Home / ಅಂತರಾಷ್ಟ್ರೀಯ (page 178)

ಅಂತರಾಷ್ಟ್ರೀಯ

ರಾಜ್ಯದಲ್ಲಿ ಮುಂದುವರೆದ ರೈತರ ಆತ್ಮಹತ್ಯೆ ಸರಣಿ..!

ಬೆಂಗಳೂರು   : ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಸಾಲದ ಸುಳಿಯಿಂದ ಹೊರಬರಲಾರದೆ ಅನ್ನದಾತರು ನೇಣಿನ ಪಾಶಕ್ಕೆ ಕೊರಳೊಡ್ಡುವುದು ಮುಂದುವರೆಯುತ್ತಲೇ ಇದೆ. ದುರಂತವೆಂದರೆ ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಏರಿಕೆ ಕಂಡಿದೆ. ರಾಜ್ಯದಲ್ಲಿ ಏರಿಕೆ ಕಂಡ ರೈತರ ಆತ್ಮಹತ್ಯೆಸಾಲಮನ್ನಾ, ಬೆಳೆ ವಿಮೆ ಆಸರೆ ಇದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ರಾಜ್ಯದಲ್ಲಿ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಯ ಸಂಕಷ್ಟ ಎದುರಾಗುತ್ತದೆ. ಇದರ ಹೊಡೆತಕ್ಕೆ …

Read More »

ಭಾಷೆಗಳ ಇತಿಹಾಸ ಅಧ್ಯಯನ ಸಮಿತಿಯಲ್ಲಿ ಕನ್ನಡಿಗರಿಗಿಲ್ಲ ಅವಕಾಶ : ಹೆಚ್ಡಿಕೆ ಬೇಸರ

ಬೆಂಗಳೂರು, ಭಾರತದ 12 ಸಾವಿರ ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆ.     ಆದರೆ ಇದರಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಯ ಜ್ಞಾನವಿರುವ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲವೇ ಇಲ್ಲವಾಗಿರುವುದು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕನ್ನಡಿಗ ಪ್ರತಿನಿಧಿಗಳೇ ಇಲ್ಲದೇ …

Read More »

ಬೀದಿ ನಾಟಕ ಆರಂಭಿಸಲು ಕಲಾವಿದರ ಮನವಿ

ಬೆಳಗಾವಿ: ‘ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ಅನುಕೂಲ ಕಲ್ಪಿಸಲು, ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುವ ಯೋಜನೆಗಳ ಜನ ಜಾಗೃತಿಗೆ ಬೀದಿ ನಾಟಕ ಕಾರ್ಯಕ್ರಮಗಳನ್ನು ಆರಂಭಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಜಿಲ್ಲಾ ಘಟಕದವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ವಾರ್ತಾ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.   ‘ರಾಜ್ಯದ 4,500 ಕಲಾವಿದರನ್ನು ದಶಕಗಳಿಂದಲೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ …

Read More »

‘ಆರ್‌ಸಿಯುಗೆ ಜಾಗ: ಶ್ಲಾಘನೀಯ’

ಬೆಳಗಾವಿ: ‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ ಸಮೀಪದಲ್ಲಿ ಜಾಗ ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವುದು ಶ್ಲಾಘನೀಯವಾಗಿದೆ’ ಎಂದು ಸಿಂಡಿಕೇಟ್ ಸದಸ್ಯ ಡಾ.ಆನಂದ ಹೊಸೂರ ಹೇಳಿದ್ದಾರೆ. ‘ಜಮೀನು ಒದಗಿಸುವ ಮೂಲಕ, ವಿಶ್ವವಿದ್ಯಾಲಯದ ದಶಮಾನೋತ್ಸವ ಸಂದರ್ಭದಲ್ಲಿ ಸರ್ಕಾರವು ಈ ಭಾಗದ ಜನರಿಗೆ ಖುಷಿಯ ಸುದ್ದಿ ಕೊಟ್ಟಿದೆ. ಅನೇಕ ವರ್ಷಗಳಿಂದ ತಾಂತ್ರಿಕ ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕಾರ್ಯಗಳು ಮುಂದುವರಿಯುವುದಕ್ಕೆ ಅವಕಾಶ ಕೊಟ್ಟಂತಾಗಿದೆ. ಇದರೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ …

Read More »

ಪೂಜಾರಿ ಸಹೋದರಿಯರಿಗೆ ಸತ್ಕಾರ

ಐಗಳಿ: ‘ಬಡತನವಿದ್ದರೂ ಶೈಕ್ಷಣಿಕವಾಗಿ ಸಾಧನೆ ಮಾಡಬಹುದು ಎನ್ನುವುದಕ್ಕೆ ಪೂಜಾರಿ ಸಹೋದರಿಯರು ಸಾಕ್ಷಿಯಾಗಿದ್ದಾರೆ’ ಎಂದು ಜಿಲ್ಲಾ ಆಯುಷ್ ನಿವೃತ್ತ ಅಧಿಕಾರಿ ಡಾ.ಬಸಗೌಡ ಪಾಟೀಲ ಹೇಳಿದರು. ಇಲ್ಲಿ ಡಾ.ಪಾಟೀಲ ಸಹೋದರರು ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅರಟಾಳ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಆದರ್ಶ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕವಿತಾ ಪೂಜಾರಿ (587) ಮತ್ತು ಸಹೋದರಿ ದ್ವಿತೀಯ ಪಿಯುಸಿಯಲ್ಲಿ 560 ಅಂಕ ಪಡೆದ ಶಿಲ್ಪಾ ಪೂಜಾರಿ ಅವರನ್ನು ಸತ್ಕರಿಸಿ ಮಾತನಾಡಿದರು. …

Read More »

ಮೋದಿ ಜನ್ಮ ದಿನ: ಬೆಳಗಾವಿಯಲ್ಲಿ ಬಿಜೆಪಿಯಿಂದ ಸೇವಾ ಸಪ್ತಾಹ

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸೆ. 17ರಂದು ಆಚರಿಸಲಾಗುವುದು. ಪಕ್ಷದ ಕಾರ್ಯಕರ್ತರು ಸೇವಾ ಸಪ್ತಾಹ ಕೈಗೊಂಡಿದ್ದಾರೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಬಿ. ಪಾಟೀಲ ತಿಳಿಸಿದರು. ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ದೇಶನದಂತೆ ಸೆ.14ರಿಂದ ಆರಂಭವವಾಗಿರುವ ಸೇವಾ ಸಪ್ತಾಹ ಸೆ. 20ರವರೆಗೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು. …

Read More »

ವಿಪತ್ತು ನಿರ್ವಹಣೆ: ಸ್ವಯಂ ಸೇವಕರಿಗೆ ತರಬೇತಿ

ಅಥಣಿ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್‌ನ ಇಲ್ಲಿನ ಶಾಖೆಯಿಂದ ವಿಪತ್ತು ನಿರ್ವಹಣೆ ಕುರಿತು ತಾಲ್ಲೂಕಿನ ಮುರುಗುಂಡಿ ಮುರಸಿದ್ದೇಶ್ವರ ದೇವಾಲಯದಲ್ಲಿ ಸ್ವಯಂ ಸೇವಕರಿಗೆ ತರಬೇತಿ ಶಿಬಿರ ನಡೆಸಲಾಯಿತು.   ತಹಶೀಲ್ದಾರ್ ದುಂಡಪ್ಪ ಕೋಮಾರ ಉದ್ಘಾಟಿಸಿ ಮಾತನಾಡಿ, ‘ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಸ್ವಯಂಸೇವಕರ ಮೂಲಕ ಕೈ ಜೋಡಿಸಿದರೆ ವಿಪತ್ತನ್ನು ಸುಲಭವಾಗಿ ನಿರ್ವಹಿಸಬಹುದು’ ಎಂದರು. ‘ತಾಲ್ಲೂಕಿನಲ್ಲಿ ಪ್ರತಿ ವರ್ಷ ನೆರೆ ಹಾವಳಿ ಕಾಡುತ್ತಿರುತ್ತದೆ. ಆಗ ಎನ್‌ಡಿಆರ್‌ಎಫ್‌, ಪೊಲೀಸರು, ಸೈನ್ಯದವರು ಬಂದು ತಲುಪವರಿಗೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮಹಾಪೂರ …

Read More »

ಮೇಕೆದಾಟು ಯೋಜನೆ; ಕೇಂದ್ರ ಸಚಿವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ‌

ಬೆಂಗಳೂರು: ಮೇಕೆದಾಟು ಯೋಜನೆಗೆ ಕೂಡಲೇ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸುವಂತೆ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದರು. ನವದೆಹಲಿಯ ಜಲಶಕ್ತಿ ಮಂತ್ರಾಲಯದಲ್ಲಿ ನಡೆದ ಈ ಭೇಟಿಯ ವೇಳೆ, ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನ ಕುರಿತು ಕೇಂದ್ರ ಸಚಿವರನ್ನು ಒತ್ತಾಯಿಸಿದರು. ಹಾಗೆಯೇ ಕೃಷ್ಣ ನದಿ ನೀರು ಹಂಚಿಕೆ ಮತ್ತು ಆಲಮಟ್ಟಿ ಅಣೆಕಟ್ಟೆ ಎತ್ತರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ …

Read More »

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಲು ಕನ್ನಡಪರ ಹೋರಾಟಗಾರರ ಆಗ್ರಹ

ಬೆಳಗಾವಿ : ಹುಬ್ಬಳ್ಳಿ ರೈಲು ನಿಲ್ದಾಣ ಇನ್ನೂ ಮುಂದೆ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣವಾಗಲಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣವೆಂದು ನಾಮಕರಣ ಮಾಡಲು ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ ಎಂದು ಹೆಸರಿಡಬೇಕು. ಜೊತೆಗೆ ರೈಲು ನಿಲ್ದಾಣಕ್ಕೆ ಬೆಳವಡಿ ರಾಣಿ ಮಲ್ಲಮ್ಮ ಹೆಸರು ಇಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. …

Read More »

ಸಂಜನಾಗೆ ಇಂದೂ ಮುಂದುವರೆದ ಸಿಸಿಬಿ ಡ್ರಿಲ್

ಬೆಂಗಳೂರು,   ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಅವರ ವಿಚಾರಣೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದಾರೆ. ಸಂಜನಾ ಅವರ ಪೊಲೀಸ್ ಕಸ್ಟಡಿ ಇಂದು ಮುಗಿಯುವ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತಲೆ ಮರೆಸಿಕೊಂಡಿರುವ ಶೇಖ್ ಫಾಝಿಲ್ ಎಲ್ಲಿದ್ದಾನೆ, ಆತನ ಚಟುವಟಿಕೆಗಳೇನು, ಕ್ಯಾಸಿನೋ ಪಾರ್ಟಿಗೆ ಯಾರ್ಯಾರನ್ನು ಕರೆದೊಯ್ಯುತ್ತಿದ್ದ ಎಂಬಿತ್ಯಾದಿಗಳ ಬಗ್ಗೆ ಸಂಜನಾ ಅವರಿಂದ ಉತ್ತರ ಪಡೆಯುತ್ತಿದ್ದಾರೆ. ಆದಿತ್ಯ ಆಳ್ವಾ ಅವರ ವಿಶಾಲವಾದ ಭವ್ಯ ಬಂಗಲೆಯಲ್ಲಿ ಪಾರ್ಟಿಗಳು ನಡೆಯುತ್ತಿತ್ತೇ , ನೀವೇನಾದರೂ …

Read More »