಾರ್ಯ ನೆರವೇರಿಸಲಾಯಿತು. ನಂತರ ವಾದ್ಯ ಮೇಳದೊಂದಿಗೆ ಗಜಪಡೆ ಅರಮನೆಯತ್ತ ಹೆಜ್ಜೆ ಹಾಕಿದವು. ಅರಮನೆಯ ಜಯಮಾರ್ತಂಡ ದ್ವಾರದಲ್ಲಿ ಗಜಪಡೆಗೆ ಹೂಮಳೆಗರೆಯಲಾಯಿತು. ಸಚಿವ ಎಸ್.ಟಿ.ಸೋಮಶೇಖರ್ ಅವರು ಪೂಜೆ ನೆರವೇರಿಸಿ ಸ್ವಾಗತ ಕೋರಿದರು. ಇದೇ ವೇಳೆ ಕಬ್ಬು, ಬೆಲ್ಲ, …
Read More »ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಜೊಲ್ಲೆ
ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅರ್ಚಕ, ಸಹಾಯಕ ಅರ್ಚಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯ ಹಿಂದೂ ದೇವಾಲಯಗಳ ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ವಿಕಾಸಸೌಧದಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ, ಅವರ ಕಚೇರಿಯಲ್ಲಿ …
Read More »
Laxmi News 24×7