Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ. ಪ್ರಭು ಡಿ.ಟಿ

ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ. ಪ್ರಭು ಡಿ.ಟಿ

Spread the love

ಗೋಕಾಕ:ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ : ಡಿ.ವೈ.ಎಸ್.ಪಿ. ಪ್ರಭು ಡಿ.ಟಿ
ಪ್ರತಿಯೊಬ್ಬರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಪೋಲೀಸ ಇಲಾಖೆ ವಿನೂತನ ಕಾರ್ಯಕ್ರಮ ಗೋಕಾಕದಿಂದ ಘಟಪ್ರಭಾವರೆಗೆ ಕಾಲ್ನಡಿಗೆ ಜಾಥಾ ಬರುವ ದಿ. 5 ಎಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೋಕಾಕ ವಿಭಾಗದ ಡಿ.ವೈ.ಎಸ್.ಪಿ. ಪ್ರಭು ಡಿ.ಟಿ. ಅವರು ತಿಳಿಸಿದರು.
ಅವರು ನಗರದ ಪೋಲೀಸ ಠಾಣೆಯಲ್ಲಿ ಹೋಳಿ ಹುಣ್ಣಿಮೆ ನಿಮಿತ್ಯ ಕರೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ರಸ್ತೆ ಅಪಘಾತದಲ್ಲಿ ಎಲ್ಲಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪುತ್ತಿದ್ದು ಅದನ್ನು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದ್ದು ಈ ಕಾಲ್ನಡಿಗೆ ಜಾಥಾ ಗೋಕಾಕ ಮತ್ತು ಘಟಪ್ರಭಾ ಮಧ್ಯದ ಗ್ರಾಮಗಳ ಜನರು ಪಾಲ್ಗೊಳ್ಳುತ್ತಾರೆಂದು ತಿಳಿಸಿದರು. ದಿ. 5ರಂದು ಮುಂಜಾನೆ 7 ಗಂಟೆಗೆ ನಗರದ ನಾಕಾ ನಂ. ರಿಂದ ಜಾಥಾ ಪ್ರಾರಂಭವಾಗಿ ಲೋಳಸೂರ, ಅರಭಾಂವಿ, ಅರಂಆಂವಿ ಮಠ, ಶಿಂದಿಕುರಬೇಟ ಮೂಲಕ ಘಟಪ್ರಭಾಗೆ ಆಗಮಿಸಿ ಪಟ್ಟಣದಲ್ಲಿ ಜಾಥಾ ನಡೆಸಿ ಪೋಲೀಸ ಠಾಣೆಗೆ ಬಂದು ಮುಕ್ತಾಯಗೊಳ್ಳುವದೆಂದು ತಿಳಿಸಿದರು.
ಈ ಕಾಲ್ನಡಿಗೆ ಜಾಥಾದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಶಾಂತಿಯುತ ಹೋಳಿ ಆಚರಿಸಲು ಮನವಿ
ಸಾಂಪ್ರದಾಯಿಕ ಮತ್ತು ಸಂಸ್ಕøತಿ ಪ್ರತೀಕವಾದ ಹೋಳಿ ಹಬ್ಬವನ್ನು ಆಚರಿಸಿ ಸೌಹಾರ್ದತೆ ಮೆರೆಯುವಂತೆ ಡಿವೈಎಸ್‍ಪಿ ಪ್ರಭು ಅವರು ತಿಳಿಸಿದರು. ನಗರದಲ್ಲಿ ಬಣ್ಣದಾಟ ಎರಡು ದಿನ ನಡೆಯಲಿದ್ದು ಈ ಸಮಯದಲ್ಲಿ ಸಾರ್ವಜನಿಕರು ವಾರ್ನಿಷಿ ಇತ್ಯಾದಿ
ಬಳಸದೆ ತಿಳಿ ಬಣ್ಣ ಬಳಸುವಂತೆ ಸಲಹೆ ನೀಡಿದರಲ್ಲದೆ ವಾರ್ನಿಷ ಬಳಸುವದರಿಂದ ರೋಗಗಳಿಗೆ ಆಹ್ವಾನ ನೀಡಿದಂತೆ ಆಗುವದೆಂದು ಹೇಳಿದರು. ಬಣ್ಣದಾಟ ಆಡಲು ನಿರಾಕರಿಸಿದವರಿಗೆ ಬಣ್ಣ ಹಚ್ಚಬಾರದು. ಅಲ್ಲದೆ ಹೋಳಿ ಹುಣ್ಣಿಮೆ ಸಮಯದಲ್ಲಿ ಯಾರಾದರೂ ಕಿಡಿಗೇಡಿತನ ಮಾಡಿದರೆ ಅಂಥವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕರವೇ ಅಧ್ಯಕ್ಷರುಗಳಾದ ಬಸವರಾಜ ಖಾನಪ್ಪನವರ, ಕಿರಣ ಡಮಾಮಗರ, ರೋಟರಿ ಸಂಸ್ಥೆಯ ಸೋಮಶೇಖರ ಮಗದುಮ್ಮ ಸಂತೋಷ ಖಂಡ್ರಿ ಸೇರಿದಂತೆ ಅನೇಕರು ಇದ್ದರು.
ನಗರ ಠಾಣೆ ಪಿಎಸ್‍ಐ ಎ.ಟಿ. ಅಮ್ಮಿನಭಾಂವಿ ಸ್ವಾಗತಿಸಿ, ವಂದಿಸಿದರು.


Spread the love

About Laxminews 24x7

Check Also

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಕಪ್ಪುಚುಕ್ಕೆಯಾಗಿರುವ ಪಾಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ