Breaking News
Home / new delhi / ಆಗಸ್ಟ್‌ನಲ್ಲಿ ಕೊರೋನಾ ಅಬ್ಬರ : ದಾಖಲಾದ ಕೇಸ್‌ಗಳೆಷ್ಟು..?

ಆಗಸ್ಟ್‌ನಲ್ಲಿ ಕೊರೋನಾ ಅಬ್ಬರ : ದಾಖಲಾದ ಕೇಸ್‌ಗಳೆಷ್ಟು..?

Spread the love

ಬೆಂಗಳೂರು  : ರಾಜ್ಯದಲ್ಲಿ ಸೋಮವಾರ 6495 ಮಂದಿ ಹೊಸದಾಗಿ ಕೊರೋನಾ ಸೋಂಕು ಅಂಟಿಸಿಕೊಂಡಿದ್ದು 7,238 ಮಂದಿ ಗುಣಮುಖರಾಗಿದ್ದಾರೆ.113 ಮಂದಿ ಮೃತಪಟ್ಟಿದ್ದಾರೆ.747 ಮಂದಿ ರಾಜ್ಯದ ವಿವಿಧ ಕೊವೀಡ್‌ ಅಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಗ್ಯ ಇಲಾಖೆಯ ಸೋಮವಾರದ ವರದಿಯ ಪ್ರಕಾರ 43,132 ಮಂದಿಗೆ ಮಾತ್ರ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಕಳೆದ ಕೆಲ ದಿನಗಳಲ್ಲಿ 60 ಸಾವಿರಕ್ಕೂ ಮಿಕ್ಕು ಕೊರೋನಾ ಪರೀಕ್ಷೆಗಳು ನಡೆಯುತ್ತಿದ್ದವು.

ಬೆಂಗಳೂರಲ್ಲಿ ಅಧಿಕ: ಬೆಂಗಳೂರು ನಗರದಲ್ಲಿ ಸೋಮವಾರ ಕೊರೋನಾದಿಂದ 27 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡದಲ್ಲಿ 12, ಧಾರವಾಡ 9, ಮೈಸೂರು, ದಾವಣಗೆರೆ ತಲಾ 6, ಬೆಳಗಾವಿ, ಬಳ್ಳಾರಿ, ಹಾವೇರಿ ತಲಾ 5 ಮಂದಿ ಕೊರೋನಾದಿಂದ ಅಸುನೀಗಿದ್ದಾರೆ.

ಶಿವಮೊಗ್ಗ, ಮಂಡ್ಯ, ಕಲಬುರಗಿ ತಲಾ 4, ವಿಜಯಪುರ, ತುಮಕೂರು ತಲಾ 3, ಚಾಮರಾಜನಗರ, ಹಾಸನ, ಉಡುಪಿ, ರಾಮನಗರ, ರಾಯಚೂರು, ಚಿಕ್ಕಮಗಳೂರು ತಲಾ 2, ಬಾಗಲಕೋಟೆ, ಬೀದರ್‌, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಗದಗ, ಕೋಲಾರ, ಕೊಪ್ಪಳ ಜಿಲ್ಲೆಗಳಲ್ಲಿ ತಲಾ 1 ಸಾವು ಸಂಭವಿಸಿದೆ.

ಪ್ರಪಂಚದ ವಿವಿಧ ದೇಶಗಳಲ್ಲಿ ಕೊರೋನಾ ಅಬ್ಬರ ಹೇಗಿದೆ?…

ಬೆಂಗಳೂರು ನಗರದಲ್ಲಿ ಹೊಸದಾಗಿ 1,862 ಮಂದಿ, ಮೈಸೂರು 405, ಬಳ್ಳಾರಿ 365, ತುಮಕೂರು 316, ಚಿತ್ರದುರ್ಗ 286, ಧಾರವಾಡ 279, ದಕ್ಷಿಣ ಕನ್ನಡ 270, ಹಾಸನ 217, ಕೊಪ್ಪಳ 200, ಗದಗ 178, ಬಾಗಲಕೋಟೆ 172, ಶಿವಮೊಗ್ಗ 168, ಕಲಬುರಗಿ 161, ಮಂಡ್ಯ 159, ಬೆಳಗಾವಿ 154, ರಾಯಚೂರು 140, ಯಾದಗಿರಿ 122, ಚಿಕ್ಕಮಗಳೂರು 100, ಉತ್ತರ ಕನ್ನಡ 86, ವಿಜಯಪುರ 84, ಉಡುಪಿ 83, ಬೆಂಗಳೂರು ಗ್ರಾಮಾಂತರ 73, ರಾಮನಗರ 69, ಚಿಕ್ಕಬಳ್ಳಾಪುರ 68, ಹಾವೇರಿ 63, ಕೋಲಾರ 60, ಚಾಮರಾಜನಗರ 51, ಬೀದರ್‌ 30, ಕೊಡಗು 17 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಆಗಸ್ಟ್‌ನಲ್ಲಿ ಅಬ್ಬರ: 2.13 ಲಕ್ಷ ಕೇಸ್‌

ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್‌ ತಿಂಗಳಿನಲ್ಲಿ ಕೊರೋನಾ ಸೋಂಕು ತನ್ನ ರೌದ್ರವತಾರವನ್ನು ಪ್ರದರ್ಶಿಸಿದೆ. ರಾಜ್ಯದಲ್ಲಿ ಮಾರ್ಚ್ 8ರಂದು ಮೊದಲ ಕೊರೋನಾ ಪ್ರಕರಣ ಬೆಳಕಿಗೆ ಬಂದ ಬಳಿಕ ಆಗಸ್ಟ್‌ ಒಂದರವರೆಗೆ ಒಟ್ಟು 1.29 ಲಕ್ಷ ಮಂದಿಗೆ ಕೊರೋನಾ ಬಂದಿದ್ದರೆ, ಆಗಸ್ಟ್‌ 31ರ ಹೊತ್ತಿಗೆ ಈ ಸಂಖ್ಯೆ 3.42 ಲಕ್ಷಕ್ಕೆ ತಲುಪಿದೆ. ಅಂದರೆ ಆಗಸ್ಟ್‌ ನಲ್ಲೇ 2.13 ಲಕ್ಷ ಮಂದಿಗೆ ಸೋಂಕು ತಗುಲಿದೆ.

ಭಾರತದಲ್ಲಿ ಏರುತ್ತಿದೆ ಸೋಂಕಿತರ ಸಂಖ್ಯೆ: ಇಟಲಿ, ಬ್ರಿಟನ್‌, ಅಮೆರಿಕ, ಬ್ರೆಜಿಲ್‌ನಲ್ಲಿ ಹೇಗಿದೆ?.

ರಾಜ್ಯದಲ್ಲಿ ಆಗಸ್ಟ್‌ 1ರ ಹೊತ್ತಿಗೆ ಕೊರೋನಾ ಸೋಂಕಿನಿಂದ 2,412 ಮಂದಿ ಸತ್ತಿದ್ದರೆ, ಆಗಸ್ಟ್‌ 31ಕ್ಕೆ ಈ ಸಂಖ್ಯೆ 5702 ಕ್ಕೆ ಬಂದು ತಲುಪಿದೆ. ಅಂದರೆ ಒಂದು ತಿಂಗಳಲ್ಲಿ 3,290 ಮಂದಿ ಮೃತಪಟ್ಟಿದ್ದಾರೆ.

ಆಗಸ್ಟ್‌ ಕೊನೆಯ ವಾರದ ಹೊತ್ತಿಗೆ ರಾಜ್ಯದಲ್ಲಿ 8,000ಕ್ಕೂ ಹೆಚ್ಚು ಪ್ರಕರಣಗಳು ಸತತವಾಗಿ ವರದಿಯಾಗುತ್ತಿದ್ದರೂ ಕೂಡ ಸಕ್ರಿಯ ಪ್ರಕರಣಗಳಲ್ಲಿ ದೊಡ್ಡ ಮಟ್ಟದ ಏರಿಕೆ ಆಗಿಲ್ಲ. ಆಗಸ್ಟ್‌ 1 ಕ್ಕೆ ರಾಜ್ಯದಲ್ಲಿ 73,219 ಸಕ್ರಿಯ ಪ್ರಕರಣಗಳಿದ್ದರೆ ಆಗಸ್ಟ್‌ 31 ಕ್ಕೆ ಈ ಸಂಖ್ಯೆ 87,235ಕ್ಕೆ ಏರುವ ಮೂಲಕ ಸಕ್ರೀಯ ಪ್ರಕರಣಗಳು 14,016 ರಷ್ಟುಹೆಚ್ಚಾಗಿದೆ.

ಇದೇ ವೇಳೆ ಆಗಸ್ಟ್‌ ನ ಆರಂಭದಲ್ಲಿ ಪ್ರತಿನಿತ್ಯ ಸುಮಾರು 30 ಸಾವಿರದಷ್ಟುಆಗುತ್ತಿದ್ದ ಕೊರೋನಾ ಪರೀಕ್ಷೆಗಳ ಪ್ರಮಾಣ ತಿಂಗಳಾಂತ್ಯಕ್ಕೆ ಪ್ರತಿದಿನ ಸುಮಾರು 60 ಸಾವಿರ ನಡೆಯುತ್ತಿದೆ.

 

 


Spread the love

About Laxminews 24x7

Check Also

ಹೊರಬಂದು ಮತ ಹಾಕಿ : ನಿರ್ಮಲಾ ಸೀತಾರಾಮನ್‌ ಮನವಿ

Spread the love ಬೆಂಗಳೂರು,ಏ.26- ಪ್ಲೀಸ್‌ ಮನೆಯಿಂದ ಹೊರಗೆ ಬಂದು ಮತ ಚಲಾಯಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ