Breaking News
Home / ಜಿಲ್ಲೆ / ಬೆಂಗಳೂರು (page 317)

ಬೆಂಗಳೂರು

ಮಂಗಳವಾರ ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ

ಬೆಂಗಳೂರು : ಭಾರೀ ಮಳೆಯಿಂದಾಗಿ ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಹಾನಿ ಸಂಭವಿಸಿದ್ದು, ಈ ಕುರಿತು ಪರಿಸ್ಥಿತಿ ವೀಕ್ಷಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಹೆಚ್‍ಎಎಲ್‍ನಿಂದ ಬೆಳಗಾವಿಗೆ ಸಿಎಂ ಪ್ರಯಾಣ ಬೆಳೆಸಲಿದ್ದು, ಬೆಳಗ್ಗೆ 10.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ, ಧಾರವಾಡ ಜಿಲ್ಲೆಗಳ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಮಳೆ ಹಾನಿ ಸಂಬಂಧ ಸಭೆ ನಡೆಸಲಿದ್ದಾರೆ. ಬಳಿಕ 11.15ಕ್ಕೆ …

Read More »

ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಬೆಂಗಳೂರು: ಮುಂಗಾರು ಚುರುಕುಗೊಂಡಿರುವುದರಿಂದ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಆ.22ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಕೊಡಗಿನಲ್ಲಿ ಉತ್ತಮ ಮಳೆ ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು ಹಾಗೂ ಭಾಗಮಂಡಲದಲ್ಲಿ ಶುಕ್ರವಾರ ಮುಂಜಾನೆ …

Read More »

ಮಳೆ ಹಾನಿ ಪ್ರದೇಶಗಳಲ್ಲಿ ಮಂಗಳವಾರ ಸಿಎಂ ವೈಮಾನಿಕ ಸಮೀಕ್ಷೆ

ಬೆಂಗಳೂರು: ಆಗಸ್ಟ್ 25ರಂದು (ಮಂಗಳವಾರ) ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಈ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಹೆಚ್‌ಎಎಲ್‌ನಿಂದ ಪ್ರಯಾಣ ಬೆಳೆಸಲಿರುವ ಮುಖ್ಯಮಂತ್ರಿ ಬೆಳಿಗ್ಗೆ 10.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಗಾವಿ, ಧಾರವಾಡ ಜಿಲ್ಲೆಗಳ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ಮಳೆ ಹಾನಿ ಸಂಬಂಧ ಸಭೆ ನಡೆಸಿ ಸಮಾಲೋಚನೆ ನಡೆಸಲಿದ್ದಾರೆ. ಕಾರ್ಯಕರ್ತೆಯರಿಗಷ್ಟೇ ಪ್ರೋತ್ಸಾಹಧನ ಕೊಡಬೇಕಿದೆ: ಎಸ್..ಟಿ. ಸೋಮಶೇಖರ್ 11.15 …

Read More »

ಸರ್ಕಾರದ ನಿರ್ಲಕ್ಷ್ಯ 2 ಲಕ್ಷದ 50 ಸಾವಿರದ ಗಡಿ ದಾಟಿದೆ.. ಕೊರೊನಾ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಕ್ಷಸಿ ಕೊರೊನಾ 1 ಲಕ್ಷದ ಗಡಿ ದಾಟಿದೆ. ಕೊರೊನಾ ತಡೆಗೆ ಮಾದರಿ ಆಗಿದ್ದ ಕರ್ನಾಟಕದಲ್ಲಿ ಆಗಸ್ಟ್ ನಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಆಗಸ್ಟ್ ನಲ್ಲೇ ಅರ್ಧ ಲಕ್ಷದಷ್ಟು ಹೊಸ ಸೋಂಕಿತರು ಪತ್ತೆ ಆಗಿದ್ದಾರೆ.ಇಡೀ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷದ 50 ಸಾವಿರದ ಗಡಿ ದಾಟಿ ಈಗ 3 ಲಕ್ಷದತ್ತ ಹೋಗುತ್ತಿದೆ. ಆರಂಭದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ ಎಂದಿದ್ದ ಸರ್ಕಾರ ಆಮೇಲೆ ದೇವರ ಮೇಲೆ …

Read More »

ದೇಶದೆಲ್ಲೆಡೆ ವಿಘ್ನ ವಿನಾಯಕನಿಗೆ ಪೂಜೆ ಪುನಸ್ಕಾರ

ಬೆಂಗಳೂರು: ಇಂದು ಗಣೇಶ ಚತುರ್ಥಿ ಹಿನ್ನೆಲೆ ದೇಶದೆಲ್ಲೆಡೆ ವಿಘ್ನ ವಿನಾಯಕನಿಗೆ ಪೂಜೆ ಪುನಸ್ಕಾರಗಳು ನಡೆದಿವೆ. ಜನರು ಗಣೇಶನ ವಿಗ್ರಹ ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ವಿಘ್ನಗಳನ್ನು ನಿವಾರಿಸುವ ಎಂದು ಪ್ರಾರ್ಥಿಸುತ್ತಿದ್ದಾರೆ. ಕೊರೊನಾ ಗಣೇಶ ಹಬ್ಬದ ಅರ್ಧಕ್ಕಿಂತ ಹೆಚ್ಚು ಸಂಭ್ರಮವನ್ನು ಕಿತ್ತುಕೊಂಡಿದೆ. ಕೊರೊನಾ ಹಿನ್ನೆಲೆ ಭಕ್ತಾದಿಗಳು ಸರಳವಾಗಿ ಗಣೇಶ ಹಬ್ಬವನ್ನ ಆಚರಿಸುತ್ತಿದ್ದಾರೆ. ದೇವಸ್ಥಾನಗಳು ತೆರೆದಿದ್ರೂ ಭಕ್ತರ ಸಂಖ್ಯೆ ಅಷ್ಟಿಲ್ಲ. ಹಬ್ಬದ ದಿನಗಳಲ್ಲಿ ಭಕ್ತರಿಂದ ತುಂಬಿರುತ್ತಿದ್ದ ದೇವಸ್ಥಾನಗಳು ಖಾಲಿ ಖಾಲಿ ಅನ್ನಿಸುತ್ತಿವೆ. ಕೊರೊನಾ …

Read More »

ನಿಮ್ಮ ಫೋನ್ ಕದ್ದಾಲಿಕೆ ಮಾಡುವ ದರಿದ್ರ ನಮ್ಮ ಸರ್ಕಾರಕ್ಕೆ ಬಂದಿಲ್ಲ: ಸುಧಾಕರ್

ಬೆಂಗಳೂರು: ನನ್ನ ಫೋನ್ ಟ್ಯಾಪಿಂಗ್ ಆಗ್ತಿರೋದು ನಿಜ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಎರಡು ಟ್ವೀಟ್ ಮಾಡಿರುವ ಸಚಿವರು, ಡಿಕೆ ಶಿವಕುಮಾರ್ ಅವರೇ, ನೀವು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ಧರ್ಮ-ಸಂಸ್ಕೃತಿಯ ಪ್ರತೀಕ, ಪವಿತ್ರವಾದ ಮನಸ್ಸುಳ್ಳ ಆದಿಚುಂಚನಗಿರಿ, ರಂಭಾಪುರಿ, ಸಿದ್ಧಗಂಗಾ ಮಠದ, ಸಿರಿಗೆರೆ ಮಠ, ಸುತ್ತೂರು ಮಠ ಶ್ರೀಗಳು ಸೇರಿದಂತೆ 7 ಸ್ವಾಮೀಜಿಗಳ …

Read More »

ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ: ಕುಟುಂಬಕ್ಕೆ 30 ಲಕ್ಷ ಪರಿಹಾರ, ಉದ್ಯೋಗ ಘೋಷಿಸಿದ CM

ಬೆಂಗಳೂರು: ಮೈಸೂರಿನ ನಂಜನಗೂಡು THO ಡಾ‌.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ B.S.ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. THO ಡಾ. SR ನಾಗೇಂದ್ರ, ತಾಲ್ಲೂಕು ಆರೋಗ್ಯ ಅಧಿಕಾರಿರವರು ಇಂದು ನಿಧನರಾದ ವಿಷಯನ್ನು ಕೇಳಿ ಅತೀವ ದುಃಖವಾಗಿದ್ದು ಈ ಘಟನೆಯ ಬಗ್ಗೆ ವಿಷಾದಿಸುತ್ತೇನೆ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ, ಇದೇ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ …

Read More »

ಗಲಭೆ: ಮತ್ತೆ ಮಂದಿ ಅರೆಸ್ಟ್ – ತನಿಖೆಯಲ್ಲಿ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯ ಜಾಡನ್ನ ಹಿಡಿದು ಹೊರಟಿರೋ ಸಿಸಿಬಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿಗಳ ಬೆಂಡೆತ್ತುತ್ತಿದ್ದಾರೆ. ಹೀಗಿದ್ದೂ ಕೆಲವು ಆರೋಪಿಗಳಿಗೆ ಇರುವ ಕೊಬ್ಬು, ಧಿಮಾಕು ಕಡಿಮೆ ಆಗಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅಳಿಯ ಹಾಗೂ ಗಲಭೆಯ ಪ್ರಮುಖ ಆರೋಪಿ ನವೀನ್ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನ ಸಿಸಿಬಿ ಇಂದು ಬಂಧಿಸಿದೆ. ಯೂಸುಫ್ ಬಂಧಿತ ಆರೋಪಿ. ಈತ ಗಲಾಟೆ ನಡೆದ ದಿನ ನವೀನ್ ಮನೆಗೆ ನುಗ್ಗಿ ದಾಂಧಲೆ …

Read More »

ರಾಜ್ಯಕಾರಣದಲ್ಲಿ ಸದ್ದು ಮಾಡಿದ ಫೋನ್ ಟ್ಯಾಪ್

ಬೆಂಗಳೂರು,  : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಫೋನ್ ಟ್ಯಾಪ್ ಆಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಇಂದು (ಶುಕ್ರವಾರ) ಮಾತನಾಡಿರುವ ಅವರು, ನನ್ನ ಫೋನ್ ಟ್ಯಾಪ್ ಆಗಿದೆ. ಟ್ಯಾಪ್ ಮಾಡಿರುವ ಬಗ್ಗೆ ದೂರು ದಾಖಲಿಸುತ್ತೇನೆ. ನಿನ್ನೆಯಿಂದ ಕರೆಗಳೇ ಬರುತ್ತಿಲ್ಲ, ಹೋಗುತ್ತಿಲ್ಲ. ಶೇಕಡ 100 ರಷ್ಟು ಫೋನ್ ಟ್ಯಾಪ್ ಆಗಿದೆ ಎಂದು ಆರೋಪಿಸಿದರು. ನಿರ್ಮಲಾನಂದ ಸ್ವಾಮೀಜಿಯ ಫೋನ್ ಟ್ಯಾಪ್: ಅಶೋಕ್ ಕ್ಷಮೆ ಪ್ರಶ್ನಿಸಿದ ಕುಮಾರಸ್ವಾಮಿ ನಮ್ಮ ಸುದರ್ಶನ್ 25 ಕಾಲ್ …

Read More »

ರೈತರ `ಪಶು ಸಂಜೀವಿನಿ’ ಸಂಚಾರಿ ಚಿಕಿತ್ಸಾಲಯಕ್ಕೆ ಸಿಎಂ ಚಾಲನೆ

ಬೆಂಗಳೂರು,  : ಕರ್ನಾಟಕ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸರಕಾರ ಸಜ್ಜಾಗಿದ್ದು, ರೈತರ ಕರೆಗಳಿಗೆ ತುರ್ತಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಲಿದೆ. ಈ ಸೇವೆಗಳನ್ನು ಇಲಾಖೆಯ ಸಹಾಯವಾಣಿ ಸೇವೆಗಳಿಗೆ ಲಿಂಕ್ ಮಾಡಿ 24/7 ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಬಳಿ ಪಶುಸಂಗೋಪನಾ ಇಲಾಖೆಯ ವತಿಯಿಂದ ಆಯೋಜಿಸಿದ್ದ `ಪಶುಸಂಜೀವಿನಿ’ ಸುಸಜ್ಜಿತ ಸಂಚಾರಿ ಪಶುಚಿಕಿತ್ಸಾ ವಾಹನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು …

Read More »