Breaking News
Home / ಅಂತರಾಷ್ಟ್ರೀಯ (page 24)

ಅಂತರಾಷ್ಟ್ರೀಯ

ಪರಿಶ್ರಮದಿಂದ ಓದಿ ಜ್ಞಾನ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಮಾಳಮಾರುತಿ ಠಾಣೆ ಇನ್ಸಪೆಕ್ಟರ್‌ ಸುನೀಲ ಪಾಟೀಲ

ಬೆಳಗಾವಿ:ವಿದ್ಯಾರ್ಥಿಗಳ ಉಜ್ವಲ ಬದುಕು ಮತ್ತು ಭವಿಷ್ಯವನ್ನು ರೂಪಿಸುವ ಎಸ್ಸೆಸ್ಸೆಲ್ಸಿ ಎಂಬ ಪ್ರಮುಖ ಘಟ್ಟ ದಾಟಬೇಕಾದರೆ ಪರಿಶ್ರಮದಿಂದ ಓದಿ ಜ್ಞಾನ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಮಾಳಮಾರುತಿ ಠಾಣೆ ಇನ್ಸಪೆಕ್ಟರ್‌ ಸುನೀಲ ಪಾಟೀಲ ಅಭಿಪ್ರಾಯಪಟ್ಟರು. ನಗರದ ವಂಟಮೂರಿ ಕಾಲೋನಿ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಿಸಿ ಅವರು ಮಾತನಾಡಿದರು. ನಿಮ್ಮ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಎಂಬ ತಳಪಾಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಆಗ ಮುಂದಿನ ಎಲ್ಲ ಸ್ಪರ್ಧೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ …

Read More »

ಬೆಳಗಾವಿಯ ಇಬ್ಬರು ಸೇರಿ ರಾಜ್ಯದ 7 ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ದರ್ಜೆ

ನವದೆಹಲಿ: ರಾಜ್ಯದ 7 ಜನ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ದರ್ಜೆ ನೀಡಿ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.   ಸಚಿನ್ ಘೋರ್ಪಡೆ, ವಿಕ್ರಂ ಅಮಟೆ, ಸಂಜೀತ್ ವಿ.ಜೆ., ರಾಮ ಲಕ್ಷ್ಮಣಸಾ ಅರಸಿದ್ದಿ, ಬಾಬಾಸಾಬ ನೇಮಗೌಡ, ಗೋಪಾಲ ಎಂ. ಬ್ಯಾಕೋಡ್ ಹಾಗೂ ಮಹಾನಿಂಗ ನಂದಗಾವಿ ಅವರು ಸರಕಾರದ ಆದೇಶದನ್ವಯ ಐಪಿಎಸ್ ಕರ್ನಾಟಕ ಕೆಡರ್ ಅಧಿಕಾರಿಗಳಾಗಿ ಮೇಲ್ದರ್ಜೆಗೇರಿದವರು.   ಈ ಎಲ್ಲ ಅಧಿಕಾರಿಗಳು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ನಾನಾ ಹುದ್ದೆಗಳನ್ನು ಖಾಲಿ …

Read More »

ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಮುಖಂಡ

ಮುಂಬೈ: ಶಿವಸೇನಾ ಮುಖಂಡರೊಬ್ಬರು ಖಾಸಗಿ ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮಹಾರಾಷ್ಟ್ರದ ತಮ್ಮ ಕ್ಷೇತ್ರವಾದ ಹಿಂಗೋಲಿಯಲ್ಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಮಧ್ಯಾಹ್ನದ ಊಟ  ಬಡಿಸಿದ ಕಾರಣಕ್ಕೆ ಶಿವಸೇನೆಯ ಬಂಡಾಯ ಶಾಸಕ ಸಂತೋಷ್ ಬಂಗಾರ್ ಅವರು ಅಡುಗೆ ವ್ಯವಸ್ಥಾಪಕನನ್ನು ನಿಂದಿಸಿ ಅವರಿಗೆ ಎಲ್ಲರ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದರು. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಮನಾರ್ಹವೆಂದರೆ, ಬಂಗಾರ್ ಅವರು ಈ ಘಟನೆಗೆ ಕೆಲವೇ ನಿಮಿಷ ಮೊದಲು  ವಿಧಾನಸಭೆಯಲ್ಲಿ  ಮುಖ್ಯಮಂತ್ರಿ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ. ಲೋಳಸೂರ, ಅರಭಾವಿ, ದುರದುಂಡಿ, ಬಡಿಗವಾಡ ಮಾರ್ಗವಾಗಿ ನಾಗನೂರುವರೆಗೆ ರ್ಯಾಲಿ.

          ಗೋಕಾಕ: ನಾಳೆ ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಅರಭಾವಿ ಬಿಜೆಪಿ ಮಂಡಲದಿಂದ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ರವಿವಾರದಂದು ಇಲ್ಲಿಯ ಎನ್‍ಎಸ್‍ಎಫ್‍ದಲ್ಲಿ ಚಾಲನೆ ನೀಡಲಾಯಿತು.   ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಈ ರ್ಯಾಲಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನೂರಾರು ರೈತರು …

Read More »

ಧರ್ಮಟ್ಟಿಯಲ್ಲಿ ಕಾಣಿಸಿಕೊಂಡ ಚಿರತೆ: ಎಚ್ಚರಿಕೆಯಿಂದಿರಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ.

ಮೂಡಲಗಿ: ಗುರುವಾರದಂದು ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ. ಧರ್ಮಟ್ಟಿ ಗ್ರಾಮದ ಅನಿಲ ಮಂದ್ರೋಳ್ಳಿ ಅವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿಕ್ಕೋಡಿ ತಾಲೂಕಿನಿಂದ ಈ ಚಿರತೆ ಬಂದಿರಬಹುದೆಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತೆಯಿಂದ ಇರಬೇಕು. ಚಿರತೆಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ತಹಶೀಲದಾರ …

Read More »

ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮ: ಗೋಕಾಕ್ ಮೂಲದ ಆರೋಪಿ ಬಂಧನ

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ಭಾನುವಾರ ಗೋಕಾಕದ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ನಕಲಿಗಾಗಿ ಸ್ಮಾರ್ಟ್ ವಾಚ್ ಉಪಯೋಗಿಸಲೆತ್ನಿಸಿದ ಆರೋಪದಲ್ಲಿಅಭ್ಯರ್ಥಿಯೋರ್ವನನ್ನುಗೋಕಾಕ ಶಹರ ಠಾಣೆ ಪೊಲೀಸರು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಸಿದ್ದಪ್ಪ ಮದಿಹಳ್ಳಿ(20) ಬಂಧಿತ ಆರೋಪಿ. ಕಳೆದ ಭಾನುವಾರ ಗೋಕಾಕ ನಗರದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಬಂಧಿತ ಆರೋಪಿ ಸ್ಮಾರ್ಟ್ ವಾಚ್ ನಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ …

Read More »

ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.

ಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ ಹಳ್ಳಿಯೊಂದು ಈ ಹಬ್ಬವನ್ನು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ.   ಬೆಳಗಾವಿಯ ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಮೊಹರಂ, ರಂಜಾನ್ ನಂತರ ಎರಡನೇ ಪವಿತ್ರ ಹಬ್ಬವಾಗಿದೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಬರುತ್ತದೆ. ಈ ವರ್ಷ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ …

Read More »

ಬೀದಿ ನಾಯಿಗಳ ದಾಳಿ – ಮಹಿಳೆಗೆ ಗಂಭೀರ ಗಾಯ ಅಂಬೇಡ್ಕರ್ ನಗರದಲ್ಲಿ ಘಟನೆ

    ಗೋಕಾಕ ಅ 5 : ಮನೆಯಿಂದ ಶೌಚಾಲಯಕ್ಕೆ ತೆರಳುತ್ತಿರುವ ಮಹಿಳೆಯ ಮೇಲೆ ಬೀದಿ ನಾಯಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಗರದ 21 ನೇ ವಾರ್ಡ್‍ನ ಅಂಬೇಡ್ಕರ್ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಅಬೇದಾ ಮುಸ್ತಫಾ ಕಲ್ಲೋಳಿ ಎಂಬ ಮಹಿಳೆ ಮಧ್ಯಾಹ್ನ ಶೌಚಾಲಯಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಬೀದಿ ನಾಯಿಯು ಮಹಿಳೆಯ ಕಾಲಿಗೆ ಕಚ್ಚಿ ಗಂಭೀರವಾಗಿ ಗಾಯಗೋಳಿಸಿದ್ದು, ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಂಬೇಡ್ಕರ್ …

Read More »

ಮುಖ್ಯಮಂತ್ರಿ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಚಿವ ಸೋಮಶೇಖರ್, ಬಿಜೆಪಿ ಅಧ್ಯಕ್ಷ ಜಟೀಲ್ ಇದರಲ್ಲಿ ಭಾಗಿ*

    *ಬೆಂಗಳೂರು:* ಬೆಂಗಳೂರಿನ ಯಲಹಂಕದಲ್ಲಿರುವ ಕಹಾಮದ ಮದರ್ ಡೇರಿ ಘಟಕಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದರು.   ಈ ಸಂದರ್ಭದಲ್ಲಿ ರ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ರವರು ಉಪಸ್ಥಿತರಿದ್ದರು.   ಕಹಾಮದ …

Read More »

ಕಳ್ಳತನ ಪ್ರಕರಣ; ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್

ಬೆಳಗಾವಿ: ಸುಮಾರು ಒಂದು ತಿಂಗಳ ಹಿಂದೆ ಯರಗಟ್ಟಿ ಪಟ್ಟಣದಲ್ಲಿ ನಡೆದ ಕಿರಾಣಿ ಅಂಗಡಿ ಕಳ್ಳತನ ಮತ್ತು ಮನೆ ಕಳ್ಳತನ ಮಾಡಲು ಪ್ರಯತ್ನ ಮಾಡಿದ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಮುರಗೋಡ ಪೊಲೀಸರು ಬಂದಿಸಿದ್ದಾರೆ. ಬಂಧಿತರಿಂದ 51,000/- ರೂ ಮೊತ್ತದ ಕಿರಾಣಿ ಅಂಗಡಿಯ ಮಾಲನ್ನು ಮತ್ತು ಕೃತ್ಯಕ್ಕೆ ಬಳಸಿದ್ದ 2,00,000/- ರೂ ಮೌಲ್ಯದ ಅಷೆ ಟಂಟಂ ವಾಹನವನ್ನು ಹಾಗೂ ಒಂದು ರಾಡ್ ಸೇರಿದಂತೆ ಒಟ್ಟು-2,51,000/- ರೂ ಮೌಲ್ಯದ ವಸ್ತುಗಳನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ. ರಾಮದುರ್ಗ ಡಿ.ಎಸ್.ಪಿ …

Read More »