Breaking News

ಡೀಪ್ ಕೋಮಾಗೆ ಜಾರಿದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ

Spread the love

ನವದೆಹಲಿ, ಆ.13- ಮೆದುಳು ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಾಜಿ ರಾಷ್ಟ್ರಪತಿ ಭಾರತ ರತ್ನ ಪ್ರಣವ್ ಮುಖರ್ಜಿ ಅವರ ಆರೋಗ್ಯ ಮತ್ತಷ್ಟು ವಿಷಮವಾಗಿದ್ದು, ಡೀಪ್ ಕೋಮಾ (ತೀವ್ರ ಪ್ರಜ್ಞಾಶೂನ್ಯ ಸ್ಥಿತಿ) ತಲುಪಿಸಿದ್ದಾರೆ.

ಮೆದುಳಿನ ಸೂಕ್ಷ್ಮ ನರದಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಮುಖರ್ಜಿ ಅವರನ್ನು ಆಗಸ್ಟ್ 10ರಂದು ದೆಹಲಿಯ ಆರ್ಮಿಸ್ ರಿಸರ್ಚ್ ಅಂಡ್ ರೆಫರೆಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಸೋಂಕು ಸಹ ತಗುಲಿರುವುದು ದೃಢಪಟ್ಟಿತ್ತು. ಬಳಿಕ ಅವರ ಮೆದುಳಿನಲ್ಲಿ ಹೆಪ್ಪುಗಟ್ಟದ್ದ ರಕ್ತವನ್ನು ತೆಗೆದುಹಾಕಲು ಸೂಕ್ಷ್ಮ ಶಸ್ತ್ರಚಿಕಿತ್ಸೆ ಒಳಪಡಿಸಲಾಯಿತು.

ಅವರ ಆರೋಗ್ಯ ದಿನೇ ದಿನೇ ಗಂಭೀರ ಹಂತ ತಲುಪುತ್ತಿದ್ದು, ವೆಂಟಿಲೇಟರ್ (ಕೃತಕ ಉಸಿರಾಟ) ವ್ಯವಸ್ಥೆಯಲ್ಲಿರುವ ಅವರು ಡೀಫ್ ಕೋಮಾ ಹಂತ ತಲುಪಿದ್ಧಾರೆ ಎಂದು ಆಸ್ಪತ್ರೆಯ ಉನ್ನತ ವೈದ್ಯರು ತಿಳಿಸಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ