Breaking News

ಬೆಳಗಾವಿ-ಮುಂಬೈ ವಿಮಾನಯಾನ ಪುನರಾರಂಭ

Spread the love

ಬೆಳಗಾವಿ: ಬೆಳಗಾವಿಯಿಂದ ನವಿಮುಂಬೈ ನಡುವೆ ಮಾ.29ರಿಂದ ಇಂಡಿಗೋ ಸಂಸ್ಥೆ ನೂತನ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಸ್ಟಾರ್ ಏರ್ ಸಂಸ್ಥೆ ಬೆಳಗಾವಿ-ಮುಂಬೈ ನಡುವಿನ ವಿಮಾನಯಾನ ಸೇವೆ ರದ್ದುಗೊಳಿ ಸಿತ್ತು. ಇದರಿಂದಾಗಿ ನಾಗರಿಕರಿಗೆ ಅನಾನುಕೂಲತೆ ಎದುರಾಗಿತ್ತು. ಈ ಕುರಿತು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಭೇಟಿ ಮಾಡಿ ಚರ್ಚಿಸಿದ ಬಳಿಕ ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬೆಳಗಾವಿಯಿಂದ ಮುಂಬೈ, ಚೆನೈ ಹಾಗೂ ಪುಣೆ ಮಾರ್ಗದಲ್ಲಿ ವಿಮಾನಯಾನ ಸೇವೆ ಆರಂಭಿಸಲು ಮನವಿ ಮಾಡಲಾಗಿತ್ತು.
ಮಾ.29 ರಿಂದ ಬೆಳಗಾವಿ-ನವಿಮುಂಬೈ ನಡುವೆ ಇಂಡಿಗೋ ವಿಮಾನ ಹಾರಾಟ ಪ್ರಾರಂಭಿಸಲಿದೆ. ಮುಂಬೈಯಲ್ಲಿ ಬೆಳಗ್ಗೆ 10.20ಕ್ಕೆ ಹೊರಟು ಬೆಳಗ್ಗೆ 11.35ಕ್ಕೆ ಬೆಳಗಾವಿ ತಲುಪಲಿದೆ. ಬಳಿಕ ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಟು ಸಂಜೆ 6.45ಕ್ಕೆ ಮುಂಬೈ ತಲುಪಲಿದೆ. ವಿಮಾನಯಾನ ಸೇವೆ ಪ್ರಾರಂಭಕ್ಕೆ ಸಹಕರಿಸಿದ ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಮತ್ತು ಇಂಡಿಗೋ ಸಂಸ್ಥೆ ಅಧಿಕಾರಿಗಳಿಗೆ ಬೆಳಗಾವಿ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಜಗದೀಶ ಶೆಟ್ಟರ ತಿಳಿಸಿದ್ದಾರೆ.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ