Breaking News
Home / ಜಿಲ್ಲೆ / ಬೆಂಗಳೂರು (page 325)

ಬೆಂಗಳೂರು

“ಡಿ.ಜೆ.ಹಳ್ಳಿ ಗಲಭೆಗೆ ಕಾರಣನಾದ ನವೀನ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ”

ಬೆಂಗಳೂರು: ನಗರದ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಮತ್ತು ಕಾವಲ್‌ ಭೈರಸಂದ್ರದಲ್ಲಿ ನಡೆದ ಗಲಭೆ ಸದ್ಯಕ್ಕೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಫೇಸ್‌ಬುಕ್‌ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಯುವಕ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದರು. ಬೆಂಗಳೂರಿನಲ್ಲಿ ಗುರುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಬಗ್ಗೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗರ ನಡೆ ಸರಿ ಇಲ್ಲ. ನವೀನ್ ಬಿಜೆಪಿ …

Read More »

ಆರ್ ಎಸ್ ಎಸ್, ಸಂಘ ಪರಿವಾರ ಎಸ್ಡಿಪಿಐ ಎಲ್ಲವೂ ಒಂದೇಹೆಡ್, ಟೈಲ್ ಎರಡೂ ಅವರೇ ಆಗಿದ್ದಾರೆ:ರಾಮಲಿಂಗಾ ರೆಡ್ಡಿ

ಬೆಂಗಳೂರು: ಆರ್ ಎಸ್ ಎಸ್, ಸಂಘ ಪರಿವಾರ ಎಸ್ಡಿಪಿಐ ಎಲ್ಲವೂ ಒಂದೇ. ಅವರು ಒಂದೇ ನಾಣ್ಯದ ಮುಖಗಳಿದ್ದಂತೆ. ಹೆಡ್, ಟೈಲ್ ಎರಡೂ ಅವರೇ ಆಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಏನ್ಮಾಡಿದ್ದರು. ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದಾರೆಂದು ನಮಗೂ ತಿಳಿದಿದೆ. ನಾನು ಸಹ ರಾಜ್ಯದ ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ತಮಗೂ ಇದರ ಬಗ್ಗೆ ಮಾಹಿತಿ ಇದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ …

Read More »

ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಸ್ವಾತಂತ್ರ್ಯೋತ್ಸವ ಆಚರಣೆ

ಬೆಂಗಳೂರು, ಆ.13- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲದೆ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಯಾವುದೇ ಪಥ ಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲದೆ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂದು ಹೇಳಿದರು.ಈ ಬಾರಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಕಾರ್ಯವೂ ಇರುವುದಿಲ್ಲ. …

Read More »

ಡಿಸಿಎಂ ಅಶ್ವಥ್ ನಾರಾಯಣ್ ಜೊತೆ ಚರ್ಚೆ ನಡೆಸಿದ ಟಗರು ಶಿವರಾಜ್‍ಕುಮಾರ್

ಬೆಂಗಳೂರು: ಕೊರೊನಾ ವೈರಸ್ ಕಾರಣದಿಂದ ಚಿತ್ರರಂಗಕ್ಕೆ ಬಹಳ ನಷ್ಟವಾಗಿದೆ. ಇದರ ಬಗ್ಗೆ ನಟ ಶಿವರಾಜ್‍ಕುಮಾರ್ ಅವರು ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.ಇಂದು ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಶ್ವಥ್ ನಾರಾಯಣ್ ಅವರ ನಿವಾಸಕ್ಕೆ ಬಂದ ಶಿವಣ್ಣ, ಚಿತ್ರರಂಗದ ಹಲವಾರು ತೊಂದರೆಗಳ ಬಗ್ಗೆ ಡಿಸಿಎಂ ಅವರ ಜೊತೆ ಚರ್ಚೆ ಮಾಡಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಚಿತ್ರರಂಗದ ಕೆಲಸ ಸ್ಥಗಿತವಾಗಿದೆ. ದೇಶದಲ್ಲಿ ಇದೇ ಪರಿಸ್ಥಿತಿ ಆಗಿದೆ. …

Read More »

ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಕುಟುಂಬಕ್ಕೆ ಸರ್ಕಾರದಿಂದ ಪೊಲೀಸ್ ಭದ್ರತೆ

ಬೆಂಗಳೂರು: ಸಿಲಿಕಾನ್ ಸಿಟಿಯ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಕುಟುಂಬಕ್ಕೆ ಸರ್ಕಾರ ಪೊಲೀಸ್ ಭದ್ರತೆಯನ್ನು ಒದಗಿಸಿದೆ.ಶಾಸಕರ ಕುಟುಂಬ ಸದ್ಯ ಖಾಸಗಿ ಹೊಟೇಲ್ ನಲ್ಲಿ ವಾಸವಾಗಿದೆ. ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ನೀಡಿದ್ದಾರೆ. ಅಲ್ಲದೆ ಸದ್ಯಕ್ಕೆ ತಮ್ಮ ನಿವಾಸಕ್ಕೆ ಹೋಗೋದು ಬೇಡ ಅಂತ ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಸ್ವಲ್ಪ ದಿನ ಹೊಟೇಲ್ ನಲ್ಲಿ ಉಳಿಯಲು ಶಾಸಕ ಅಖಂಡ ನಿರ್ಧಾರ ಮಾಡಿದ್ದು, …

Read More »

ಬೆಂಗ್ಳೂರಲ್ಲಿ ನಡೆದ ಧಾರ್ಮಿಕ ಮತಾಂಧತೆಯನ್ನು ಖಂಡಿಸುತ್ತೇನೆ: ಪ್ರಕಾಶ್ ರಾಜ್

ಬೆಂಗಳೂರು: ಸಿಲಿಕಾನ್ ಸಿಟಿಯ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯಲ್ಲಿ ನಡೆದ ಘಟನೆಯನ್ನು ಖಂಡಿಸುವುದಾಗಿ ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ. ಬೆಂಗಳೂರು ಗಲಭೆಯ ಸಂಬಂಧ ಟ್ವೀಟ್ ಮಡಿರುವ ಅವರು, ಬೆಂಗಳೂರಿನಲ್ಲಿ ನಡೆದ ಗಲಭೆ ಅನಾಗರಿಕವಾದದ್ದಾಗಿದೆ. ಈ ಧಾರ್ಮಿಕ ಮತಾಂಧತೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕಾನೂನನ್ನು ಕೈಗೆ ತೆಗದುಕೊಂಡ ಪ್ರಚೋದರಕರು ಹಾಗೂ ಗೂಂಡಾಗಳಿಗೆ ಕಠಿಣ ಶಿಕ್ಷೆಯಾಗಬೇಕು. ಈ ಸಮಾಜ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗರಂ ಆಗಿದ್ದಾರೆ. ನಡೆದಿದ್ದೇನು? ಕಾಂಗ್ರೆಸ್ ಶಾಸಕ ಅಖಂಡ …

Read More »

ಡಿ.ಜೆ.ಹಳ್ಳಿ ಗಲಭೆ : ಪರಾರಿಯಾಗಿರುವ ಪುಂಡರ ಬಂಧನಕ್ಕೆ 3 ಟೀಮ್ ರಚನೆ

ಬೆಂಗಳೂರು, ಆ.13- ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಮೊನ್ನೆ ರಾತ್ರಿ ಬೆಂಕಿ ಹಚ್ಚಿ ದಾಂಧಲೆ ಮಾಡಿ ಪರಾರಿಯಾಗಿರುವ ಗಲಭೆಕೋರರ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಈಗಾಗಲೇ ಪರಾರಿಯಾಗಿರುವ ಗಲಭೆಕೋರರ ಬಂಧನಕ್ಕೆ ಬಲೆ ಬೀಸಿವೆ.ಗಲಭೆ ಸಂದರ್ಭದಲ್ಲಿ ತೆಗೆದ ವಿಡಿಯೋ ಆಧರಿಸಿ ಆರೋಪಿಗಳನ್ನು ಗುರುತಿಸಿ ಅವರ ಬಂಧನಕ್ಕೆ ಈ ತಂಡಗಳು ಮುಂದಾಗಿವೆ.ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ. ಈವರೆಗೂ ಸಂಘಟನೆಯ ಮುಖಂಡರು …

Read More »

ಡೀಪ್ ಕೋಮಾಗೆ ಜಾರಿದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ

ನವದೆಹಲಿ, ಆ.13- ಮೆದುಳು ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣವ್ ಮುಖರ್ಜಿ ಅವರ ಆರೋಗ್ಯ ಮತ್ತಷ್ಟು ವಿಷಮವಾಗಿದ್ದು, ಡೀಪ್ ಕೋಮಾ (ತೀವ್ರ ಪ್ರಜ್ಞಾಶೂನ್ಯ ಸ್ಥಿತಿ) ತಲುಪಿಸಿದ್ದಾರೆ. ಮೆದುಳಿನ ಸೂಕ್ಷ್ಮ ನರದಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಮುಖರ್ಜಿ ಅವರನ್ನು ಆಗಸ್ಟ್ 10ರಂದು ದೆಹಲಿಯ ಆರ್ಮಿಸ್ ರಿಸರ್ಚ್ ಅಂಡ್ ರೆಫರೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಸೋಂಕು ಸಹ ತಗುಲಿರುವುದು ದೃಢಪಟ್ಟಿತ್ತು. ಬಳಿಕ ಅವರ ಮೆದುಳಿನಲ್ಲಿ …

Read More »

ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಉಕ್ಕಿ ಹರಿಯುತ್ತಿದ್ದ ನದಿಗಳು ಈಗ ಸಹಜ ಸ್ಥಿತಿಗೆ ಮರಳಿವೆ.

ಬೆಂಗಳೂರು: ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಉಕ್ಕಿ ಹರಿಯುತ್ತಿದ್ದ ನದಿಗಳು ಈಗ ಸಹಜ ಸ್ಥಿತಿಗೆ ಮರಳಿವೆ. ಭಾರೀ ಮಳೆಯಿಂದ ಕಂಗೆಟ್ಟಿದ್ದ ಜನರು ಈಗ ಮಳೆಯಿಂದ ಮನೆಯ ಸುತ್ತಮುತ್ತ ಆಗಿರುವ ಅವಾಂತರಗಳನ್ನು ಸರಿಪಡಿಸಿಕೊಳ್ಳುವತ್ತ ಗಮನಹರಿಸಿದ್ದಾರೆ. ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ……. -ಘಟಪ್ರಭಾ ಜಲಾಶಯ ಗರಿಷ್ಠ ಮಟ್ಟ- 662.94 ಮೀಟರ್​ ಇಂದಿನ ಮಟ್ಟ- 662 ಮೀಟರ್​ ಗರಿಷ್ಠ ಸಾಮರ್ಥ್ಯ- 51 ಟಿಎಂಸಿ ಇಂದಿನ ನೀರು ಸಂಗ್ರಹ- 48.37 ಟಿಎಂಸಿ ಇಂದಿನ …

Read More »

73ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಗಳೇ ಬಂದಿತ್ತು ಎಲ್ಲರಿಗೂ ಧನ್ಯವಾದ: ಸಿದ್ದರಾಮಯ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 73ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆಗಳೇ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ತನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.ಈ ಸಂಬಂಧ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನನ್ನ ಹುಟ್ಟುಹಬ್ಬಕ್ಕೆ ರಾಜ್ಯದಾದ್ಯಂತ ಹಿರಿಯ-ಕಿರಿಯ ಸ್ನೇಹಿತರು, ಹಿತೈಷಿಗಳು ಶುಭಾಶಯ ಕೋರಿದ್ದಾರೆ. ಅವರೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಹಾರೈಕೆ ಜನರ ಸೇವೆ ಮಾಡುವ ನನ್ನ ಮನೋಬಲವನ್ನು ಹೆಚ್ಚಿಸಿದೆ. ನಿಮ್ಮ ಸೇವೆಯ ಮೂಲಕವೇ ನಿಮ್ಮ ಪ್ರೀತಿಯ ಋಣ ತೀರಿಸಲು …

Read More »