Breaking News
Home / ಜಿಲ್ಲೆ / ಬೆಂಗಳೂರು (page 292)

ಬೆಂಗಳೂರು

ಸಂಪುಟ ಪುನರ್ರಚನೆ ಆದರೆ ಮೂವರು ಸಚಿವರಿಗೆ ಕೊಕ್ಜೊಲ್ಲೆ, ಸಿ.ಸಿ.ಪಾಟೀಲ್ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಕೈ ಬಿಡುವ ಸಾಧ್ಯತೆ ಇದೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ ನಡೆಯುತ್ತಿದ್ದು, ಸಂಪುಟ ಪುನರ್ರಚನೆ ಆದರೆ ಮೂವರು ಸಚಿವರಿಗೆ ಕೊಕ್ ನೀಡಲು ಮತ್ತು ಏಳು ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ಮಾಡಿದೆ .ಸಿಎಂ ಯಡಿಯೂರಪ್ಪ ಬದಲಿಗೆ ಪರ್ಯಾಯ ನಾಯಕನ ಆಯ್ಕೆ ಆಗಲಿದ್ಯಾ?, ಬಿಜೆಪಿ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಕೈ ಹಾಕಲಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ ಒಂದು ವೇಳೆ ನಾಯಕತ್ವ ಬದಲಾದರೆ ಹೈಕಮಾಂಈ ನಡುವೆ ಬಿಎಸ್‍ವೈ ಒಂದು ಸಂಪುಟ …

Read More »

ನಕಲಿ ಖಾತೆ ಸೃಷ್ಟಿಸಿ ಟ್ವೀಟ್ ಮಾಡಿದವರಿಗೆ ತಿರುಗೆಟ್ಟು ಕೊಟ್ಟ ನಟ ಜಗ್ಗೇಶ್

ಬೆಂಗಳೂರು, ಸೆ.18- ಗಣ್ಯರ, ಸೆಲೆಬ್ರಿಟಿಗಳ ಟ್ವಿಟರ್ ಖಾತೆಯನ್ನು ನಕಲಿ ಮಾಡಿ ಅವರ ಸಿದ್ಧಾಂತಕ್ಕೆ ವಿರುದ್ಧವಾಗಿ ಟ್ವಿಟ್ ಮಾಡುವ ಮೂಲಕ ಮುಜುಗರದ ಸನ್ನಿವೇಶ ಸೃಷ್ಟಿಸುವ ಕಿಡಿಗೇಡಿಗಳು ಈಗ ಹಿರಿಯ ನಟ ಜಗ್ಗೇಶ್ ಖಾತೆಯನ್ನು ನಕಲಿ ಮಾಡಿದ್ದಾರೆ. ಜಗ್ಗೇಶ್ ಅವರ ಟ್ವಿಟರ್ ಖಾತೆ ಜಗ್ಗೇಶ್ 2 ಎಂಬ ಲಾಗಿನ್ ಐಡಿ ಹೆಸರಿನಲ್ಲಿದೆ. ಹೊಸದಾಗಿ ಮೂರು ತಿಂಗಳ ಹಿಂದೆ ನಕಲಿ ಖಾತೆ ಸೃಷ್ಟಿಸಿರುವ ಕಿಡಿಗೇಡಿ ಅಭಿಮಾನ್7284 ಹೆಸರಿನಲ್ಲಿ ಕಿತಾಪತಿ ಮಾಡಿದ್ದಾನೆ. ನಕಲಿ ಖಾತೆಯಲ್ಲಿ ಒಂದುವರೆ …

Read More »

ನಾವು ಏನೂ ಮಾತನಾಡೋ ಹಾಗಿಲ್ಲ -ಐಂದ್ರಿತಾ ರೈ

ನಿನ್ನೆಯಷ್ಟೆ ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲದ ಕುರಿತಾಗಿ ದಿಗಂತ್​-ಐಂದ್ರಿತಾ ದಂಪತಿಗೆ ಸಿಸಿಬಿ ವಿಚಾರಣೆ ನಡೆಸಿತ್ತು. ಮತ್ತೆ ಕರೆದರೆ ಹೋಗೋದಾಗಿ ಕೂಡ ತಿಳಿಸಿದ್ದರು. ಇನ್ನು, ಇಂದು ಬೆಳಿಗ್ಗೆ ಮನೆಯ ಬಾಲ್ಕನಿಯಲ್ಲಿ ಕಂಡು ಬಂದ ದಿಗಂತ್​ ತಾಯಿ ಹಾಗೂ ಐಂದ್ರಿತಾ ರೇ, ಮಾಧ್ಯಮದವರ ಜೊತೆ ಮಾತನಾಡಿದ್ರು. ದಂಪತಿಗೆ ಸಿಸಿಬಿ ವಿಚಾರಣೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆ, ‘ನಾವು ಏನೂ ಮಾತನಾಡೋ ಹಾಗಿಲ್ಲ. ಇನ್ನೂ ವಿಚಾರಣೆ ಕಂಪ್ಲೀಟ್​ ಆಗಿಲ್ಲ. ಯಾವುದೇ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತಿಲ್ಲ ಅಂತ …

Read More »

ಸಂಪುಟ ಪುನಾರಚನೆಯತ್ತ ಚಿತ್ತ | ವರಿಷ್ಠರ ತೀರ್ಮಾನಕ್ಕೆ ಬದ್ಧ: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಸಚಿವ ಸಂಪುಟದಿಂದ ಕೆಲವರನ್ನು ಕೈ ಬಿಟ್ಟು ಎಂಟು ಮಂದಿಯನ್ನು ಸೇರಿಸಿಕೊಳ್ಳುವ ಮೂಲಕ ಸಂಪುಟ ಪುನಾರಚನೆಯ ಪ್ರಸ್ತಾವ ಮುಂದಿಟ್ಟುಕೊಂಡು ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ. ಪುನಾರಚನೆಗೆ ಒಪ್ಪದೇ ಇದ್ದರೆ ಮೂವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಆಲೋಚನೆ ಅವರದ್ದಾಗಿದೆ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ. ಎಲ್ಲವೂ ಯಡಿಯೂರಪ್ಪ ಅಂದುಕೊಂಡಂತೆ ನಡೆದರೆ ಇದೇ ಭಾನುವಾರ(ಸೆ.20) ಸಂಪುಟ …

Read More »

ರಾಜ್ಯ ಸರ್ಕಾರದಿಂದ ‘ರೈತರಿಗೆ ಸಿಹಿ ಸುದ್ದಿ’: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ‘ಈ ಸೇವೆ’

ಡಿಜಿಟಲ್‌ಡೆಸ್ಕ್‌: ಯಾವುದೇ ತರಹದ ರೋಗ ಮತ್ತು ಕೀಟಬಾಧೆ ಕಂಡುಬಂದಲ್ಲಿ ರೈತರ ಹೊಲಗಳಿಗೆ ಹೋಗಿ ಪ್ರಾತ್ಯಕ್ಷಿಕೆ ಮೂಲಕ ಅಗತ್ಯ ಸಲಹೆ, ನೆರವು ನೀಡಲು 108 ವಾಹನ ಮಾದರಿಯಲ್ಲಿ ಕೃಷಿ ಸಂಚಾರಿ ಲ್ಯಾಬ್ ಸಿದ್ಧಪಡಿಸಲಾಗುತ್ತಿದೆ. ಕೃಷಿಕರು ಕರೆ ಮಾಡಿದ ಕೂಡಲೆ ಕೃಷಿ ಪದವೀಧರರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನೊಳಗೊಂಡ ಈ ವಾಹನ ಹೊಲಗಳಿಗೆ ಹೋಗಿ ಸೂಕ್ತ ಸಲಹೆ ನೀಡಲಿದ್ದಾರೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ತಮ್ಮ ಉಸ್ತುವಾರಿಯ ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತರಲು ಸಿದ್ಧತೆ ನಡೆದಿದೆ. …

Read More »

ಬೆಂಗಳೂರಿನ 36 ಆಸ್ಪತ್ರೆಗಳಿಗೆ ನೋಟಿಸ್

ಬೆಂಗಳೂರು:  ಸರ್ಕಾರದ ನಿಯಮ ಉಲ್ಲಂಘಿಸಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಬೆಂಗಳೂರಿನ 36 ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಖಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿಯಮಾವಳಿ ಪ್ರಕಾರ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡುವುದು ಕಡ್ಡಾಯವಾಗಿದೆ.   v ಆದರೆ ಕೆಲವು ಆಸ್ಪತ್ರೆಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿರುವ …

Read More »

CCB List ನಲ್ಲಿ ಮುಂದಿನ ಹೆಸರುಗಳು ಆ ಹಿರಿಯ ಸ್ಟಾರ್ ನಟ ಮತ್ತು ಸೋದರರದ್ದು!

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ನಟ ನಟಿಯರ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಸಿಬಿ ಇನ್ನೂ ಕೆಲವರ ಮೇಲೆ ಕಣ್ಣು ನೆಟ್ಟಿದೆ. ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸ್ಟಾರ್ ನಟ ಮತ್ತು ಸಹೋದರರು ಭಾಗಿಯಾಗಿರುವ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಆ ಇಬ್ಬರನ್ನು ವಿಚಾರಣೆಗೆ ಕರೆಯುವ ಸಾಧ್ಯತೆಗಳಿವೆ. ಸ್ಯಾಂಡಲ್​ವುಡ್​ನ ಫ್ಯಾಮಿಲಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈ ಸಹೋದರ ನಟರ ಪೈಕಿ 2017ರ ಗಾಂಜಾ ಪ್ರಕರಣ ಹಾಗೂ ಅಪಘಾತ ಸಂದರ್ಭದಲ್ಲಿ ಇದೇ ಕುಟುಂಬದ ಒಬ್ಬರನ್ನ ಜಯನಗರ …

Read More »

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹಣ ಕಡಿತ ಘೋರ ಅನ್ಯಾಯ: ಈಶ್ವರ್ ಖಂಡ್ರೆ

ಬೆಂಗಳೂರು : ರಾಜ್ಯ ಬಿಜೆಪಿ ಸರಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದ್ದು, ಈ ಭಾಗದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಆರೋಪಿಸಿದ್ದು, ಬಜೆಟ್ ನಲ್ಲಿ ಹಂಚಿಕೆ ಮಾಡಿದ್ದ ಹಣವನ್ನೂ ಕಡಿತ ಮಾಡಿರುವುದು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.   ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ …

Read More »

ಡಿಜೆ ಹಳ್ಳಿ ಗಲಭೆ ಪೂರ್ವ ನಿಯೋಜಿತವಲ್ಲ: ವರದಿ

ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗಲಭೆ ಕೋಮು ಪ್ರೇರಿತವಾಗಲಿ, ಪೂರ್ವ ನಿಯೋಜಿತವಾಗಲಿ ಅಲ್ಲ. ಹಿಂದೂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಗಲಭೆ ನಡೆದಿಲ್ಲ. ಇದೊಂದು ಸಹಜವಾಗಿ ನಡೆದ ಘಟನೆ ಎಂದು ಬೆಂಗಳೂರು ನಾಗರೀಕ ಸಾಮಾಜಿಕ ಸಂಸ್ಥೆಗಳ ಸಹಯೋಗದಲ್ಲಿ ನಡೆಸಿದ ಸತ್ಯಶೋಧನಾ ವರದಿ ಅಭಿಪ್ರಾಯಪಟ್ಟಿದೆ.   ನಿನ್ನೆಯಷ್ಟೇ ವಿಡಿಯೋ ಸಂವಾದದ ಮೂಲಕ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಬಿಡುಗಡೆ ಮಾಡಿದ ವರದಿಯಲ್ಲಿ ಘಟನೆಗೆ ಕಾರಣವಾಕ ಅಂಶ, …

Read More »

‘ಜಮೀರ್ ಒಬ್ರೆ ಕ್ಯಾಸಿನೋಗೆ ಹೋಗ್ತಿರಲಿಲ್ಲ, ಜೊತೆಗೆ ಇವ್ರೆಲ್ಲಾ ಇರ್ತಿದ್ರು’

ನಾಗಮಂಗಲ : ಕರ್ನಾಟಕದ ದುಡ್ಡೆಲ್ಲಾ ಶ್ರೀಲಂಕಾದ ಕ್ಯಾಸಿನೋಗೆ ಹೋಗುತ್ತಿದೆ. ರಾಜ್ಯದಲ್ಲಿ ಹೆಚ್ಚು ದುಡ್ಡು ಮಾಡಿ ಕ್ಯಾಸಿನೋದಲ್ಲಿ ಕಳೆದುಕೊಳ್ಳುತ್ತಿದ್ದಾರೆ, ಅದಕ್ಕಾಗಿ ಇಲ್ಲಿನ ದುಡ್ಡು ಇಲ್ಲೆ ಉಳಿಯಬೇಕಾದರೆ ಕ್ಯಾಸಿನೋ ಕರ್ನಾಟಕದಲ್ಲೇ ಆರಂಭಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡುವುದಾಗಿ ಶಾಸಕ ಸುರೇಶ್‌ಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣವೊಂದಿದ್ದರೆ ಪ್ರಪಂಚದಲ್ಲಿ ಸಿಗುವ ಎಲ್ಲ ವಸ್ತುಗಳು ಶ್ರೀಲಂಕಾದ ಕ್ಯಾಸಿನೋದಲ್ಲಿಯೇ ಸಿಗುತ್ತದೆ. ಇಲ್ಲಿ ಯಾರ್ಯಾರು ಹೆಚ್ಚಿಗೆ ದುಡ್ಡು ಮಾಡಿದ್ದಾರೋ ಅವರೆಲ್ಲರೂ ಅಲ್ಲಿ ಹೋಗಿ ದುಡ್ಡು ಕಳೆಯುತ್ತಿದ್ದಾರೆ. …

Read More »