Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಡಬಲ್ ಖುಷಿಯಲ್ಲಿ ಗೋಕಾಕ ಸಾಹುಕಾರ್, ಸಚಿವರಾಗಿ ಮೊಮ್ಮಗನನ್ನು ನೊಡಲು ಸ್ವ-ಕ್ಷೇತ್ರಕ್ಕೆ ಬಂದ ಲಕ್ಷ್ಮೀ ಪುತ್ರ.

ಡಬಲ್ ಖುಷಿಯಲ್ಲಿ ಗೋಕಾಕ ಸಾಹುಕಾರ್, ಸಚಿವರಾಗಿ ಮೊಮ್ಮಗನನ್ನು ನೊಡಲು ಸ್ವ-ಕ್ಷೇತ್ರಕ್ಕೆ ಬಂದ ಲಕ್ಷ್ಮೀ ಪುತ್ರ.

Spread the love

ಡಬಲ್ ಖುಷಿಯಲ್ಲಿ ಗೋಕಾಕ ಸಾಹುಕಾರ್, ಸಚಿವರಾಗಿ ಮೊಮ್ಮಗನನ್ನು ನೊಡಲು ಸ್ವ-ಕ್ಷೇತ್ರಕ್ಕೆ ಬಂದ ಲಕ್ಷ್ಮೀ ಪುತ್ರ..!!

ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿದ ಗೋಕಾಕ ಕ್ಷೇತ್ರದ ಶಾಸಕರು ಹಾಗೂ ನೂತನ ಸಚಿವರು ಆದ ರಮೇಶ ಜಾರಕಿಹೊಳಿ ಅವರು ಡಬಲ್ ಖುಷಿಯಲ್ಲಿ ತೆಲಾಡುತ್ತಿದ್ದಾರೆ.ಅವರು ಅಂದು ಕೊಂಡಂತೆ ಜಲಸಂಪನ್ಮೂಲ ಖಾತೆ ಪಡೆದು ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು ಒಂದು ಖುಷಿ ಆದರೆ ಅವರ ಹಿರಿಯ ಸುಪುತ್ರನಿಗೆ ಗಂಡು ಮಗು ಆಗಿದ್ದರಿಂದ ಅವರು ತಾತನಾಗಿರುವ ಖುಷಿ ಮತ್ತೊಂದು ಆಗಿದೆ.

ಹೌದು..!! ಸಂತೋಷ ಜಾರಕಿಹೊಳಿ ಅವರು ಇತ್ತೀಚಿಗೆ ಗಂಡು ಮಗುವಿಗೆ ತಂದೆ ಆಗಿರುವ ಸುದ್ದಿ ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮಕ್ಕೆ ಕಾರಣವಾಗಿತ್ತು.ರಮೇಶ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಸಚಿವ ಸಂಪುಟದಲ್ಲಿ ಸೇರುವ ಬಗ್ಗೆ ತಯಾರಿ ನಡೆಸುತ್ತಿರುವಾಗ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನ ಆಗಿತ್ತು.ಈ ವಿಷಯ ಅವರಿಗೆ ಮೊದಲನೇ ಖುಷಿ ತಂದು ಕೊಟ್ಟಿತ್ತು.
ಇನ್ನು ಈ ಸಂತೋಷದ ವಿಷಯ ಜೊತೆಗೆ ಕೆಲವೇ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ಕೂಡ ಒಲಿದು ಬಂದಿತು.ಮೊಮ್ಮಗನ ಕಾಲ್ಗುಣ ಹಾಗೂ ಮಹಾಲಕ್ಷ್ಮಿ ದೇವಿಯ ಕೃಪೆ ಮತ್ತು ಸ್ವಕ್ಷೇತ್ರದ ಜನರ ಆಶೀರ್ವಾದಗಳಿಂದ ಅವರು ರಾಜ್ಯ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಏರಿದರು.ಸಚಿವರಾದ ನಂತರ ಬೆಂಗಳೂರಿನಿಂದ ಸ್ವ ಕ್ಷೇತ್ರದ ಕಡೆ ಮುಖ ಮಾಡಿದ ರಮೇಶ ಜಾರಕಿಹೊಳಿ ಅವರು ತಮ್ಮ ಮುದ್ದು ಮೊಮ್ಮಗನನ್ನು ನೊಡಿ ಹರ್ಷ ವ್ಯಕ್ತಪಡಿಸಿದರು.ಇನ್ನು ತಮ್ಮ ಅಭಿಮಾನಿಗಳು ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು‌.ಒಟ್ಟಿನಲ್ಲಿ ಹೊಸ ವರ್ಷ ರಮೇಶ ಜಾರಕಿಹೊಳಿ ಅವರಿಗೆ ಶುಭ ತಂದಿದೆ.ಇದೆ ರೀತಿ ಅವರು ಇನ್ನು ಉನ್ನತ ಮಟ್ಟಕ್ಕೆ ಏರಲಿ ಎಂದು ಸಮಸ್ತ ಅಭಿಮಾನಿ ಬಳಗದ ಆಶಯವಾಗಿದೆ.


Spread the love

About Laxminews 24x7

Check Also

ಹಳೆಯ ದ್ವೇಷಕ್ಕೆ 200 ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು!

Spread the love ದಾವಣಗೆರೆ: ಇಬ್ಬರು ವ್ಯಕ್ತಿಗಳ ನಡುವೆ ಇದ್ದ ಹಳೆಯ ದ್ವೇಷಕ್ಕೆ ತೋಟದಲ್ಲಿ ಬೆಳೆದಿದ್ದ ಅಡಿಕೆ ಗಿಡಗಳು ನಾಶವಾಗಿವೆ. ದಾವಣಗೆರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ