Breaking News
Home / ಅಂತರಾಷ್ಟ್ರೀಯ (page 221)

ಅಂತರಾಷ್ಟ್ರೀಯ

ಸ್ವದೇಶಿ ಎಂದರೆ ಎಲ್ಲ ವಿದೇಶಿ ಉತ್ಪನ್ನಗಳ ಬಹಿಷ್ಕಾರವಲ್ಲ; ಭಾಗವತ್‌ ಸ್ಪಷ್ಟನೆ

ಹೊಸದಿಲ್ಲಿ: ಸ್ವದೇಶಿ ಎಂದರೆ ಪ್ರತಿಯೊಂದು ವಿದೇಶಿ ಉತ್ಪನ್ನವನ್ನು ಬಹಿಷ್ಕರಿಸುವುದಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಜೀ ಭಾಗವತ್‌ ಸ್ಪಷ್ಟಪಡಿಸಿದ್ದಾರೆ. ಎಲ್ಲ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವುದ ರಲ್ಲಿ ಅರ್ಥವಿಲ್ಲ. ದೇಶದಲ್ಲಿ ಸಾಂಪ್ರದಾಯಿಕ ಕೊರತೆ ಇರುವ, ಸ್ಥಳೀಯವಾಗಿ ಲಭ್ಯ ವಿಲ್ಲದ ತಂತ್ರ ಜ್ಞಾನಗಳು ಅಥವಾ ವಸ್ತುಗ‌ಳನ್ನು ಮಾತ್ರ ಆಮದು ಮಾಡಿಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read More »

ಕೇಂದ್ರದ ಮೂಲಕವೇ ಲಸಿಕೆ ಸಂಗ್ರಹ, ಪೂರೈಕೆ

ಹೊಸದಿಲ್ಲಿ: ಲಸಿಕೆ ಸಂಶೋಧನೆಗಳು ಬಹುತೇಕ ಮುಕ್ತಾಯ ಹಂತಕ್ಕೆ ಬಂದು ತಲುಪಿವೆ. ಈ ಲಸಿಕೆಗಳು ಲಭ್ಯವಾದ ಬಳಿಕ ಕೇಂದ್ರದ ಮೂಲಕವೇ ಸಂಗ್ರಹ ಕಾರ್ಯ, ಎಲ್ಲ ರಾಜ್ಯಗಳಿಗೆ ಪೂರೈಕೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ನೀತಿ ಆಯೋಗದ ಕಾಯಂ ಸದಸ್ಯ, ಆರೋಗ್ಯ ಸಚಿವಾಲಯದ ಕಾರ್ಯದರ್ಶಿಯೂ ಆಗಿರುವ ಡಾ| ವಿ.ಕೆ. ಪಾಲ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ಜರುಗಿತು. ಲಸಿಕೆ ವಿತರಣೆಯಲ್ಲಿ ಗೊಂದಲಕ್ಕೆ ಅವಕಾಶ ನೀಡದೆ, ಲಸಿಕೆ ಸಂಗ್ರಹಕ್ಕೆ ಪ್ರತ್ಯೇಕ ಮಾರ್ಗ ಕಂಡುಕೊಳ್ಳದಂತೆ ಎಲ್ಲ …

Read More »

ಖಾಸಗಿ ರೈಲುಗಳಿಗೆ ಇರಲಿದೆ ಕೇಂದ್ರದ ನಿಗಾ; ನಿಯಮಗಳ ಪ್ರಕಟ; ಸಮಯ ಪಾಲನೆಗೆ ಇರಲಿದೆ ಬಿಗಿ ಕ್ರಮ

ಹೊಸದಿಲ್ಲಿ: ಖಾಸಗಿ ಕಂಪೆನಿಗಳ ಪಾಲುದಾರಿಕೆಯಲ್ಲಿ ಆರಂಭವಾಗಲಿರುವ ರೈಲು ಸೇವೆಗಳಿಗೆ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಹೇರಲು ರೈಲ್ವೆ ಇಲಾಖೆ ಮುಂದಾಗಿದೆ. ಸಮಯ ಪರಿಪಾಲನೆ ಮಾಡದ ರೈಲುಗಳ ಮೇಲೆ ದಂಡ ವಿಧಿಸುವ, ಸುಳ್ಳು ಆದಾಯ ತೋರಿಸುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂಥ ನಿಯಮಗಳನ್ನು ಪ್ರಕಟಿಸಲಾಗಿದೆ. ತಡವಾದರೆ, ಬೇಗ ಬಂದರೆ ದಂಡ: ಖಾಸಗಿ ರೈಲೊಂದು ನಿಲ್ದಾಣದಿಂದ ತಡವಾಗಿ ಹೊರಟರೆ ಅಥವಾ ನಿಗದಿತ ನಿಲ್ದಾಣವನ್ನು ತಡವಾಗಿ ತಲುಪಿದರೆ ಆ ರೈಲನ್ನು ನಿರ್ವಹಿಸುವ ಖಾಸಗಿ ಕಂಪೆನಿಯ ಮೇಲೆ ದಂಡ …

Read More »

ದೇವರ ನಾಡಿನಲ್ಲಿ ಅಲೆಪ್ಪಿಯೇ ಸ್ವರ್ಗ.!

ಅಲೆಪ್ಪಿಗೆ ಒಮ್ಮೆ ಭೇಟಿ ನೀಡಿದವರು ಅಲ್ಲಿನ ಸಹಜ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಒಂದು ಕಡೆ ಕಡಲು, ಮತ್ತೊಂದೆಡೆ ಕಡಲಿನಾಳದ ಹವಳಗಳು ತೇಲಿ ಬಂದು ಸೃಷ್ಟಿಸಿದ ಹವಳದ ದಂಡೆಗಳು, ಪಾಮ್ ಮರದ ದಟ್ಟ ಕಾಡು, ಹಿನ್ನೀರು..ಈ ಎಲ್ಲ ಸೊಬಗನ್ನು ಒಂದೆಡೆ ಸೇರಿಸಬೇಕಾದರೆ ನೀವು ಕೇರಳದ ಅಲೆಪ್ಪಿಗೆ ಭೇಟಿ ನೀಡಲೇ ಬೇಕು. ಇಲ್ಲಿನ ದೋಣಿ ವಿಹಾರ ಅವಿಸ್ಮರಣೀಯ. ಹಿನ್ನೀರಿನ ಪ್ರವಾಸ, ದೋಣಿ ಮನೆಯಲ್ಲಿ ತಂಗುವಿಕೆ, ಪ್ರಶಾಂತ ವಾತಾವರಣ ಎಂಥವರನ್ನೂ ಸೆಳೆಯುವಂತಿದೆ. ದೋಣಿ …

Read More »

ಮತ್ತೊಂದು ದಾಖಲೆ ಬರೆದ ಪ್ರಧಾನಿ ಮೋದಿ

ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮೂರು ಸಲ ಪ್ರಧಾನಿಯಾಗಿ ಆರು ವರ್ಷ 78 ದಿನ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ. ಮೋದಿ ಆರು ವರ್ಷ 79 ದಿನ ಆಡಳಿತ ನಡೆಸಿದ್ದು ವಾಜಪೇಯಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. 2014ರ ಮೇ 26 ರಂದು ಭಾರತದ 14 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು 2019ರ ಮೇ …

Read More »

ಸುಪ್ರೀಂ ತೀರ್ಪು ಸಮಾನತೆಯ ಹಾದಿಯಲ್ಲಿ

ಸಮಾನತೆಯ ಹಾದಿಯಲ್ಲಿ ದೇಶವು ಸಾಗಬೇಕಾದ ದಾರಿ ಇನ್ನೂ ಇದೆಯಾದರೂ ಈ ನಿಟ್ಟಿನಲ್ಲಿ ಒಂದು ರಾಷ್ಟ್ರವಾಗಿ, ಸಮಾಜವಾಗಿ ನಾವು ಕೆಲವು ವರ್ಷಗಳಿಂದ ಗಮನಾರ್ಹ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವೊ ಒಂದೆನ್ನಬಹುದು. ಹಿಂದೂ ಅವಿಭಜಿತ ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು, ಮಗಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಸಮಾನ ಹಕ್ಕಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ಇದಷ್ಟೇ ಅಲ್ಲದೇ …

Read More »

ಎಸೆಸೆಲ್ಸಿ ಪೂರಕ ಪರೀಕ್ಷೆ: ಅರ್ಜಿ ಆಹ್ವಾನ

ಬೆಂಗಳೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ಅಭ್ಯರ್ಥಿ ಗಳಿಗೆ ಸೆಪ್ಟಂಬರ್‌ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಕಾರಣಗಳಿಂದ ಗೈರುಹಾಜರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಅವರನ್ನು ಪ್ರಥಮ ಅವಕಾಶ ಎಂದು ಪರಿಗಣಿಸಲಾಗುವುದು. ಅದೇ ರೀತಿ, ಈ ಪ್ರಕರಣಗಳಿಂದ ವಿದ್ಯಾರ್ಥಿಗಳು ಕೆಲ ವಿಷಯಗಳಿಗೆ ಹಾಜರಾಗಿ, ಹಲವು ವಿಷಯಗಳಿಗೆ ಗೈರುಹಾಜರಾದರೂ, ಪೂರಕ ಪರೀಕ್ಷೆಯಲ್ಲಿ ನೋಂದಾಯಿಸಿಕೊಂಡರೆ, ಅಂಥವರನ್ನೂ ಪ್ರಥಮ ಅವಕಾಶ ಎಂದು ಪರಿಗಣಿಸಲಾಗುವುದು. ಆದರೆ, ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲದಿರುವ ಬಗ್ಗೆ ಸ್ವತಃ ವಿದ್ಯಾರ್ಥಿಗಳ ಪೋಷಕರ …

Read More »

‘ಬೆಳೆ ಸಮೀಕ್ಷೆಗೆ ಮೊಬೈಲ್ ಆಯಪ್ ಬಳಸಿ’

ಬೆಳಗಾವಿ: ‘ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಯಪ್ ಮೂಲಕ ದಾಖಲಿಸುವ ವಿನೂತನ ಯೋಜನೆಯನ್ನು ಸರ್ಕಾರದಿಂದ ಪ್ರಾರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ. ‘ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಸಾಂಖ್ಯಿಕ ಇಲಾಖೆ ಜಂಟಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ. ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ತಾಲ್ಲೂಕು ಆಡಳಿತದಿಂದ ಪರಿಶೀಲಿಸಲಾಗುವುದು’. ‘ರೈತರು ಸ್ಮಾರ್ಟ್‌ ಮೊಬೈಲ್‌ ಫೋನ್‌ನಲ್ಲಿ ಬೆಳೆ ಸಮೀಕ್ಷೆ ಆಯಪ್‌ ಅನ್ನು …

Read More »

ಡಿ.ಜೆ. ಹಳ್ಳಿ ಗಲಭೆ ಖಂಡನೀಯ, ಸರ್ಕಾರ ಕಾನೂನಿನ ಕ್ರಮ ಕೈಗೊಳ್ಳಲಿ: ಡಿ.ಕೆ. ಶಿವಕುಮಾರ್

ಬೆಂಗಳೂರು: ಡಿ.ಜೆ. ಹಳ್ಳಿ ಘಟನೆಯನ್ನು ನಾನು ಖಂಡಿಸುತ್ತೇನೆ. ಯಾರೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದ ಬಳಿ ಬೆಂಗಳೂರಿನ ಡಿ.ಜೆ. ಹಳ್ಳಿ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಇದು ಸಮಾಜಘಾತುಕ ಕೃತ್ಯ. ಶಾಸಕರ ಆಸ್ತಿಯಾಗಲಿ, ಸಾಮಾನ್ಯ ಜನರ ಆಸ್ತಿಯೇ ಆಗಿರಲಿ, ಪೊಲೀಸ್ ಠಾಣೆಯಾಗಿರಲಿ ಯಾವುದನ್ನು ಹಾನಿ ಮಾಡುವುದು ಸರಿಯಲ್ಲ. ಇದನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು. …

Read More »

ಡಿಜೆ ಹಳ್ಳಿ ಘಟನೆ| ತ‍ಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು: ಸುರೇಶ ಅಂಗಡಿ

ಬೆಳಗಾವಿ: ‘ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಗಲಾಟೆ ಮಾಡಿ, ಸಮಾಜದಲ್ಲಿ ಶಾಂತಿ ಕದಡಿದವರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಒತ್ತಾಯಿಸಿದರು. ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಗಲಾಟೆಗೆ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ. ಈ ಹಿಂದೆ ಇಲ್ಲಿನ ಬಿಮ್ಸ್‌ ಆಸ್ಪತ್ರೆ ಎದುರು ನಿಂತಿದ್ದ ಆಂಬುಲೆನ್ಸ್‌ಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಲಾಗಿತ್ತು. ಇಂತಹ ಘಟನೆಗಳು ಅತ್ಯಂತ ಖಂಡನೀಯ. ಇವೆಲ್ಲವೂ ದೇಶದ್ರೋಹಿಗಳು ಮಾಡುವ …

Read More »