Breaking News
Home / ಜಿಲ್ಲೆ / ಬೆಳಗಾವಿ (page 361)

ಬೆಳಗಾವಿ

ಅಥಣಿ ನಗರದಲ್ಲಿ ಸತತವಾಗಿ ಮಳೆ ಆಗುತ್ತಿರುವುದರಿಂದ ಕೆಲವು ಕಡೆ ಮಳೆ ನೀರು ನುಗ್ಗಿ ಮನೆಗಳು ಜಲಾವೃತವಾಗಿದ್ದರೆ

  ಅಥಣಿ ಪಟ್ಟಣದ ಶಾಂತಿನಗರದ ಜೇರೆ ಫ್ಲಾಟ ನಲ್ಲಿ ತಗ್ಗುಪ್ರದೇಶದಲ್ಲಿ ಇರುವ ಕೆಲವು ಮನೆಗಳಲ್ಲಿ ಮಳೆ ನೀರು ಮನೆಗಳಲ್ಲಿ ನುಗ್ಗಿ ಅಲ್ಲಿ ಮನೆಗಳಲ್ಲಿ ವಾಸವಿರುವ ಕುಟುಂಬಗಳ ಜೀವನ ಅಸ್ತವ್ಯಸ್ತವಾಗಿದೆ ನಮ್ಮ ಪ್ರತಿನಿಧಿ ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿ ವಾಸವಿರುವ ಸ್ಥಳೀಯರಾದ ಅಬ್ದುಲ್ ರೆಹಮಾನ್ ವಾರಿಮನಿ ಇವರು ಮಾತನಾಡಿ ಹಲವು ವರ್ಷದಿಂದ ಮಳೆ ಬಂದಾಗ ನಮ್ಮ ಮನೆಗಳಿಗೆ ಇದೇ ರೀತಿ ನೀರು ನುಗ್ಗುತ್ತವೆ ನಾವು ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ಹಾಗೂ …

Read More »

ರೈಲ್ವೆ ಬ್ರೀಜ್ ಗೆ ವ್ಯಕ್ತಿ ಯೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ

ಬೆಳಗಾವಿ:‌ ರೈಲ್ವೆ ಬ್ರೀಜ್ ಗೆ ವ್ಯಕ್ತಿ ಯೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. ನಗರದ ನೂತನವಾಗಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸೇತುವೆಗೆ ನೇಣು ಬಿಗಿದುಕೊಂಡು, ಸಾವಿಗೆ ಶರಣಾಗಿದ್ದಾನೆ. ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.   *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ …

Read More »

ಯುವಕನ ಹುಚ್ಚಾಟ: ಟೆಲಿಫೋನ್ ಟವರ್ ಮೇಲಿಂದ ನದಿಗೆ ಹಾರಿ ಈಜಾಟ!

ಚಿಕ್ಕೋಡಿ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಕೃಷ್ಣಾ ನದಿಯಂತೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಆದ್ರೆ ತುಂಬಿತುಳುಕುತ್ತಿರುವ ಕೃಷ್ಣಾ ನದಿಯಲ್ಲಿ ಯುವಕನೊಬ್ಬ ಹುಚ್ವಾಟ ಮೆರೆದಿದ್ದಾನೆ. ಟವರ್ ಮೇಲೇರಿ ನದಿಗೆ ಹಾರಿ ಮನಸಾರೆ ಈಜಾಟ ನಡೆಸಿದ ಯುವಕ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವಕ ಸಾಗರ್ ಕೋಳಿ ಎಂಬಾತನೇ ಈ ಹುಚ್ಚಾಟ ಮೆರೆದವ. ಸಾಗರ್ ಕೋಳಿ, ಟೆಲಿಫೋನ್ ಟವರ್ ಮೇಲೇರಿ ಅಲ್ಲಿಂದ ನದಿಗೆ ಹಾರಿ ಮನಸಾರೆ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಚುನಾವಣೆಗೆ ಸಂಬಂಧ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.

ಬೆಳಗಾವಿ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಉಪ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಹತಾಶರಾಗಿ ನಮ್ಮ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗೆ ನಾವು ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಅವರ ಹತಾಶೆಯ ಮಾತುಗಳಿಗೆ ಕಾರಣವೇನು ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದರು. ‘ಆರ್‌.ಆರ್. ನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯ …

Read More »

ಜಲಾವೃತವಾಗಿವೆ. ಇನ್ನೊಂದೆಡೆ, 50ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ.

ತೆಲಸಂಗ: ಸತತ ಮಳೆಯಿಂದಾಗಿ ಗ್ರಾಮದ ಸುತ್ತಮುತ್ತಲಿನ ಜಮೀನುಗಳು ಜಲಾವೃತವಾಗಿವೆ. ಇನ್ನೊಂದೆಡೆ, 50ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ. ಗುಡುಸಾಬ ಕರಜಗಿ ಅವರ ಮನೆಯ ಗೋಡೆ ಕುಸಿದು ಒಂದು ಆಡು ಸಾವಿಗೀಡಾಗಿದೆ. ಯಮನಪ್ಪ ಕಲಾಲ ಅವರ ಪುಟ್ಟ ಮಣ್ಣಿನ ಮನೆಗೆ ಹಾನಿಯಾಗಿದ್ದು, ಅವರು ಆಶ್ರಯಕ್ಕಾಗಿ ಅಂಗಲಾಚುತ್ತಿದ್ದಾರೆ. ‘ಮಣ್ಣಿನ ಇಟ್ಟಂಗಿಲೇ ಗೋಡೆ ಕಟ್ಟಿ ಮ್ಯಾಗ ಪತ್ರಾಸ್ ಹಾಕೊಂಡ ಜೀವನಾ ನಡೆಸಿದ್ದಿವ್ರಿ. ಮಳೆಯಿಂದ ಒಂದು ಮಗ್ಗಲು ಗೋಡೆ ಕುಸದೈತ್ರಿ. ದಿನಾ ಕೂಲಿ ಮಾಡಿ ಬದಕವ್ರ ನಾವು. …

Read More »

ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ.

ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾನದಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ರಾಜಾಪೂರ ಹಾಗೂ ಹಿಪ್ಪರಗಿ ಬ್ಯಾರೆಜ್‌ಗಳಿಂದ1,21,500 ಕ್ಯೂಸೆಕ್​,​ ಕೊಯ್ನಾ, ಆಲಮಟ್ಟಿ ಜಲಾಶಯಗಳಿಂದ ಕ್ಯೂಸೆಕ್,1,51,000 ಕ್ಯೂಸೆಕ್​ ಹಾಗೂ ದೂಧಗಂಗಾ ನದಿಯಿಂದ 11,616 ಕ್ಯೂಸೆಕ್​ ಸೇರಿ ಒಟ್ಟು 2,84,116 ಕ್ಯೂಸೆಕ್​ ನೀರನ್ನು ಕೃಷ್ಣಾನದಿಗೆ ಬಿಡಲಾಗಿದೆ. ಮಹಾರಾಷ್ಟ್ರದಲ್ಲಿ ಪ್ರದೇಶಗಳ ಮಳೆಯ ಪ್ರಮಾಣ ಕೊಯ್ನಾ – 64 ಮಿ.ಮೀ, ನವಜಾ-67 ಮಿ.ಮೀ, ಮಹಾಬಲೇಶ್ವರ -126 …

Read More »

ಸತತವಾಗಿ ಸುರಿದ ಮಳೆಯಿಂದ ತಾಲ್ಲೂಕಿನ ರೈತರ ಬೆಳೆದ ಬೆಳೆ ಸಂಪೂರ್ಣ ನೀರುಪಾಲು

ಅಥಣಿ  ತಾಲ್ಲೂಕಿನಾದ್ಯಂತ ಸತತವಾಗಿ ಮೂರು ದಿನದಿಂದ ಸುರಿದ ಮಳೆಯಿಂದ ಹಲವು ಕಡೆ ರೈತರು ಬೆಳೆದ ಕಬ್ಬು ,ಮೆಕ್ಕೆಜೋಳ, ಈರುಳ್ಳಿ ನೀರಿನಲ್ಲಿ ನಿಂತು ರೈತರಿಗೆ ತುಂಬಾ ನಷ್ಟವಾಗಿದೆ , ತಾಲ್ಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಹನುಮಂತ ಚಿತ್ರಟಿ ಇವರು ತಮ್ಮ ಜಮೀನಿನಲ್ಲಿ ಬೆಳೆದಂಥ ಈರುಳ್ಳಿ ಬೆಳೆದು ನೀರು ಪಾಲಾಗಿ ತುಂಬಾ ನಷ್ಟ ಅನುಭವಿಸಿದ್ದಾರೆ ಇದೇ ಸಂದರ್ಭದಲ್ಲಿ ಅವರು ಮಾತನಾಡಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಗೆ ಒಳ್ಳೆಯ ಬೆಲೆ ಇದೆ ಅಂತ ತಾವು ತಮ್ಮ ಎರಡು …

Read More »

ಶಾಂತವಾಗದ ವರುಣನ ಪ್ರತಾಪ, ಸೊಗಲ ಸೋಮೇಶ್ವರನಿಗೆ ವರುಣನ ದಿಗ್ಬಂಧನ

ಬೆಳಗಾವಿ: ವರುಣನ ರೌದ್ರಾವತಾರಕ್ಕೆ ಕರುನಾಡು ಕಂಗಾಲಾಗಿದೆ. ಕ್ಷಣ ಕ್ಷಣಕ್ಕೂ ವರುಣನ ಅವಾಂತರ ಹೆಚ್ಚಾಗ್ತಿದೆ. ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಸೊಗಲ ಸೋಮೇಶ್ವರ ದೇವಸ್ಥಾನ ಮುಳುಗಿದೆ. ಭಾರಿ ಮಳೆಯಿಂದಾಗಿ ನಿನ್ನೆ ಸಂಜೆ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿತ್ತು. ಅಪಾರ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆಯಲ್ಲಿ ಸೋಮೇಶ್ವರನ ಮೂರ್ತಿ ಕೂಡ ಭಾಗಶಃ ಜಲಾವೃತಗೊಂಡಿದೆ. ದೇವಸ್ಥಾನದ ಹೊರ ಭಾಗದಲ್ಲಿ ಮಳೆ ನೀರು ಝರಿಯಂತೆ ಉಕ್ಕಿ ಹರಿಯುತ್ತಿದೆ. ದೇವಸ್ಥಾನಕ್ಕೆ ನೀರು ನುಗ್ಗಿದ ದೃಶ್ಯ ಸಾಮಾಜಿಕ …

Read More »

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಪ್ರತಿಭೆಗಳಿಗೆ ಮಾಡಲಾದ ಅವಮಾನವಾಗಿದೆ:ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ –  ಇಲ್ಲಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿಭಾವಂತ ಗೋಲ್ಡ್ ಮೆಡಲಿಸ್ಟ್ ಗಳಿಗೆ ಗೋಲ್ಡ್ ಮೆಡಲ್ ಗಳನ್ನು ನೀಡಿ ಗೌರವಿಸದೆ ವಿದ್ಯಾರ್ಥಿಗಳನ್ನು ತಿರಸ್ಕರಿಸಿ ಅವಮಾನಿಸಿದೆ ಎಂದು ಶಾಸಕರೂ, ಕೆಪಿಸಿಸಿ ರಾಜ್ಯ ವಕ್ತಾರರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಜರುಗಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಂಟನೇಯ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಬೆಳಗಾವಿ ನಗರದ ನಿವಾಸಿ ಸೃಷ್ಟಿ ಗ್ಯಾನಿ ಎಂಬ ವಿದ್ಯಾರ್ಥಿನಿಯು ಇದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗವನ್ನು ಮಾಡಿದ್ದು, …

Read More »

ಕುಂಭದ್ರೋಣ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದ ರೈತರು ಕಂಗಾಲಾಗಿದ್ದಾರೆ.

ಚಿಕ್ಕೋಡಿ: ಬೆಳೆಗಳೆಲ್ಲವೂ ಭರಪೂರ ಬಂದಿದ್ದು, ಇನ್ನೇನು ಕಟಾವು ಮಾಡಬೇಕೆಂದು ಕೆಲ ರೈತರು ಯೋಚಿಸಿದರೆ, ಕೆಲ ರೈತರು ಫಸಲಿಗೆ ಬಂದ ಬೆಳೆಗಳನ್ನು ಕಟಾವು‌ ಮಾಡಿ ರಾಶಿ ಮಾಡಲು ಮುಂದಾದ ಸಂದರ್ಭದಲ್ಲೇ ಕುಂಭದ್ರೋಣ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದ ರೈತರು ಕಂಗಾಲಾಗಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮಳೆಯ ಜೊತೆಗೆ ಗಾಳಿಯೂ ಸಹಿತ ಜೋರಾಗಿ ಬೀಸುತ್ತಿರುವ ಪರಿಣಾಮ ಗೋವಿನ ಜೋಳ ಹಾಗೂ ಕಬ್ಬಿನ ಬೆಳೆ ನೆಲಸಮವಾಗಿವೆ. ಈ ಬಾರಿ ಮಳೆ …

Read More »