Home / Laxminews 24x7 (page 1906)

Laxminews 24x7

25ನೇ ʼಕಿತ್ತೂರು ಉತ್ಸವʼಕ್ಕೆ ಮುಹೂರ್ತ ಫಿಕ್ಸ್‌ : 2 ದಿನಗಳ ಅದ್ದೂರಿ ಆಚರಣೆ, ಒಂದು ಕೋಟಿ ವೆಚ್ಚ

25ನೇ ಕಿತ್ತೂರು ಉತ್ಸವಕ್ಕೆ ಮುಹೂರ್ತ ಫಿಕ್ಸ್‌ ಆಗಿದ್ದು, ಅಕ್ಟೋಬರ್‌ 23, 24ರಂದು ಅದ್ದೂರಿಯಾಗಿ ಉತ್ಸವ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇನ್ನು ಉತ್ಸವದ ಕುರಿತಂತೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯ್ತು. ಸಭೆಯ ನಂತ್ರ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ‘ ಅಕ್ಟೋಬರ್‌ 23, 24ರಂದು 2 ದಿನ ಅದ್ಧೂರಿಯಾಗಿ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ 25ನೇ ಕಿತ್ತೂರು ಉತ್ಸವವನ್ನ …

Read More »

ಬೆಳಗಾವಿ ಮನೆ ಕುಸಿದು 7 ಮಂದಿ ಸಾವು -ತಲಾ ₹2 ಲಕ್ಷ ಪರಿಹಾರ ಘೋಷಿಸಿದ ಮೋದಿ

ಬೆಳಗಾವಿ: ಮನೆ ಕುಸಿದು ಒಂದೇ ಕುಟುಂಬದ 6 ಮಂದಿ ಹಾಗೂ ಬಾಲಕಿ ಸಾವನ್ನಪ್ಪಿದ ಘಟನೆ ಕುರಿತು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ದುರಂತರದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ದುರ್ಘಟನೆ ಕುರಿತಂತೆ ಪ್ರಧಾನಿ ಮೋದಿ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮಾಡಲಾಗಿದ್ದು, ಬೆಳಗಾವಿಯಲ್ಲಿ ಮನೆ ಕುಸಿತದಿಂದ ಜೀವಹಾನಿಯಾಗಿರುವುದು ದುಃಖಕರ ಸಂಗತಿಯಾಗಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರೊಂದಿಗೆ ನಾವಿದ್ದೇವೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ …

Read More »

ಮೂಢನಂಬಿಕೆಗೆ ಸೆಡ್ಡು -ಚಾಮರಾಜನಗರಕ್ಕೆ ನಾಳೆ ಸಿಎಂ ಬೊಮ್ಮಾಯಿ ಭೇಟಿ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ‌ ಇಂದು ಮತ್ತು 7ನೇ ತಾರೀಕಿನಂದು ಎರಡು ದಿನಗಳ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಳ್ಳಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಮೈಸೂರು ತೆರಳಲಿದ್ದು, ಸಂಜೆ 4 ಗಂಟೆಗೆ ಮೋದಿ ಯುಗ್ ಉತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಗುರುವಾರ ಬೆಳಗ್ಗೆ ಚಾಮುಂಡಿ ದೇವಿಯ ದರ್ಶನ ಪಡೆಯಲಿದ್ದು, ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಗುರುವಾರ ಬೆಳಗ್ಗೆ 10.40 ಕ್ಕೆ ಮೈಸೂರು ವಿಮಾನನಿಲ್ದಾಣದಲ್ಲಿ ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲಿದ್ದು, …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯ ಬಾಯ್ಲರ್ ಪೂಜೆ ಕಾರ್ಯಕ್ರಮ ನಿರ್ವಹಿಸಿದ ಶ್ರೀ ಸಂತೋಷ್ ಜಾರಕಿಹೊಳಿ

ಗೋಕಾಕ :ಮಳೆಗಾಲ ಮುಗೀತಾ ಬಂದಂತೆ ನಮ್ಮ ಕಡೆ ಮತ್ತೆ ಕಬ್ಬಿನ ಸೀಸನ್ ಶುರು ಆಗೋಕ್ಕೆ ಪ್ರಾರಂಭ ವಾಗತ್ತೆ ಕಳೆದ ಬಾರಿ ಅತಿಯಾದ ಮಳೆ ಇದ್ದರೂ ಕೂಡ ಸುಮಾರು ಕಾರ್ಖಾನೆ ಗಳಿಗಿಂತ ಮೊದಲು ಶ್ರೀ ಸಂತೋಷ್ ಜಾರಕಿಹೊಳಿ ಅವರು ತಮ್ಮ ಕಾರ್ಖಾನೆಯ ಕೃಷಿಂಗ್ ಅನ್ನ ಪ್ರಾರಂಭ ಮಾಡಿದ್ದರು. ರೈತರ ಹಿತಾಸಕ್ತಿಯನ್ನು ಯೋಚನೆ ಮಾಡಿ ಅವರು ಕಷ್ಟ ಪಟ್ಟು ಬೆಳೆದ ಬೆಳೆ ನಾಶ ವಾಗ ಬಾರದು ಎಂಬ ಯೋಚನೆಯಿಂದ ಪ್ರಾರಂಭ ಮಾಡಿ ಅತ್ತುತ್ಮ …

Read More »

ದೇಶಾಭಿಮಾನ ಬೆಳೆಸಲು ಸಂಸ್ಕೃತಿ ಭದ್ರ ತಳಪಾಯ : SMK

ಮೈಸೂರು, ಅ.7- ಇಂದು ವಿಶ್ವ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಕೋವಿಡ್‍ನ ಆಘಾತ ಯಾವುದೇ ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಆದರೆ, ಭಾರತ ತನ್ನ ಪ್ರಗತಿಯ ಗತಿಯನ್ನು ಉಳಿಸಿಕೊಂಡು ಬರುತ್ತಿದೆ. ಇದು ಕಡಿಮೆ ಸಾಧನೆಯಲ್ಲ. ದೇಶ ಮತ್ತಷ್ಟು ಪ್ರಗತಿ ಸಾಸಲು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ವರ್ತಿಸಿ ಬಿಕ್ಕಟ್ಟಿನಿಂದ ಹೊರಬರಲು ಸಹಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕರೆ ನೀಡಿದರು. ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ನೆರವೇರಿಸಿ …

Read More »

ಮೈಸೂರು: ನಾಡಶಕ್ತಿ ದೇವತೆಗೆ ನವರಾತ್ರಿಯಲ್ಲಿ ನಿತ್ಯವೂ ಒಂದೊಂದು ಅಲಂಕಾರ

ಮೈಸೂರು: ನಾಡಶಕ್ತಿ ದೇವತೆ ಚಾಮುಂಡೇಶ್ವರಿ ಗೆ ನವರಾತ್ರಿ ಯಲ್ಲಿ ನಿತ್ಯ ವೂ ಒಂದೊಂದು ಅಲಂಕಾರ ಮಾಡಲಾಗುತ್ತದೆ. ನವರಾತ್ರಿ ಆರಂಭವಾದ ಇಂದು ಮುಂಜಾನೆ ಚಾಮುಂಡೇಶ್ವರಿ ಗೆ ವಿವಿಧ ಅಭಿಷೇಕ ಗಳನ್ನು ಮಾಡಿ ವಿಶೇಷ ಪೂಜೆ ಯನ್ನು ನೆರವೇರಿಸಲಾಯಿತು. ದಸರಾ ಪ್ರಾರಂಭದ ಇಂದು ಚಾಮುಂಡೇಶ್ವರಿ ಗೆ ವಿಶೇಷವಾಗಿ ಹಂಸವಾಹಿನಿ ಅಲಂಕಾರವನ್ನು ಮಾಡಲಾಗಿದೆ. ಈ ಅಲಂಕಾರದಲ್ಲಿ ಚಾಮುಂಡೇಶ್ವರಿ ಕಂಗೊಳಿಸಿದರು. ಅ.8 ರಂದು ಬ್ರಾಹ್ಮಿ, ಅ.9ರಂದು ಮಹೇಶ್ವರಿ, ಅ.10ರಂದು ಕೌಮಾರಿ, ಅ.11 ರಂದು ಆನೆ ಮೇಲೆ …

Read More »

ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನನಗೆ ಅವಕಾಶ ಸಿಕ್ಕಿದೆ’- ಮೈಸೂರು ದಸರಾ ಉದ್ಘಾಟಿಸಿ ಎಸ್‌ಎಂ ಕೃಷ್ಣ ಮಾತು

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಕ್ಕೆ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿ ಯ ನೆಲೆವೀಡಾದ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಬೆಳಗ್ಗೆ 8.15 ರಿಂದ 8.45 ರೊಳಗಿನ ಶುಭ ತುಲಾ ಲಗ್ನದಲ್ಲಿ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರು ವೇದಿಕೆ ಯ ಎಡಬದಿಯ ಲ್ಲಿ ದ್ದ ಅಲಂಕೃತಳಾಗಿದ್ದ ಚಾಮುಂಡೇಶ್ವರಿ ಯ ಉತ್ಸವ ಮೂರ್ತಿ ಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ದಸರಾ …

Read More »

ಜೆಡಿಎಸ್ ಪಕ್ಷದ್ದು ಮಿಷನ್ 123 ಅಲ್ಲ,ಮಿಷನ್ 23: ಬಿ.ವೈ.ವಿಜಯೇಂದ್ರ ಲೇವಡಿ

ಸುಬ್ರಹ್ಮಣ್ಯ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನ ಗಳಿಸಲು ಜೆಡಿಎಸ್ ಇದೀಗ ಮಿಷನ್ 123 ಎಂಬ ಕಾರ್ಯಾಗಾರ ನಡೆಸುತ್ತಿದೆ. ಅದು ಮಿಷನ್ 123 ಅಲ್ಲ, ಬದಲಾಗಿ ಅದು ಮಿಷನ್ 23 ಅಷ್ಟೆನೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದರು. ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜೆಡಿಎಸ್ ಪಕ್ಷಕ್ಕೆ ಕಡಿಮೆ ಸೀಟು ಬಂದರೆ ಸಂತಸವಾಗುತ್ತದೆ. ಯಾವುದೇ ಪಕ್ಷಕ್ಕೆ ಬಹುಮತ ಬಾರದೆ …

Read More »

ಬಿಜೆಪಿಯವರು ಸತ್ತರೆ ₹1 ಕೋಟಿ ಪರಿಹಾರ: ಶಾಸಕ ಬಯ್ಯಾಪುರ

ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಉತ್ತರ ಪ್ರದೇಶದ ಲಖಿಂಪುರ- ಖೇರಿ ಬಳಿ ಪ್ರತಿಭಟನೆ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರನ ಕಾರು ಹರಿದು ಮೃತರಾದ ರೈತ ಕುಟುಂಬಗಳಿಗೆ ಅಲ್ಲಿಯ ಬಿಜೆಪಿ ಸರ್ಕಾರ ಕೇವಲ ₹45 ಲಕ್ಷ ಪರಿಹಾರ ನೀಡುತ್ತಿದೆ. ಇಂತಹ ಘಟನೆಯಲ್ಲಿ ಬಿಜೆಪಿಯ ಯಾವುದೇ ಮುಖಂಡ ಸತ್ತರೂ ಕಾಂಗ್ರೆಸ್ ಪಕ್ಷದಿಂದ ₹1 ಕೋಟಿ ಪರಿಹಾರ ನೀಡುತ್ತೇವೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು. ಲಖಿಂಪುರ ಘಟನೆ ಖಂಡಿಸಿ ಕಾಂಗ್ರೆಸ್‌ನಿಂದ …

Read More »

ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವವರೆಗೆ ನಾನೇ ಅಭ್ಯರ್ಥಿ:ಸತೀಶ ಜಾರಕಿಹೊಳಿ

ಬೆಳಗಾವಿ: ಜಿಲ್ಲೆಯಲ್ಲಿ ಮುಂಬರುವ ವಿಧಾನ ಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಮಾತ್ರ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ವಿಧಾನ ಪರಿಷತ್ ಸ್ಥಾನಗಳಿದ್ದು, ಇಬ್ಬರು ಸ್ಪರ್ಧೆ ಮಾಡಿದರೇ ನಮ್ಮಲ್ಲೇ ಪೈಪೋಟಿ ಏರ್ಪಡುತ್ತದೆ. ಹೀಗಾಗಿ, ಒಂದೇ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮದೇ ಆದ ವೋಟ್ ಬ್ಯಾಂಕ್ ಇದೆ. ಈಗಾಗಲೇ ಐದಾರು …

Read More »