Breaking News
Home / ಜಿಲ್ಲೆ / ಬೆಳಗಾವಿ (page 258)

ಬೆಳಗಾವಿ

ಸತೀಶ ಜಾರಕಿಹೊಳಿ ಪುತ್ರ, ಪುತ್ರಿ ರಾಜಕೀಯ ಪ್ರವೇಶ

ಬೆಳಗಾವಿ: ಯಮಕನಮರಡಿ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಮ್ಮ ಪುತ್ರ ರಾಹುಲ್‌ ಜಾರಕಿಹೊಳಿ ಅವರನ್ನು ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ನಡೆದ ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಸಭೆಯಲ್ಲಿ ಪರಿಚಯಿಸಿದರು. ಇದರೊಂದಿಗೆ, ಸಕ್ರಿಯ ರಾಜಕಾರಣಕ್ಕೆ ಪ್ರವೇಶದ ಸಂದೇಶ ರವಾನಿಸಿದರು. ‘ರಾಹುಲ್‌ ಮಂಗಳವಾರದಿಂದಲೇ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ’ ಎಂದು ಸತೀಶ ಪ್ರಕಟಿಸಿದರು. ರಾಹುಲ್‌ ಅವರನ್ನು ಪಾಲ್ಗೊಂಡಿದ್ದ ಸದಸ್ಯರು ಹಾಗೂ ಮುಖಂಡರು ಸ್ವಾಗತಿಸಿದರು. ತಾವು ನಿರ್ದೇಶಕರಾಗಿರುವ ಸತೀಶ ಶುಗರ್ಸ್ …

Read More »

ಅಬಕಾರಿ ಪೊಲೀಸರ ದಾಳಿ 15 ಲಕ್ಷ ಮೌಲ್ಯದ ಗೋವಾ ಮದ್ಯ , ನಾಲ್ವರ ಬಂಧನ..!

ಸಹಾಯಕ ಅಬಕಾರಿ ಕಮಿಷನರ್ ಬೆಳಗಾವಿ ಇವರ ಮಾರ್ಗದರ್ಶನ ಅದರ ಅನ್ವಯ ಗೋಕಾಕ್ ವಲಯದ ಮೂಡಲಗಿ ತಾಲ್ಲೂಕಿನ ಸಂಗನಕೇರಿ ಬಳಿ ಅಬಕಾರಿ ದಾಳಿ ಮಾಡಲಾಗಿದೆ.   ಈ ದಾಳಿಯಲ್ಲಿ 9ಬಾಕ್ಸ್ 76.62 ಲೀ. ಸುಮಾರು ಹದಿನೈದು ಲಕ್ಷ ರೂ ಮೊತ್ತದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟಾಟಾ ಹೆಕ್ಸಾ ಕಾರ್ ಅನ್ನು ಕೂಡ ಸೀಜ್ ಮಾಡಲಾಗಿದೆ.   ವಶಪಡಿಸಿಕೊಂಡ ಒಟ್ಟು ಮೌಲ್ಯ ರೂ .15,35,000..ಈ ಪ್ರಕರಣವನ್ನು ಶಂಕರ್ ಗೌಡ …

Read More »

ಬೆಳಗಾವಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಯುವಕರ ಗುಂಪು….

ಬೆಳಗಾವಿ- ನಿನ್ನೆ ರಾತ್ರಿ ಹೊತ್ತು,ಅಟೋ ರಿಕ್ಷಾದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಯುವಕರಿಗೆ ಮನೆಗೆ ಹೋಗುವಂತೆ ಸೂಚಿಸಿದ ಪೋಲೀಸ್ ಪೇದೆಗಳ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿದ ಘಟನೆ ಬೆಳಗಾವಿ ದರ್ಬಾರ್ ಗಲ್ಲಿಯಲ್ಲಿ ನಡೆದಿದೆ. ಪೋಲೀಸರು ಬರುತ್ತಿದ್ದಂತೆಯೇ ರಿಕ್ಷಾದಲ್ಲಿದ್ದ ಕೆಲವು ಯುವಕರು ಮನೆಗೆ ಹೋಗಿದ್ದಾರೆ,ಆದ್ರೆ ಇಬ್ಬರು ಯುವಕರು ಪೋಲೀಸರ ಜೊತೆ ವಾದಕ್ಕಿಳಿದು,ಪೋಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಯುವಕರು ಪೋಲೀಸರ ಜೊತೆ ವಾದ ಶುರು ಮಾಡುತ್ತಿದ್ದಂತೆಯೇ,ಅಲ್ಲಿ ಯುವಕರ ಗುಂಪು ಜಮಾವಣೆಯಾಗಿದೆ.ಎಲ್ಲರೂ ಸೇರಿ …

Read More »

ಬಡವನ ಮನೆಯಲ್ಲಿ,ಫ್ರಿಡ್ಜ್,ಇಲ್ಲ,ಫ್ಯಾನ ಇಲ್ಲ,ಗ್ರ್ಯಾಂಡರ್ ಇಲ್ಲ, 1242 ರೂ ಕರೆಂಟ್ ಬಿಲ್ ಬಂದಿದೆ.

ಬೆಳಗಾವಿ- ರಾಜ್ಯ ಸರ್ಕಾರ ಗಪ್ ಚುಪ್ ಕೆರೆಂಟ್ ಬಿಲ್ ಹೆಚ್ಚಿಸಿದೆ,ಬೇಕಾಬಿಟ್ಟಿಯಾಗಿ ಕರೆಂಟ್ ಬಿಲ್ ಬರುತ್ತಿದೆ.ಮನಸ್ಸಿಗೆ ಬಂತೆ ಕರೆಙಟ್ ಬಿಲ್ ಹರಿಯುತ್ತಿರುವದಕ್ಕೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕ್ಷೇತ್ರದ ಬಡವನ ಮನೆಯಲ್ಲಿ,ಫ್ರಿಡ್ಜ್,ಇಲ್ಲ,ಫ್ಯಾನ ಇಲ್ಲ,ಗ್ರ್ಯಾಂಡರ್ ಇಲ್ಲ,ಆತನ ಮನೆಯಲ್ಲಿ ಉರಿಯೋದು ಮೂರು ಲೈಟ್ ಮಾತ್ರ,ಕರೆಂಟ್ ಬರೋದು ಎರಡು ತಾಸು,ಮೂರು ತಾಸು ಆದರೂ ಈ ಬಡವನಿಗೆ 1242 ರೂ ಕರೆಂಟ್ ಬಿಲ್ ಬಂದಿದೆ.ಇದೇ ರೀತಿ ಎಲ್ಲ ಲೈಟ್ ಬಿಲ್ ಗಳು …

Read More »

ವಧು- ವರರನ್ನು ಜೋಡಿಸುವ ಕೊಂಡಿಯಾಗಿರು ಮೆಟ್ರಿಮೊನಿಯಲ್ ಆನ್ ಲೈನ್ ವೆಬ್ ನಲ್ಲಿ ಫೇಕ್ ಅಕೌಂಟ್ ಮಾಡಿ ಹಣ ಸುಲಿಗೆ

ಮೆಟ್ರಿಮೊನಿಯಲ್ ವೆಬ್ ಸೈಟ್ ನಲ್ಲಿ ಅಕೌಂಟ್ ತೆರೆದು,ಅದೆಷ್ಟೋ ವಧು,ವರರು ದಾಂಪತ್ಯ ಜೀವನ ಆರಂಭಿಸಿದ್ದಾರೆ ಅದಕ್ಕೆ ಲೆಕ್ಕವೇ ಇಲ್ಲ ಆದ್ರೆ ಸೈಬರ್ ವಂಚಕರು ಇದನ್ನು ದುರುಪಯೋಗ ಪಡೆಸಿಕೊಂಡು,ಫೇಕ್ ಅಕೌಂಟ್ ತೆರೆದು,ವಿಡಿಯೋ ಕಾಲ್ ಮಾಡಿ ಹಣ ಸುಲಿಗೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಧು- ವರರನ್ನು ಜೋಡಿಸುವ ಕೊಂಡಿಯಾಗಿರು ಮೆಟ್ರಿಮೊನಿಯಲ್ ಆನ್ ಲೈನ್ ವೆಬ್ ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ,ಐ ಲೈಕ್ ಯೂ ಅಂತಾ ಮೆಸ್ಸೇಜ್ ಮಾಡಿ,ನಂತರ ವಿಡಿಯೋ ಕಾಲ್ ಮಾಡಿ, …

Read More »

ಯಡಿಯೂರಪ್ಪ ಇನ್ನೂ ಎರಡು ವರ್ಷ ಮುಖ್ಯಮಂತ್ರಿ ಆಗಿರಲಿ: ಸತೀಶ್ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದರು.ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯಾಧ್ಯಂತ ಈಗಾಗಲೇ ಬೈಲಹೊಂಗಲ, ಗೋಕಾಕ,ಬೆಳಗಾವಿ, ಕುಡಚಿ,ರಾಯಭಾಗ ಮತ್ತು ಕಾಗವಾಡ ಸೇರಿದಂತೆ ಹಲವೆಡೆ ಭೇಟಿ ನೀಡಿ ಕೊರೊನಾ ಸೊಂಕಿತರು ಮತ್ತು ವೈದ್ಯರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ. ಸಮಸ್ಯೆಗಳನ್ನು ಸರ್ಕಾರದ ಮುಂದಿಡಲಿದ್ದೇವೆ ಎಂದರಲ್ಲದೆ ತೈಲ …

Read More »

ಯಮಕನಮರಡಿ: ಬಾಲಕಿಯೊಬ್ಬಳ ಮೇಲೆ ಅವಳ ಸಂಬಂಧಿಕನೇ ಅತ್ಯಾಚಾರ ಎಸಗಿದ ಘಟನೆ

ಯಮಕನಮರಡಿ: ಬಾಲಕಿಯೊಬ್ಬಳ ಮೇಲೆ ಅವಳ ಸಂಬಂಧಿಕನೇ ಅತ್ಯಾಚಾರ ಎಸಗಿದ ಘಟನೆ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಜೈ ಹನುಮಾನ ನಗರದ ತೋಟ ಮನೆಯ ಕಬ್ಬಿನ ಗದ್ದೆಯಲ್ಲಿ ಶನಿವಾರ ನಡೆದಿದೆ. ಅತ್ಯಾಚಾರ ಎಸಗಿದ ಆರೋಪಿ ಮಾರುತಿ ಪೂಜೇರಿ(42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 14ವರ್ಷ ಬಾಲಕಿ ತನ್ನ ಮಾವನ ಮನೆಯಲ್ಲಿ ಬಹಳ ದಿನದಿಂದ ವಾಸ ಇದ್ದಳು. ಶನಿವಾರ ಆರೋಪಿ ಆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಮನನೊಂದು ವಿಷ ಸೇವಿಸಿದ್ದು, ಆ …

Read More »

ಗೋಕಾಕ ಡೆವಲಪರ್ಸ್ ಕಡೆಯಿಂದ ಉಚಿತ ವೀಲ್ ಚೆರ್ ವಿತರಣೆ

ಗೋಕಾಕ: ಇಲ್ಲಿಯ ಉಪನೊಂದಣಿ ಕಚೇರಿಗೆ ಆಗಮಿಸುವ ಅಂಗವಿಕಲರಿಗೆ, ವಯಸ್ಸಾದ ವೃದ್ದರಿಗೆ ಸಹಾಯವಾಗುವ ನಿಟ್ಟಿನಲ್ಲಿ ಗೋಕಾಕ ಡೆವಲಪರ್ಸ್ ಅವರು ವ್ಹೀಲ್‍ಚೇರ್‍ನ್ನು ಸೋಮವಾರದಂದು ಉಪನೊಂದಣಿ ಅಧಿಕಾರಿ ಶ್ರೀಮತಿ ಕಲಾವತಿ ಮಳವಾಡೆ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದಸ್ತ ಬರಹಗಾರರಾದ ಮಹೇಶ ಕುಲಕರ್ಣಿ, ವಿಶ್ವಾಸ ಸುಣಧೋಳಿ, ಮಹ್ಮದಅಲಿ ನೇಗಿನಹಾಳ, ರಾಜು ಅಥಣಿ, ಶಿವಾನಂದ ಶಿರಸಂಗಿ, ಪಂಚಾಕ್ಷರಿ ಹಿರೇಮಠ, ಅಪ್ಪು ವಾಲಿಕರ ಸೇರಿದಂತೆ ಅನೇಕರು ಇದ್ದರು.

Read More »

ಮೂಡಲಗಿಯಲ್ಲಿಂದು ಜರುಗಿದ ಟಾಸ್ಕ್‍ಪೋರ್ಸ ಸಭೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಕೋವಿಡ್ ಎರಡನೆಯ ಅಲೆಯ ವಿರುದ್ದ ಹೋರಾಟ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ್‍ಗಳ ಕಾರ್ಯ ಶ್ಲಾಘನೀಯವಾದದ್ದು. ದುಡಿದ ಎಲ್ಲ ವಾರಿಯರ್ಸ್‍ಗಳಿಗೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲಿಸಿದರು. ಸೋಮವಾರದಂದು ಪಟ್ಟಣದ ಈರಣ್ಣ ದೇವಸ್ಥಾನದ ಸಭಾಭವನದಲ್ಲಿ ಕೋವಿಡ್-19 ಟಾಸ್ಕಪೋರ್ಸ ಮತ್ತು ವಿವಿಧ ಇಲಾಖಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರದಂತೆ ಇದರಲ್ಲಿ ಭಾಗಿಯಾಗಿರುವ ಎಲ್ಲ ವಾರಿಯರ್ಸ್‍ಗಳ ಕಾರ್ಯಕ್ಕೆ …

Read More »

ಸಹೋದರನ ಪುತ್ರನ ಹುಟ್ಟುಹಬ್ಬದ ಪ್ರಯುಕ್ತ ಹುಲಿ ದತ್ತು ಪಡೆದ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ತಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಪುತ್ರ ಹರ್ಷಿತ್ ಜನ್ಮದಿನದ ಅಂಗವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಬೆಳಗಾವಿಯ ಭೂತರಾಮನಹಟ್ಟಿಯ ಕಿತ್ತೂರ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿ ಶೌರ್ಯ ಎನ್ನುವ ಹುಲಿಯನ್ನು ದತ್ತು ಪಡೆದಿದ್ದಾರೆ. ಆರಂಭಿಕವಾಗಿ 1 ಲಕ್ಷ ರೂ.ಗಳ ಚೆಕ್ ನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ ಅವರು ಹುಲಿಯ ಸಂಪೂರ್ಣ ಜೀವಿತಾವಧಿ ಆರೈಕೆ ವಹಿಸಿಕೊಂಡಿರುವುದಾಗಿ ತಿಳಿಸಿದರು. ಲಾಕ್ ಡೌನ್ ಕಾರಣದಿಂದಾಗಿ ಪ್ರಾಣಿ ಸಂಗ್ರಹಾಲಯಗಳಿಗೆ ಜನರ ಬರುವಿಕೆ ಕಡಿಮೆಯಾಗಿದ್ದು, …

Read More »