Breaking News
Home / ಜಿಲ್ಲೆ / ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದ್ದು ಈ ಜಿಲ್ಲೆಯನ್ನು ಯಡಿಯೂರಪ್ಪ ಸರ್ಕಾರ ವಿಭಜನೆ ಮಾಡಬಹುದೇ

ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದ್ದು ಈ ಜಿಲ್ಲೆಯನ್ನು ಯಡಿಯೂರಪ್ಪ ಸರ್ಕಾರ ವಿಭಜನೆ ಮಾಡಬಹುದೇ

Spread the love

ಬೆಳಗಾವಿ- ನಾಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ರಾಜ್ಯದ ಬಜೆಟ್ ಮಂಡಿಸಲಿದ್ದು ಬಜೆಟ್ ನಲ್ಲಿ ಏನೆಲ್ಲಾ ಇರಬಹುದು ಎಂಬುದು ರಾಜ್ಯದ ಜನರಲ್ಲಿರುವ ಕೌತುಕ…

ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹದಿನಾಲ್ಕು ತಾಲ್ಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿದ್ದು ಈ ಜಿಲ್ಲೆಯನ್ನು ಯಡಿಯೂರಪ್ಪ ಸರ್ಕಾರ ವಿಭಜನೆ ಮಾಡಬಹುದೇ ಎನ್ನುವದು ಬೆಳಗಾವಿ ಜಿಲ್ಲೆಯ ಜನರ ಪ್ರಶ್ನೆ ಆಗಿದೆ.

ಕಾಂಗ್ರೆಸ್,ಬಿಜೆಪಿ ಪಕ್ಷಗಳು ಪಕ್ಷದ ಸಂಘಟನೆಗೆ ಅನಕೂಲವಾಗುವಂತೆ ಬೆಳಗಾವಿ ಜಿಲ್ಲೆಯನ್ನು ಮೂರು ಭಾಗಗಳನ್ನಾಗಿ ಮೂವರು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ ,ಬೆಳಗಾವಿ ಮಹಾನಗರ ಜಿಲ್ಲೆ,ಚಿಕ್ಕೋಡಿ ಜಿಲ್ಲೆ, ಬೆಳಗಾವಿ ಗ್ರಾಮೀಣ ಜಿಲ್ಲೆ ಅಂತಾ ಮೂವರು ಅದ್ಯಕ್ಷರನ್ನು ನೇಮಕ ಮಾಡಿಕೊಂಡು ಪಕ್ಷದ ಸಂಘಟನೆ ಮಾಡುತ್ತಿದ್ದಾರೆ .

ಬೆಳಗಾವಿ ಜಿಲ್ಲೆ ರಾಜಕೀಯವಾಗಿ ವಿಭಜನೆ ಆಗಿದೆ ಆದರೆ ಆಡಳಿತಾತ್ಮಕವಾಗಿ ವಿಭಜನೆ ಮಾಡಲು ಇದೇ ರಾಜಕೀಯ ಪಕ್ಷಗಳು ಹಿಂದೇಟು ಹಾಕುವ ಮೂಲಕ ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸುವ ದೈರ್ಯ ಮಾಡುತ್ತಿಲ್ಲ

ಬೆಳಗಾವಿ ಜಿಲ್ಲೆ ವಿಭಜನೆ ಮಾಡಬಾರದು ,ಜಿಲ್ಲೆ ವಿಭಜನೆ ಆದ್ರೆ ಬೆಳಗಾವಿ ಜಿಲ್ಲೆಯ ಕನ್ನಡಿಗರ ಒಗ್ಗಟ್ಟಿನ ಬಲ ಕುಗ್ಗುತ್ತದೆ ,ಜಿಲ್ಲೆಯಲ್ಲಿ ಎಂಈಎಸ್ ಪ್ರಾಬಲ್ಯ ಹೆಚ್ಚಾಗಬಹುದು ಎನ್ನುವದು ಕನ್ನಡ ಸಂಘಟನೆಗಳ ಆತಂಕ ,ಈ ಆತಂಕವೇ ಇಷ್ಟು ದಿನ ಬೆಳಗಾವಿ ಜಿಲ್ಲೆಯ ವಿಭಜನೆಗೆ ಅಡ್ಡಿ ಆಗಿರುವದು ಸತ್ಯ

ಬೆಳಗಾವಿ ಜಿಲ್ಲೆಯನ್ನು ಶೈಕ್ಷಣಿಕವಾಗಿ,ರಾಜಕೀಯವಾಗಿ ವಿಭಜನೆ ಆಗಿದೆ ಆದ್ರೆ ಆಡಳಿತಾತ್ಮಕವಾಗಿಯೂ ವಿಭಜನೆ ಆಗಬೇಕು ಹುಬ್ಬಳ್ಳಿ- ಧಾರವಾಡ ವಿಭಜಿಸಿ ಮೂರು ಜಿಲ್ಲೆ ಮಾಡಿದಂತೆ ಬೆಳಗಾವಿ ಜಿಲ್ಲೆಯನ್ನೂ ವಿಭಜಿಸಿ ಮೂರು ಜಿಲ್ಲೆ ಗಳನ್ನಾಗಿ ಮಾಡಲಿ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಬೆಳಗಾವಿ ಜಿಲ್ಲೆಯ ಜನಸಾಮಾನ್ಯರ ಪರವಾಗಿ ವಾದ ಮಂಡಿಸುವ ಧೈರ್ಯ ಮಾಡಿದ್ದಾರೆ .

ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರ ಬಲ ಹೆಚ್ಚಾಗಿದೆ.ಜಿಲ್ಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿ ಅಸ್ತಿತ್ವ ಕಳೆದುಕೊಂಡಿದೆ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡಿಗರೇ ಸಾರ್ವಭೌಮ ಆಗಿರುವಾಗ ಬೆಳಗಾವಿ ಜಿಲ್ಲೆ ವಿಭಜನೆ ಆಗಲೇ ಬೇಕು ಎನ್ನುವದು ಅಥಣಿ,ರಾಯಬಾಯ ,ಚಿಕ್ಕೋಡಿ, ಗೋಕಾಕ ಜನರ ಬಹುದಿನಗಳ ಹೋರಾಟದ ಮುಖ್ಯ ಬೇಡಿಕೆ ಆಗಿದೆ


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ