Breaking News
Home / ಮೂಡಲಗಿ (page 9)

ಮೂಡಲಗಿ

ಜನ ಹಾಗೂ ಜಾನುವಾರಿಗಳಿಗೆ ಕುಡಿಯುವ ನೀರಿಗಾಗಿ 10 ದಿನಗಳವರೆಗೆ ನೀರು ಬಿಡಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ

ಹಿಡಕಲ್ ಜಲಾಶಯದಿಂದ ಜಿಆರ್‌ಬಿಸಿ, ಜಿಎಲ್‌ಬಿಸಿ, ಸಿಬಿಸಿ ಕಾಲುವೆಗಳಿಗೆ ನೀರು ಬಿಡಲು ಕೆಎಮ್‌ಎಫ್ ಅಧ್ಯಕ್ಷ ಬಾಲಚ ಮೂಡಲಗಿ: ಹಿಡಕಲ್ ಜಲಾಶಯದಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ತಕ್ಷಣವೇ ಘಟಪ್ರಭಾ ಎಡದಂಡೆ, ಘಟಪ್ರಭಾ ಬಲದಂಡೆ ಮತ್ತು ಸಿಬಿಸಿ ಕಾಲುವೆಗಳಿಗೆ ನೀರನ್ನು ಬಿಡುಗಡೆ ಮಾಡುವಂತೆ ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗುರುವಾರ ಸಂಜೆ ಪ್ರತಿಕಾ ಹೇಳಿಕೆಯನ್ನು ನೀಡಿರುವ ಅವರು, …

Read More »

ಮನೆ ಕಟ್ಟೋರಿಗೆ ಬಿಗ್ ಶಾಕ್ : ಶೀಘ್ರವೇ ಸಿಮೆಂಟ್ ಪ್ರತಿ ಚೀಲಕ್ಕೆ 50 ರೂ. ಏರಿಕೆ!

ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.  ಟಿಪ್ಪು ಸುಲ್ತಾನ್ `ಮೈಸೂರು ಹುಲಿ’ ಬಿರುದು ಕೈಬಿಡಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿರುವ ಕಾರಣ ದೇಶಿಯ ಸಿಮೆಂಟ್ ಕಂಪನಿಗಳು ಶೀಘ್ರವೇ ಸಿಮೆಂಟ್ ಬೆಲೆಯನ್ನು 25-50 ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹಣಕಾಸು ಸೇವಾ ಸಂಸ್ಥೆ ಕ್ರಿಸಿಲ್ …

Read More »

ಪಕ್ಷದ ಚಟುವಟಿಕೆಯಿಂದ ದೂರವಿದ್ದ ಜಮೀರ್.. ಖಾಸಗಿ ಹೋಟೆಲ್ ನಲ್ಲಿ ಸುರ್ಜೆವಾಲಾ ಭೇಟಿ, ಚರ್ಚೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಚಟುವಟಿಕೆಯಿಂದ ದೂರವೇ ಉಳಿದಿರುವ ಮಾಜಿ ಸಚಿವ ಜಮೀರ್ ಅಹಮದ್ ಖಾನ್​ ಅವರು ಬುಧವಾರ ರಾತ್ರಿ ದಿಢೀರ್ ಆಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಮುಂದುವರೆದ ಜಮೀರ್ ಅಹ್ಮದ್ ಖಾನ್ ಅಸಮಾಧಾನ ಈ ಭೇಟಿ ಮೂಲಕ ಇನ್ನೊಂದು ಹಂತವನ್ನು ತಲುಪಿದೆ ಎಂಬ ಮಾಹಿತಿ ಇದ್ದು, ತಮ್ಮ ಬೇಸರ, ಅಸಮಾಧಾನ ಹಾಗೂ ಕೋಪವನ್ನು ಸುರ್ಜೇವಾಲಾ ಅವರಿಗೆ ವಿವರಿಸಿದ್ದಾರೆ ಎಂಬ ಮಾಹಿತಿ ಇದೆ. …

Read More »

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಂಧಾನದ ಫಲ ಯಶಸ್ವಿ

    ಮೂಡಲಗಿ : ಇಂದಿನಿoದ ನಡೆಯಬೇಕಿದ್ದ ಪದವಿ(ಕಲಾ ವಿಭಾಗ) ಪರೀಕ್ಷೆಗಳನ್ನು ಮಾರ್ಚ 25 ರಿಂದ ಎಪ್ರೀಲ್ 11 ರವರೆಗೆ ನಡೆಸಲು ಉದ್ಧೇಶಿಸಲಾಗಿದ್ದು, ಪರೀಕ್ಷಾ ಕೇಂದ್ರದ ಬದಲಾವಣೆ ಕುರಿತಂತೆ ಎದ್ದಿರುವ ವಿವಾದವು ಇದೀಗ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದ ಬಗೆಹರಿದಿದ್ದು, ಪರೀಕ್ಷೆಯನ್ನು ಮೂಡಲಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೂಡಲಗಿ ಪಟ್ಟಣದ ಎಂಇಎಸ್ ಕಾಲೇಜಿನ ಕಲಾ ವಿಭಾಗದ ಕೇಂದ್ರವನ್ನು ನೆರೆಯ …

Read More »

ಮಣಿಪುರದಲ್ಲಿ ಬಿರೆನ್ ಸಿಂಗ್, ಗೋವಾದಲ್ಲಿ ಸಾವಂತ್ ಸಿಎಂ ಆಗಿ ಮುಂದುವರಿಕೆ ಸಾಧ್ಯತೆ

ನವದೆಹಲಿ: ಮಣಿಪುರದಲ್ಲಿ ಎನ್‌. ಬಿರೆನ್ ಸಿಂಗ್ ಹಾಗೂ ಗೋವಾದಲ್ಲಿ ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಗೋವಾದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಹೊಸ ಸರ್ಕಾರ ರಚನೆಯ ಸಂಬಂಧ ಪ್ರಮೋದ್‌ ಸಾವಂತ್ …

Read More »

ಮುಂಬರುವ ದಿನಗಳಲ್ಲಿ ಕಾಂಗ್ರೆಸ್​​ಗೆ ಇನ್ನೂ ಹೀನಾಯ ಸ್ಥಿತಿ‌ ಬರುತ್ತದೆ: ಗೋವಿಂದ ಕಾರಜೋಳ

ಬಾಗಲಕೋಟೆ: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್​​ಗೆ ಇನ್ನೂ ಹೀನಾಯ ಸ್ಥಿತಿ‌ ಬರುತ್ತದೆ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಕಾಂಗ್ರೆಸ್​ ನಾಯಕರು ವಿಶೇಷ ಫ್ಲೈಟ್ ಮಾಡಿಕೊಂಡು ಗೋವಾ, ಉತ್ತರಾಖಂಡ್​ಗೆ ಹೋಗಿದ್ದರು. ಬಾಡಿಗೆ ಕೊಟ್ಟು ವಾಪಸ್ ಬಂದಿದ್ದಾರೆ. ಕಾಂಗ್ರೆಸ್​ ಪರಿಸ್ಥಿತಿ ಇನ್ನೂ ಹೀನಾಯವಾಗುತ್ತದೆ. ಇಲ್ಲವಾದಲ್ಲಿ ನನ್ನ ಹೆಸರು ಗೋವಿಂದ ಕಾರಜೋಳ ಅಲ್ಲ ಎಂದು‌ ಟಾಂಗ್ ನೀಡಿದರು. ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ: ಐದು …

Read More »

ಕಳೆದ ಐದು ವರ್ಷಗಳಲ್ಲಿ ವಾಯು ಅಪಘಾತಗಳಲ್ಲಿ 42 ಸೇನಾ ಸಿಬ್ಬಂದಿ ಬಲಿ

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ಮೂರು ಸೇವೆಗಳಲ್ಲಿ ಹೆಲಿಕಾಪ್ಟರ್‌ಗಳು ಸೇರಿದಂತೆ ವಿಮಾನಗಳ ಅಪಘಾತಗಳಲ್ಲಿ 42 ರಕ್ಷಣಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ರಾಜ್ಯಸಭೆಯಲ್ಲಿ ಮಾಹಿತಿ ಒದಗಿಸಿದೆ. ರಾಜ್ಯಸಭೆಯಲ್ಲಿ ರಕ್ಷಣಾ ಖಾತೆಯ ರಾಜ್ಯ ಸಚಿವ ಅಜಯ್ ಭಟ್ ಹಂಚಿಕೊಂಡ ವಿವರಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಒಟ್ಟು ವಿಮಾನ ಅಪಘಾತಗಳ ಸಂಖ್ಯೆ 45 ಆಗಿದ್ದು, ಐಎಎಫ್ ಗರಿಷ್ಠ 29 ಅವಘಡಗಳನ್ನು ವರದಿ ಮಾಡಿದೆ.   ಕಳೆದ ಐದು ವರ್ಷಗಳಲ್ಲಿ ಭಾರತೀಯ …

Read More »

10 ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ರಸ್ತೆಗಳ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ಹತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು. ಶನಿವಾರದಂದು ತಾಲೂಕಿನ ಹಳ್ಳೂರ ಗ್ರಾಮದ ಗಾಂಧಿನಗರದಲ್ಲಿ ಆರ್.ಡಿ.ಪಿ.ಆರ್ ಯೋಜನೆಯಡಿ 10ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ಧೇಶಿಸಿರುವ ವಿವಿಧ ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ …

Read More »

BUDJET UPDATE ಬಳ್ಳಾರಿ, ಬೆಳಗಾವಿಯಲ್ಲಿ ಕೃಷಿ ಕಾಲೇಜು ನಿರ್ಮಾಣ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾರ್ಚ್ 04: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತನ್ನ ಚೊಚ್ಚಲ ಬಜೆಟ್‌ ಅನ್ನು ಮಂಡನೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಕೃಷಿ ವಲಯಕ್ಕೆ ನೀಡುವ ಕೊಡುಗೆಗಳ ಪ್ರಸ್ತಾಪ ಮಾಡಿದ್ದಾರೆ. ಬಳ್ಳಾರಿ, ಬೆಳಗಾವಿಯಲ್ಲಿ ಹೊಸ ಕೃಷಿ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.   ಕೃಷಿ ಕ್ಷೇತ್ರಕ್ಕೆ ನೀಡುವ ಕೊಡುಗೆಗಳ ಪ್ರಸ್ತಾಪ ಮಾಡಿದ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಳ್ಳಾರಿ ಜಿಲ್ಲೆಯ …

Read More »

ವಿದ್ಯಾರ್ಥಿಗಳು ಸುರಕ್ಷಿತವಾಗಿ ಕರೆ ತರಲು ಸಿಎಂಗೆ ಮನವಿ ಮಾಡಿರುವೆ: ಬಾಲಚಂದ್ರ ಜಾರಕಿಹೊಳಿ

  ಮೂಡಲಗಿ: ಯುದ್ಧ ಸನ್ನಿವೇಶ ನಿರ್ಮಾಣವಾಗಿರುವ ಉಕ್ರೇನ್‌ನಲ್ಲಿ ಮೂಡಲಗಿ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಬೆಳಗಾವಿ ಜಿಲ್ಲೆಯ ಏಳು ಜನ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸಕಲ ವ್ಯವಸ್ಥೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿರುವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಹೇಳಿದರು.   ಈ ಕುರಿತು ಶುಕ್ರವಾರ ಪ್ರಕಟಣೆ ನೀಡಿರುವ ಅವರು, ಯುದ್ಧ ರಾಷ್ಟ್ರದಲ್ಲಿ …

Read More »