Home / ರಾಜಕೀಯ (page 1858)

ರಾಜಕೀಯ

ಸಂಭವನೀಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಲೆಕ್ಕಾಚಾರ

ಬೆಂಗಳೂರು, ಫೆ.12- ಸಚಿವ ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆ ಕಸರತ್ತಿನಿಂದ ಹೊರ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇದೀಗ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡುವುದು ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ರಾಜಧಾನಿ ಬೆಂಗಳೂರು, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಿಗೆ ಉಸ್ತುವಾರಿ ವಹಿಸಿಕೊಳ್ಳಲು ಆಡಳಿತಾರೂಢ ಬಿಜೆಪಿಯಲ್ಲಿ ಪೈಪೋಟಿಯೇ ಆರಂಭವಾಗಿದೆ. ಇದು ಯಡಿಯೂರಪ್ಪನವರಿಗೆ ಮತ್ತೊಂದು ಸುತ್ತಿನ ಬಿಕ್ಕಟ್ಟು ತರುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ನಿರೀಕ್ಷಿತ ಖಾತೆಗಳು ಸಿಕ್ಕಿಲ್ಲ ಎಂದು ಮುನಿಸಿಕೊಂಡಿದ್ದ ಕೆಲವು ಸಚಿವರ …

Read More »

ಮಂತ್ರಿ ಸ್ಥಾನ ನೀಡದ ಹೈಕಮಾಂಡ್ ಮುಂದೆ ಉಮೇಶ್ ಕತ್ತಿ ಹೊಸ ಬೇಡಿಕೆ

ನವದೆಹಲಿ: ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದೆ ನಿರಾಶೆಗೊಂಡಿದ್ದ ಶಾಸಕ ಉಮೇಶ್ ಕತ್ತಿ ಹೊಸ ದಾಳ ಉರುಳಿಸಿದ್ದಾರೆ. ಮಂತ್ರಿ ಮಾಡಿ ಇಲ್ಲ ರಾಜ್ಯಸಭೆಗೆ ಟಿಕೆಟ್ ನೀಡಿ ಎಂದು ಹೈಕಮಾಂಡ್ ಮುಂದೆ ಪಟ್ಟು ಹಿಡಿದಿದ್ದಾರೆ. ದೆಹಲಿಯಲ್ಲಿರುವ ಉಮೇಶ್ ಕತ್ತಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಯಾಗಿ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಜೂನ್ ನಲ್ಲಿ ನಾಲ್ಕು ಸ್ಥಾನಗಳು ಖಾಲಿಯಾಗಲಿದ್ದು, ಈ ಪೈಕಿ ಎರಡು …

Read More »

ಡಬಲ್ ಖುಷಿಯಲ್ಲಿ ಗೋಕಾಕ ಸಾಹುಕಾರ್, ಸಚಿವರಾಗಿ ಮೊಮ್ಮಗನನ್ನು ನೊಡಲು ಸ್ವ-ಕ್ಷೇತ್ರಕ್ಕೆ ಬಂದ ಲಕ್ಷ್ಮೀ ಪುತ್ರ.

ಡಬಲ್ ಖುಷಿಯಲ್ಲಿ ಗೋಕಾಕ ಸಾಹುಕಾರ್, ಸಚಿವರಾಗಿ ಮೊಮ್ಮಗನನ್ನು ನೊಡಲು ಸ್ವ-ಕ್ಷೇತ್ರಕ್ಕೆ ಬಂದ ಲಕ್ಷ್ಮೀ ಪುತ್ರ..!! ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ ಗೋಕಾಕ ಕ್ಷೇತ್ರದ ಶಾಸಕರು ಹಾಗೂ ನೂತನ ಸಚಿವರು ಆದ ರಮೇಶ ಜಾರಕಿಹೊಳಿ ಅವರು ಡಬಲ್ ಖುಷಿಯಲ್ಲಿ ತೆಲಾಡುತ್ತಿದ್ದಾರೆ.ಅವರು ಅಂದು ಕೊಂಡಂತೆ ಜಲಸಂಪನ್ಮೂಲ ಖಾತೆ ಪಡೆದು ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು ಒಂದು ಖುಷಿ ಆದರೆ ಅವರ ಹಿರಿಯ ಸುಪುತ್ರನಿಗೆ ಗಂಡು ಮಗು ಆಗಿದ್ದರಿಂದ ಅವರು ತಾತನಾಗಿರುವ ಖುಷಿ ಮತ್ತೊಂದು …

Read More »

ಯಕ್ಷಗಾನಂ ಗೆಲ್ಗೆ! ಯಕ್ಷಗಾನಂ ಬಾಳ್ಗೆ!

ಯಕ್ಷಗಾನಂ ಗೆಲ್ಗೆ! ಯಕ್ಷಗಾನಂ ಬಾಳ್ಗೆ! ಉತ್ತರ ಕನ್ನಡ ಜಿಲ್ಲೆಯ ವಿಶ್ವ ಪ್ರಸಿದ್ಧ ಬನವಾಸಿಯ ಕದಂಬೋತ್ಸವದ ನಿಮಿತ್ತ ರಾಜ್ಯಮಟ್ಟದ ಕಲಾವಿದರುಗಳಿಂದ ನಡೆದ ಸಾಂಸ್ಕೃತಿಕ ವೈಭವ, ಯಕ್ಷ ವೈಭವದ ದೃಶ್ಯಾವಳಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ವೀಕ್ಷಿಸಿದರು. …

Read More »

ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವ ಕದಂಬೋತ್ಸವ – 2020 “

ಬನವಾಸಿ ” ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವ ಕದಂಬೋತ್ಸವ – 2020 ” ಉತ್ತರ ಕನ್ನಡದ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವ-೨೦೨೦ ಕಾರ್ಯಕ್ರಮದ ಅಂಗವಾಗಿ ಪ್ರಚಾರದ ನಿಮಿತ್ತ ಕದಂಬೋತ್ಸವದ ಪೂರ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲೂ ಸಂಚರಿಸಿ ಬನವಾಸಿಗೆ ಆಗಮಿಸಿದ ಕದಂಬ ಜ್ಯೋತಿಯನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ …

Read More »

ಫೆ.13 ಗುರುವಾರ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬರೋಬ್ಬರೀ 400 ಕನ್ನಡ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದೆ.

  ಬೆಂಗಳೂರು: ಸರೋಜಿ ಮಹಿಷಿ ವರದಿ ಜಾರಿ ವಿಚಾರವಾಗಿ ಫೆ.13 ಗುರುವಾರ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬರೋಬ್ಬರೀ 400 ಕನ್ನಡ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದೆ. ಯಾರೆಲ್ಲಾ ಬೆಂಬಲ ನೀಡುತ್ತಿದ್ದಾರೆ? ಬರೋಬ್ಬರಿ 400 ಕನ್ನಡ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದೆ. ಕನ್ನಡ ಸಂಘಟನೆಗಳ ಒಕ್ಕೂಟ, ಓಲಾ-ಬಬರ್ ಕಾರು ಚಾಲಕರ ಸಂಘ, ಚಾಲಕರ ಸಂಘಟನೆಗಳ ಒಕ್ಕೂಟ, ಆಟೋ-ಟ್ಯಾಕ್ಸಿ ಚಾಲಕರ ಸಂಘ ಕರ್ನಾಟಕ ಬಂದ್‍ಗೆ ಬೆಂಬಲ ಸೂಚಿಸಿದೆ. ಇತ್ತ …

Read More »

ಡಿಕೆ ಶಿವಕುಮಾರ್ ವಿರುದ್ಧ ಬಂಡಾಯ ಸಾರಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಕೊನೆಗೂ ಡಿಕೆಶಿ ಬಳಿಯಿದ್ದ ಜಲಸಂಪನ್ಮೂಲ ಖಾತೆ ಸಿಕ್ಕಿದೆ.

ಬೆಂಗಳೂರು: ಬೆಳಗಾವಿ ರಾಜಕಾರಣ ಪ್ರವೇಶಿಸಿದ್ದಕ್ಕೆ ಅಸಮಾಧಾನಗೊಂಡು ಡಿಕೆ ಶಿವಕುಮಾರ್ ವಿರುದ್ಧ ಬಂಡಾಯ ಸಾರಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಕೊನೆಗೂ ಡಿಕೆಶಿ ಬಳಿಯಿದ್ದ ಜಲಸಂಪನ್ಮೂಲ ಖಾತೆ ಸಿಕ್ಕಿದೆ. ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಅಥವಾ ಇಂಧನ ಇಲಾಖೆ ಸಿಗಲಿದೆ ಎಂದು ಹೇಳಲಾಗುತಿತ್ತು. ಆದರೆ ಈಗ ವೈದ್ಯಕೀಯ ಶಿಕ್ಷಣ ಖಾತೆ ಫೈನಲ್ ಆಗಿದೆ ಮಂತ್ರಿಗಳಾಗಿ 10 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರೂ ಇನ್ನು ಖಾತೆ ಹಂಚಿಕೆ ಆಗಿರಲಿಲ್ಲ. ಜಲಸಂಪನ್ಮೂಲ ಖಾತೆ ಸಿಗಬೇಕೆಂದು ಜಾರಕಿಹೊಳಿ ಪಟ್ಟು …

Read More »

ಕುಮಾರಸ್ವಾಮಿಯವರ ಪುತ್ರ, ನಟ ನಿಖಿಲ್‍ಕುಮಾರಸ್ವಾಮಿ ಅವರ ವಿವಾಹದ ನಿಶ್ಚಿತಾರ್ಥ ಇಂದು ಖಾಸಗಿ ಹೊಟೇಲ್‍ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಬೆಂಗಳೂರು, ಫೆ.10-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿಯವರ ಪುತ್ರ, ನಟ ನಿಖಿಲ್‍ಕುಮಾರಸ್ವಾಮಿ ಅವರ ವಿವಾಹದ ನಿಶ್ಚಿತಾರ್ಥ ಇಂದು ಖಾಸಗಿ ಹೊಟೇಲ್‍ನಲ್ಲಿ ಅದ್ಧೂರಿಯಾಗಿ ನೆರವೇರಿತು. ಮಾಜಿ ಸಚಿವ ಎಂ.ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್‍ಕುಮಾರಸ್ವಾಮಿ ವಿವಾಹದ ನಿಶ್ಚಿತಾರ್ಥವು ಎರಡೂ ಕುಟುಂಬಗಳ ಬಂಧು-ಬಳಗ ಹಾಗೂ ಹಿರಿಯರ ಸಮ್ಮುಖದಲ್ಲಿ ನೆರವೇರಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರು ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು.   ವಿವಿಧ …

Read More »

ಯಾವುದೇ ಕ್ಷಣದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಸಾಧ್ಯತೆಯಾರಿಗೆ ಯಾವ ಖಾತೆ ಸಾಧ್ಯತೆ?

ಯಾವುದೇ ಕ್ಷಣದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಸಾಧ್ಯತೆ ಬೆಂಗಳೂರು,ಫೆ.10- ಸಾಕಷ್ಟು ಕಸರತ್ತು ನಡೆಸಿ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಯಾವುದೇ ಕ್ಷಣದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ. ಈ ಮೊದಲೇ ತಮ್ಮ ಮಂತ್ರಿ ಮಂಡಲದಲ್ಲಿದ್ದ 17 ಸಚಿವರಿಗೂ ಹೆಚ್ಚುವರಿಯಾಗಿ ಖಾತೆಗಳ ಹಂಚಿಕೆ ಮಾಡಲಾಗಿತ್ತು. ಇದೀಗ ಹೆಚ್ಚುವರಿ ಖಾತೆಗಳನ್ನು ವಾಪಸ್ ಪಡೆದು ನೂತನ ಸಚಿವರಿಗೆ ಹಂಚಿಕೆ ಮಾಡಲಾಗುತ್ತದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಸ್ಪಷ್ಟನೆ …

Read More »

ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ ಎಂದು ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಗೋಕಾಕ್: ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ ಎಂದು ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು, ರವಿವಾರದಂದು ನಗರದಲ್ಲಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಅಭಿಮಾನದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ. ಅವರು ವಿರೋಧ ಮಾಡದಿದ್ರೆ ಈಷ್ಟೇಲ್ಲಾ ಬೆಳವಣಿಗೆ ನಡೆಯಲು ಸಾದ್ಯವಾಗುತ್ತಿರಲಿಲ್ಲ, ದೇವರ ದಯೆ, ಕ್ಷೇತ್ರದ ಜನರ ಆಶಿರ್ವಾದದಿಂದ ಯಶಸ್ಸು ಸಿಕ್ಕಿದೆ ಎಂದರು. ಅದಕ್ಕಾಗಿ …

Read More »