Breaking News
Home / ಜಿಲ್ಲೆ / ಬೆಂಗಳೂರು / ನಕಲಿ ಖಾತೆ ಸೃಷ್ಟಿಸಿ ಟ್ವೀಟ್ ಮಾಡಿದವರಿಗೆ ತಿರುಗೆಟ್ಟು ಕೊಟ್ಟ ನಟ ಜಗ್ಗೇಶ್

ನಕಲಿ ಖಾತೆ ಸೃಷ್ಟಿಸಿ ಟ್ವೀಟ್ ಮಾಡಿದವರಿಗೆ ತಿರುಗೆಟ್ಟು ಕೊಟ್ಟ ನಟ ಜಗ್ಗೇಶ್

Spread the love

ಬೆಂಗಳೂರು, ಸೆ.18- ಗಣ್ಯರ, ಸೆಲೆಬ್ರಿಟಿಗಳ ಟ್ವಿಟರ್ ಖಾತೆಯನ್ನು ನಕಲಿ ಮಾಡಿ ಅವರ ಸಿದ್ಧಾಂತಕ್ಕೆ ವಿರುದ್ಧವಾಗಿ ಟ್ವಿಟ್ ಮಾಡುವ ಮೂಲಕ ಮುಜುಗರದ ಸನ್ನಿವೇಶ ಸೃಷ್ಟಿಸುವ ಕಿಡಿಗೇಡಿಗಳು ಈಗ ಹಿರಿಯ ನಟ ಜಗ್ಗೇಶ್ ಖಾತೆಯನ್ನು ನಕಲಿ ಮಾಡಿದ್ದಾರೆ.

ಜಗ್ಗೇಶ್ ಅವರ ಟ್ವಿಟರ್ ಖಾತೆ ಜಗ್ಗೇಶ್ 2 ಎಂಬ ಲಾಗಿನ್ ಐಡಿ ಹೆಸರಿನಲ್ಲಿದೆ. ಹೊಸದಾಗಿ ಮೂರು ತಿಂಗಳ ಹಿಂದೆ ನಕಲಿ ಖಾತೆ ಸೃಷ್ಟಿಸಿರುವ ಕಿಡಿಗೇಡಿ ಅಭಿಮಾನ್7284 ಹೆಸರಿನಲ್ಲಿ ಕಿತಾಪತಿ ಮಾಡಿದ್ದಾನೆ.

ನಕಲಿ ಖಾತೆಯಲ್ಲಿ ಒಂದುವರೆ ಸಾವಿರ ಫಾಲೋವರ್ಸ್ ಇದ್ದಾರೆ. ಜಗ್ಗೇಶ್ 2 ಅಸಲಿ ಖಾತೆಯಲ್ಲಿ 6.26 ಲಕ್ಷ ಫಾಲೋವರ್ಸ್‍ನ್ನು ಹೊಂದಿದ್ದಾರೆ. ನಿನ್ನೆ ಇದ್ದಕ್ಕಿದ್ದಂತೆ ನಕಲಿ ಖಾತೆಯಲ್ಲಿ ಒಂದು ಟ್ಟಿಟ್ ಫೋಸ್ಟ್ ಆಗಿದೆ. ಅದರಲ್ಲಿ ಹಿಂದಿ ಹೇರಿಕೆ ಬಗ್ಗೆ ಅಭಿಪ್ರಾಯ ಹೇಳಿ ಎಂದು ಜನರ ಒತ್ತಾಯಕ್ಕೆ ಹೇಳಲೇಬೇಕಾಗಿದ ಅನಿವಾರ್ಯತೆ ಬಂದೊದಗಿದೆ. ನನ್ನ ಮನಃಸಾಕ್ಷಿ ಅರಿತು ಈ ಮಾತು ಹೇಳುತ್ತಿದ್ದೇನೆ.

ಕರ್ನಾಟಕ ಮತ್ತು ಕನ್ನಡಕ್ಕಿಂತ ಹೆಚ್ಚಾಗಿ ಯಾವುದು ಇಲ್ಲ. ಯಾರು ಇಲ್ಲ. ಆದರೆ ರಾಜಕೀಯ ಮತ್ತು ಪಕ್ಷ ಐಟಿ, ಇಡಿಗೆ ಹೆದರಿ ಬಹಳಷ್ಟು ನಟರುಗಳ ಹಾಗೆ ನಾನು ಮೂಕನಾಗಬೇಕಾಯಿತು. ಕ್ಷಮಿಸಿ ಎಂದಿದೆ. ಈ ಟ್ವಿಟ್ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಜಗ್ಗೇಶ್‍ಗೆ ಸಾಕಷ್ಟು ಮುಜುಗರ ತಂದಿದೆ.

ನಕಲಿ ಖಾತೆ ಮತ್ತು ಅದರಲ್ಲಿನ ಫೋಸ್ಟ್‍ನ್ನು ಗುರುತಿಸಿದ ಅಭಿಮಾನಿಗಳು ಕೂಡಲೇ ಟ್ವಿಟರ್‍ನಲ್ಲಿ ಜಗ್ಗೇಶ್ ಅವರ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಸರಣಿ ಟ್ವಿಟ್‍ಗಳ ಮೂಲಕ ಪ್ರತಿಕ್ರಿಯಿಸಿರುವ ಜಗ್ಗೇಶ್ ಅವರು ಒಂದೆ ಕೆಲಸ ನನಗೂ ಬೊರ್ ಆಗಿತ್ತು. ಈ ಹೊಸ ಆಟ ಮಜಾ ಕೊಡುತ್ತಿದೆ. ಇಂಥ ಸಣಮಕ್ಕಳ ಆಟ ಬಹಳ ಖುಷಿ ಕೊಟ್ಟಿದೆ ಎಂದು ವ್ಯಂಗ್ಯವಾಗಿ ತಮ್ಮ ಸಿಟ್ಟನ್ನು ವ್ಯಕ್ತ ಪಡಿಸಿದ್ದಾರೆ.

ಆನ್‍ಲೈನ್ ದೂರು ಕೊಟ್ಟಿದ್ದೇನೆ. ಈ ರೀತಿ ಯತ್ನಗಳಿಗೆ ನಾನು ಹೆದರೊಲ್ಲಾ ನನ್ನ ಅಭಿಮಾನಿಗಳು ನಂಬೋಲ್ಲಾ! ನಿಮ್ಮ ಕಾರ್ಯ ನೀವು ಮುಂದುವರಿಸಿ ನಮ್ಮ ಕಾರ್ಯ ನಾವು ಮಾಡುತ್ತೇವೆ !ಒಟ್ಟಿನಲ್ಲಿ ತಂತ್ರಜ್ಞಾನ ಬಳಕೆ ಮಜವಾಗಿದೆ! ಬೆಸ್ಟ್ ಆಫ್ ಲಕ್ ಭೇಟಿಯಾಗುವ ಎಂದು ಸವಾಲು ಎಸೆದಿದ್ದಾರೆ.

ಕೆಲವರಿಗೆ ಹೀಗೆ ಸೆಲೆಬ್ರೆಟಿ ಪೇಜ್ ತೆರೆದು, ಅವರಿಗೆ ಮುಜುಗರ ಉಂಟುಮಾಡುವುದು ದಂದೆಯಾಗಿದೆ! ಡೋಂಟ್ ವರಿ ಬಿ ಹ್ಯಾಪಿ. ಸೈಬರ್ ಕ್ರೈಮ್ ಸಿಐಡಿಯವರು ಇದನ್ನೇ ನನ್ನ ವೈಯಕ್ತಿಕ ದೂರು ಎಂದು ಭಾವಿಸಿ ಕಾನೂನು ಕ್ರಮ ಕೈಗೊಂಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ.

ಈ ಕೃತ್ಯದ ಹಿಂದೆ ಇರುವವರ ಮಾಹಿತಿ ಬಹುತೇಕ ಗೊತ್ತಾಗಿದೆ. ದಯಮಾಡಿ ಅಮಾಯಕರು ನಕಲಿ ಖಾತೆಗೆ ಪ್ರತಿಕ್ರಿಯಿಸಿ ಅನಾವಶ್ಯಕವಾಗಿ ಸಮಸ್ಯೆಗೆ ಸಿಲುಕಬೇಡಿ ಎಂದಿರುವ ಜಗ್ಗೇಶ್, ಸೈಬರ್ ಪೊಲೀಸರು ಎಲ್ಲವನ್ನು ಗಮನಿಸುತ್ತಿರುತ್ತಾರೆ. ಪೊಲೀಸರು ಪ್ರವೇಶ ಮಾಡುತ್ತಿದ್ದಂತೆ ನಕಲಿ ಖಾತೆ ಮಾಡಿರುವವರು ಪೇಜ್ ಡಿಲೀಟ್ ಮಾಡಿ ಹೋಗಿ ಬಿಡುತ್ತಾರೆ.

ಆದರೆ ನಕಲಿ ಆಟಕ್ಕೆ ಬಳಸಿದ ಐಪಿ ಅಡ್ರೆಸ್ ಸಿಕ್ಕಿದೆ. ಇದರ ಹಿಂದೆ ಒಬ್ಬ ಡೊಂಗಿ ಕನ್ನಡ ಆನ್‍ಲೈನ್ ಓಲಾಟಗಾರನಿದ್ದಾನೆ. ಮುಂದೆ ಅವನನ್ನು ಪರಿಚಯ ಮಾಡಿಸುತ್ತೇನೆ. ಇದೊಂದು ಸಣ್ಣ ಹಾವು-ಏಣಿ ಆಟದಂತೆ ಸುಲಭದ ಕೆಲಸ ಎಂದಿದ್ದಾರೆ.

ಜಗ್ಗೇಶ್ ಅವರ ಟ್ವಿಟರ್ ಖಾತೆಯನ್ನು ನಕಲಿ ಮಾಡಿ ಮುಜುಗರ ಉಂಟು ಮಾಡಿದವರ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮುಂದೈತೆ ಮಾರಿಹಬ್ಬ. ನವರಸ ನಾಯಕರನ್ನು ಕೆಣಕುವ ವ್ಯರ್ಥ ಪ್ರಯತ್ನ ಮಾಡದಿರಿ… ಅವರ ಇನ್ನೊಂದು ಮುಖ ನಿಮಗೆ ದರ್ಶನವಾದರೆ ತಡೆಯಲಸಾಧ್ಯ. ಅವರಿಗೆ ಈಶ್ವರನಂತೆ ಶಾಂತವಾಗಿ ಇರುವುದು ಗೊತ್ತು. ಕೋಪಗೊಂಡಾಗ ಭೈರವನ ರೂಪ ತಾಳುವುದೂ ಗೊತ್ತು, ಎಚ್ಚರ ಎಂದು ಅಭಿಮಾನಿಗಳು ರಿಟ್ವಿಟ್‍ನಲ್ಲಿ ಹೇಳಿದ್ದಾರೆ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ