Home / Laxminews 24x7 (page 1899)

Laxminews 24x7

ಹೈಕೋರ್ಟ್ ಗೆ ನೂತನ ನ್ಯಾಯಾಧೀಶ ನೇಮಕ

ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಅಲಹಾಬಾದ್ ಮೂಲದ ನ್ಯಾ.ರಿತು ರಾಜು ಅವಸ್ಥಿ ನೇಮಕವಾಗಿದೆ. ಇನ್ನು ಕರ್ನಾಟಕದ ನ್ಯಾ.ಅರವಿಂದ್ ಕುಮಾರ್ ಅವರನ್ನು ಗುಜರಾತ್ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಕರ್ನಾಟಕ ಸೇರಿದಂತೆ 8 ಹೈಕೋರ್ಟ್​ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​.ವಿ ರಮಣ ಅವರ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿತ್ತು. ಕರ್ನಾಟಕ ಹೈಕೋರ್ಟ್‌ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ರಿತು ರಾಜ್‌ ಅವಸ್ತಿ ಅವರ ಹೆಸರನ್ನು …

Read More »

ಹಾಸ್ಟೆಲ್‌ಗೆ ಬಸ್‌ ಸೌಲಭ್ಯಕ್ಕೆ ಆದ್ಯತೆ

ಸಿಂಧನೂರು: ‘ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನಗರದಿಂದ ಎರಡು ಕಿ.ಮೀ ದೂರದಲ್ಲಿ ಇರುವುದರಿಂದ ಕಾಲೇಜಿಗೆ ಹೋಗಲು ಬಸ್ ಸೌಕರ್ಯ, ರಕ್ಷಣೆಯ ಹಿನ್ನೆಲೆಯಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಮತ್ತು ಸೆಕ್ಯೂರಿಟಿ ಗಾರ್ಡ್ ಸೌಕರ್ಯ ಕಲ್ಪಿಸಲಾಗುವುದು’ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು. ಇಲ್ಲಿನ ಹೊರವಲಯದ ಶಿವಜ್ಯೋತಿ ನಗರದಲ್ಲಿ ನಿರ್ಮಿಸಿರುವ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ …

Read More »

ಸಮುದಾಯ ಭವನಕ್ಕೆ ಸಿಂಹಪಾಲು: ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ

ಚನ್ನಮ್ಮನ ಕಿತ್ತೂರು: ಕಿತ್ತೂರು ಕ್ಷೇತ್ರದ ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 2018ರಿಂದ ಇಲ್ಲಿಯವರೆಗೆ ಶೇ 70ರಷ್ಟು ಪಾಲನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡಿದ್ದಾರೆ. 2018ರಲ್ಲಿ ವಿವಿಧ ಸಮಾಜದವರ ಅಥವಾ ದೇವಸ್ಥಾನಗಳ ಭವನಗಳ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2019 ಮತ್ತು 2020ರಲ್ಲಿ ನೀಡಿದ ಹಣದಲ್ಲಿ ಭವನಗಳ ಕಾಮಗಾರಿ ಕೆಲವೆಡೆ ಮುಗಿದಿವೆ. ಕೆಲವೆಡೆ ಪ್ರಗತಿಯಲ್ಲಿದೆ. ಶಾಲೆಗಳ ಮೂಲ ಸೌಲಭ್ಯಗಳ ಕೊರತೆ ನೀಗಿಸಲು ಕೂಡ …

Read More »

ಗ್ರಾಮಗಳ ಅಭ್ಯುದ್ಯಯಕ್ಕೆ ಶ್ರಮಿಸಿ: ಸಚಿವ ಕೆ.ಎಸ್.ಈಶ್ವರಪ್

ಗದಗ: ‘ಗ್ರಾಮ ಪಂಚಾಯ್ತಿಗಳ ಚುನಾಯಿತ ಜನಪ್ರತಿನಿಧಿಗಳು ಗ್ರಾಮಗಳ ಅಭ್ಯುದಯಕ್ಕೆ ಶ್ರಮಿಸಬೇಕು. ಈ ಮೂಲಕ ಮತದಾರರ ಋಣ ತೀರಿಸಬೇಕು’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು. ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾಗುವುದು ಅತ್ಯಂತ ಸವಾಲಿನ ಸಂಗತಿ. ಗ್ರಾಮಗಳ ಸಮಗ್ರ ಅಭಿವೃದ್ಧಿಯ ಗುರುತರ ಜವಾಬ್ದಾರಿ ಚುನಾಯಿತ …

Read More »

40 ಕೆಜಿ ಇದ್ದ ಅಕ್ಕ 15 ಕೆಜಿಗೆ ಇಳಿದ್ರು, ಆಮೇಲೆ ತೀರೋದ್ರು; ಭಾವುಕರಾದ ಧರ್ಮಣ್ಣ

ಧರ್ಮಣ್ಣ ಅವರಿಗೆ ಅಕ್ಕ ಇದ್ದರು. ದೊಡ್ಡಪ್ಪನ ಮಗಳು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಅವರ ಅಕ್ಕ ಮೃತಪಟ್ಟಿದ್ದರು. ನಲವತ್ತರಿಂದ ಐವತ್ತು ಕೇಜಿ ಇದ್ದ ಅವರ ಅಕ್ಕ 15 ಕೆಜಿಗೆ ಇಳಿದು ಹೋಗಿದ್ದರು. ನಟ ಧರ್ಮಣ್ಣ ಸ್ಯಾಂಡಲ್​ವುಡ್​ನಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಮಾಡುವ ಕಾಮಿಡಿ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈಗ ಧರ್ಮಣ್ಣ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅವರ ಕುಟುಂಬದ ವಿಚಾರ ಕೇಳಿ …

Read More »

ಯುವತಿಗಾಗಿ ಹೊಡೆದಾಟ : ಕೊಲೆಯಲ್ಲಿ ಅಂತ್ಯವಾದ ಜಗಳ

ಬೆಂಗಳೂರು : ಯುವತಿಯ ವಿಚಾರಕ್ಕೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವರು ಆರೋಪಿಗಳಾದ ನಯೀಮ್, ಮೋಹಿನ್, ವಸೀಮ್ ಎಂಬಾತನನ್ನು ಘಟನೆ ನಡೆದ 8 ಗಂಟೆಯೊಳಗೆ ಹೆಚ್‌ಎಎಲ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ಲಿಖಿತ್ ಮತ್ತು ಅರೋಪಿಗಳು ಎಲ್ಲರೂ ಒಂದೇ ಏರಿಯಾದವರು. ಯುವಕರ ಗುಂಪುಗಳ ನಡುವೆ ಹಣ ಮತ್ತು ಯುವತಿಯ ವಿಚಾರವಾಗಿ ಗಲಾಟೆ ನೆಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. …

Read More »

ಬಾಗಲಕೋಟೆ ದೋಣಿ ದುರಂತ; ಮೂವರ ಸಾವಿಗೆ ಹೊಣೆ ಯಾರು?

ಬಾಗಲಕೋಟೆ: ಓರ್ವ ವೃದ್ದನ ಸಾವು ಮೂವರ ಪ್ರಾಣ ಬಲಿ ಪಡೆದ ದುರ್ಘಟನೆ ಬಾಗಲಕೋಟೆ ಮತ್ತು ವಿಜಯನಗರ ಜಿಲ್ಲೆಗಳ ಜನರ ಮನಕಲುಕಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರು ಗ್ರಾಮದ ಬಳಿ ನಾರಾಯಣಪುರ ಜಲಾಶಯ ಹಿನ್ನೀರಲ್ಲಿ ನಡೆದ ದುರಂತ ಎರಡು ಜಿಲ್ಲೆಗಳ ಜನರ ಮನಕಲುಕಿಸಿದೆ‌. ವಿಜಯಪುರ ಜಿಲ್ಲೆ ತಾಳಿಕೋಟಿ ತಾಲ್ಲೂಕಿನ ಹರನಾಳ ಗ್ರಾಮದ ಶಿವಪ್ಪ ಅಮಲೂರ ಅಕ್ಟೋಬರ್ 7 ರಂದು ಧನ್ನೂರ ಬಳಿ ನಾರಾಯಣಪುರ ಜಲಾಶಯದ ಹಿನ್ನೀರಲ್ಲಿ ಸಾವನ್ನಪ್ಪಿದ್ದ. ಆತನ ಶವ …

Read More »

ಆಟವಾಡುತ್ತಾ ಕಾಲುವೆಗೆ ಬಿದ್ದ 4 ಮಕ್ಕಳು.. ಇಬ್ಬರು ಕಂದಮ್ಮಗಳ ದಾರುಣ ಸಾವು

ಚಿಕ್ಕೋಡಿ: ಆಟ ಆಡುತ್ತ ಹೋಗಿ ಕರಿಮಸೂತಿ ಏತ ನೀರಾವರಿಯ ಕಾಲುವೆಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಟ ಆಡುತ್ತ ಸಂಜೆ ಕೆನಾಲ್ ಬಳಿ ಹೋಗಿದ್ದ ನಾಲ್ವರು ಮಕ್ಕಳ ಪೈಕಿ ಇಬ್ಬರು ಮಕ್ಕಳು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಪ್ನಾ ವಿನಾಯಕ್ ಪುಂಡಿಪಲ್ಲೆ(11) ಮತ್ತು ಪ್ರಥಮ ವಿನಾಯಕ ಪುಂಡಿಪಲ್ಲೆ (7) ಮೃತ ಮಕ್ಕಳು. ಮಕ್ಕಳು ಕಾಲುವೆಗೆ ಬಿದ್ದ ತಕ್ಷಣ …

Read More »

ಚಲಿಸುತ್ತಿದ್ದ ರೈಲಿನಲ್ಲಿ ಪತಿಯ ಎದುರೇ ಮಹಿಳೆಯ ಗ್ಯಾಂಗ್ ರೇಪ್

ಮುಂಬಯಿ : ಲಕ್ನೋ -ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪತಿಯ ಎದುರೇ 20 ವರ್ಷದ ಮಹಿಳೆಯೊಬ್ಬಳ ಮೇಲೆ ಶುಕ್ರವಾರ ತಡ ರಾತ್ರಿ ಡಕಾಯಿತರು ಗ್ಯಾಂಗ್ ರೇಪ್ ಎಸಗಿದ ಕಳವಳಕಾರಿ ಘಟನೆ ವರದಿಯಾಗಿದೆ. ಸುಮಾರು 8 ಮಂದಿ ಡಕಾಯಿತರ ತಂಡ ಪ್ರಯಾಣಿಕರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದೆ. ಬಳಿಕ ಮಹಿಳೆಯನ್ನು ಎಳೆದಾಡಿ ಗ್ಯಾಂಗ್ ರೇಪ್ ಎಸಗಿದೆ. ಸಹ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ …

Read More »

ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಭರ್ಜರಿ ʼಬಂಪರ್‌ʼ ಕೊಡುಗೆ

ಅದಾಗಲೇ ಘೋಷಿಸಿರುವ ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಕೇಂದ್ರ ಸರ್ಕಾರದ ಆಯ್ದ ನೌಕರರು ದೀಪಾವಳಿಗೆ ಬಂಪರ್‌ ಬೋನಸ್ ಪಡೆಯಲಿದ್ದಾರೆ. ಭಾರತೀಯ ರೈಲ್ವೇ ತನ್ನ ನೌಕರರಿಗೆ ಭರ್ಜರಿ ಬೋನಸ್ ನೀಡಲು ನಿರ್ಧರಿಸಿದೆ. ರೈಲ್ವೇ ನೌಕರರಿಗೆ ಹಬ್ಬದ ಬೋನಸ್ ಎಂದು 78 ದಿನಗಳ ವೇತನವನ್ನು ಬೋನಸ್‌ ರೂಪದಲ್ಲಿ ನೀಡುವುದಾಗಿ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಅನುರಾಗ್ ಠಾಕೂರ್‌ ಸಂಸತ್ತಿನಲ್ಲಿ ಘೋಷಿಸಿದ್ದರು. ದಸರಾಗೂ ಮುನ್ನ ರೈಲ್ವೇಯ 11.56 ಲಕ್ಷಕ್ಕೂ ಹೆಚ್ಚಿನ ಗೆಜ಼ೆಟೇತರ ನೌಕರರ ಖಾತೆಗಳಿಗೆ …

Read More »