Home / Laxminews 24x7 (page 1882)

Laxminews 24x7

ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವರಿಗೆ ಮತ ಹಾಕ್ತೀರಾ: ಸಿದ್ದರಾಮಯ್ಯ

ಬೆಂಗಳೂರು: ನಗರದ ಬಿನ್ನಿಪೇಟೆಯಲ್ಲಿ ನಿರ್ಮಿಸಲಾದ ಏಳು ಅಂತಸ್ತಿನ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ಶನಿವಾರ ಬಿರುಕಿನಿಂದಾಗಿ 1.5 ಅಡಿಗಳಷ್ಟು ಅಪಾಯಕಾರಿಯಾಗಿ ವಾಲಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕಟ್ಟಡಗಳ ಕುಸಿತ ಹೆಚ್ಚಾಗುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ, ಕುಸಿದ ಮನೆಗಳಿಂದ ಕುಟುಂಬಗಳನ್ನು ಸ್ಥಳಾಂತರಿಸುವಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರೇ ಈಗ ಸ್ಥಳಾಂತರಗೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ. ವಾಲಿದ ‘ಬಿ’ ಬ್ಲಾಕ್ ಕಟ್ಟಡದಲ್ಲಿ ವಾಸಿಸುತ್ತಿರುವ 38 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಲ್ಲಿ ಪಕ್ಕದಲ್ಲಿರುವ ‘ಸಿ’ ಬ್ಲಾಕ್ ಕಟ್ಟಡದಿಂದಲೂ ಸ್ಥಳಾಂತರಿಸಲು ಚಿಂತನೆ …

Read More »

ಅಲ್ಪಸಂಖ್ಯಾತರ ಮತ ಪಡೆಯಲು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಮುಖಂಡ H.D.K. ಆರ್‌ಎಸ್‌ಎಸ್‌ ವಿರುದ್ಧ ಟೀಕೆ: ಜೋಶಿ

ಧಾರವಾಡ: ‘ಅಲ್ಪಸಂಖ್ಯಾತರ ಮತ ಪಡೆಯಲು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡುತ್ತಾರೆ. ಆದರೆ ನಾವು ಮುಸ್ಲಿಂ ಸೇರಿದಂತೆ ಯಾವುದೇ ಸಮುದಾಯದ ವಿರೋಧಿಗಳಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಸಾಂದ್ರಕ ಘಟಕಕ್ಕೆ ಶನಿವಾರ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಮುಗ್ಧ ಮುಸ್ಲಿಮರ ಮತಕ್ಕಾಗಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ಭೂತದಂತೆ ಇವರು ತೋರಿಸುತ್ತಿದ್ದಾರೆ. …

Read More »

ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ದೇವನಹಳ್ಳಿ: ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದು ಅಲ್ಪಸಂಖ್ಯಾತರ ಮತಗಳು ನಿರ್ಣಯವಾಗಿರುವುದರಿಂದ, ಅಲ್ಪಸಂಖ್ಯಾತರ ಬಗ್ಗೆ ಮೃದುಧೋರಣೆ ತೋರಿಸುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು. ತಾಲೂಕಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 2004 ರಿಂದ ರಾಜಕೀಯಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ ಅವರು ಮುಸಲ್ಮಾನರಿಗೆ ಏನು ಮಾಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಸಿದ್ದರಾಮಯ್ಯ ಮಾಡಿದಷ್ಟು ಯಾರು ಮಾಡಲಿಲ್ಲ. ಜಾಫರ್ ಷರೀಫ್ ಅವರ ಮೊಮ್ಮಗನ ಮೇಲೆ ಅಷ್ಟೊಂದು …

Read More »

ಇನ್ನೆರಡು ದಿನಗಳಲ್ಲಿ ಶಾಲೆ ಪುನರಾರಂಭ.? ಶನಿವಾರ, ಭಾನುವಾರ ತರಗತಿ ನಡೆಸುವ ಬಗ್ಗೆಯೂ ಚಿಂತನೆ

ಬೆಂಗಳೂರು: ಇನ್ನೆರಡು ದಿನಗಳಲ್ಲಿ ಶಾಲೆ ಪುನರಾರಂಭದ ಬಗ್ಗೆ ನಿರ್ಧರಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, 1 ರಿಂದ 5 ನೇ ತರಗತಿ ಶಾಲೆ ಆರಂಭಿಸುವ ಬಗ್ಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ ತಾಂತ್ರಿಕ ಸಲಹಾ ಸಮಿತಿ ಏನು ಹೇಳಲಿದೆ ಎಂಬುದನ್ನು ನೀಡಬೇಕಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇನ್ನೆರಡು ದಿನಗಳಲ್ಲಿ ತೀರ್ಮಾನ ಪ್ರಕಟಿಸಲಾಗುವುದು ಎಂದರು. ದೇವರ …

Read More »

66ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ 6210 ಅರ್ಜಿ

ಬೆಳಗಾವಿ – ರಾಜ್ಯದಲ್ಲಿ  ಮೊದಲ ಬಾರಿ ಆನ್ ಲೈನ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾರ್ವಜನಿಕರೇ ಶಿಫಾರಸ್ಸು ಮಾಡಲು ಅವಕಾಶ ನೀಡಲಾಗಿತ್ತು. “ಸೇವಾ ಸಿಂಧು” ಮೂಲಕ ಎಲೆಮರೆಯ ಸಾಧಕರನ್ನು ಸಾರ್ವಜನಿಕರು ಗುರುತಿಸುವ ಅವಕಾಶ ಮಾಡಿ ಕೊಡಲಾಗಿತ್ತು.  ಈ ಪ್ರಕ್ರಿಯೆಗೆ ನಾಡಿನ ಜನರು ಭಾರಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಕಳೆದ ಮೂರು ವರ್ಷಗಳ ಪೈಕಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಜನರ ಸ್ಪಂದನೆ ಹೆಚ್ಚಾಗಿದೆ.  2021-22 ನೇ ಸಾಲಿನ 66ನೇ ರಾಜ್ಯೋತ್ಸವ ಪ್ರಶಸ್ತಿಗಾಗಿ …

Read More »

ರಾಜ್ಯದಲ್ಲಿ ನಿಲ್ಲುತ್ತಿಲ್ಲ ಮಳೆರಾಯನ ಕಾಟ.. ಕರಾವಳಿ ಭಾಗಗಳಿಗೆ ಮತ್ತೆ ಎಚ್ಚರಿಕೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ರಾಜ್ಯದಲ್ಲಿ ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿ ಭಾಗದಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದೂ ಹೇಳಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ‌ಯಾಗಿದೆ. ಕರಾವಳಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಲ್ಲಿ ಭಾರೀ ಮಳೆ‌ಯ ಮುನ್ಸೂಚನೆಯೂ ನೀಡಲಾಗಿದೆ. ಇನ್ನು ಕೇರಳದಲ್ಲಿ ಭಯಾನಕ ಮಳೆಯಾಗುತ್ತಿದ್ದು, ಅಪಾರ …

Read More »

ಎರಡು ಕೋಟಿ ಮಂದಿ ಕೋವಿಡ್‌ ಲಸಿಕೆ ಪೂರ್ಣ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಎರಡನೇ ಡೋಸ್‌ ಪಡೆದವರ ಸಂಖ್ಯೆ ಎರಡು ಕೋಟಿ ಗಡಿದಾಟಿದೆ. ಈ ಮೂಲಕ ರಾಜ್ಯದ ಲಸಿಕೆ ಅರ್ಹ ಜನಸಂಖ್ಯೆಯಲ್ಲಿ ಶೇ.42 ರಷ್ಟು ಮಂದಿ ಲಸಿಕೆ ಪೂರ್ಣಗೊಳಿಸಿದಂತಾಗಿದೆ. 18 ವರ್ಷ ಮೇಲ್ಪಟ್ಟವರ ಸಂಖ್ಯೆ 4.8 ಕೋಟಿ ಇದೆ. ಕೋವಿನ್‌ ಪೋರ್ಟಲ್‌ ಮಾಹಿತಿಯಂತೆ ಶನಿವಾರದ ಅಂತ್ಯಕ್ಕೆ 4,07,80,939 ಮಂದಿ ಮೊದಲ ಡೋಸ್‌, 2,00,51,427 ಮಂದಿ ಎರಡನೇ ಡೋಸ್‌ ಪೂರ್ಣಗೊಳಿಸಿದ್ದಾರೆ. ಮೊದಲ ಡೋಸ್‌ ಶೇ.85 ರಷ್ಟು ಮಂದಿ ಮೊದಲ ಡೋಸ್‌, …

Read More »

ಡಿಕೆಶಿ ಹಾಗೂ ಸಿದ್ದರಾಮಯ್ಯನವರ ತಂಡದ ಮಧ್ಯೆ ಯುದ್ಧ ಆರಂಭ ಆಗಿದೆ ಎಂದ ಲಕ್ಷ್ಮಣ ಸವದಿ

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮಧ್ಯೆ ಎರಡು ತಂಡಯಾಗಿದ್ದು, ಡಿಕೆಶಿ ಹಾಗೂ ಸಿದ್ದರಾಮಯ್ಯನವರ ತಂಡದ ಮಧ್ಯೆ ಯುದ್ಧ ಆರಂಭ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ಜಿಲ್ಲೆಯ ಸಿಂದಗಿಯಲ್ಲಿ ಶನಿವಾರ ಮಾತನಾಡಿ, ಕಾಂಗ್ರೆಸ್ ನವರು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮಾತನಾಡುತ್ತಾರೆ. ಅವರ ಅವರ ಲೋಪ ದೋಷಗಳನ್ನು ಅವರೇ ಜನತೆ ಮುಂದೇ ಹೇಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷ …

Read More »

ಚಿರು ಹುಟ್ಟುಹಬ್ಬಕ್ಕೆ ಸರ್ಪ್ರೈಸ್​​; ಲಾಂಚ್​ ಆಯ್ತು ಮೇಘನಾ ರಾಜ್ ಹೊಸ​​ ಸಿನಿಮಾ

ರಾಜ್ಯ ಪ್ರಶಸ್ತಿ ವಿಜೇತ ನಟಿ ಮೇಘನಾ ರಾಜ್ ಸರ್ಜಾ ಬಾಳಿಗೆ ಹೊಸ ಬೆಳಕು ಮೂಡಿದೆ.. ತನ್ನ ಮಗನ ನಗುವಿನಲ್ಲಿ ಜೀವನ ಸ್ಫೂರ್ತಿ ಕಾಣುತ್ತಿರೋ ಮೇಘನಾ ರಾಜ್ ತನ್ನ ಎರಡನೇ ಸಿನಿಮಾ ಇನ್ನಿಂಗ್ಸ್​​​​ ಪ್ರಾರಂಭಿಸೋ ಸಮಾಚಾರವನ್ನ ನೀಡಿದ್ದಾರೆ.. ಚಿರಂಜೀವಿ ಸರ್ಜಾ ಬರ್ತ್​ಡೇ ಪ್ರಯುಕ್ತ ಮೇಘನಾ ಅವರ ಹೊಸ ಮೂವಿ ಲಾಂಚ್ ಆಗಿದೆ.. ತನ್ನ ಮಗನ ನಾಮಕರಣವನ್ನ ಕೆಲ ದಿನಗಳ ಹಿಂದೆ ಗ್ರ್ಯಾಂಡ್ ಆಗಿ ಮಾಡಿದ್ರು ಮೇಘನಾ ರಾಜ್ ಸರ್ಜಾ.. ರಾಯನ್ ರಾಜ್ …

Read More »

ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ‘ತೀರ್ಥೋದ್ಭವ’ ಜೀವನದಿಯ ದರ್ಶನಕ್ಕೆ ಕ್ಷಣಗಣನೆ

ಮಡಿಕೇರಿ: ಕಾವೇರಿ… ಇದೊಂದು ಕೇವಲ ನದಿಯಲ್ಲ. ಕೋಟ್ಯಾಂತರ ಮಂದಿಗೆ ತಾಯಿ. ಜೀವನದಿ. ದೈವೀ ಸ್ವರೂಪಿಣಿ. ಹೀಗಾಗಿಯೇ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಇವತ್ತು ಸಂಭ್ರಮ ಮನೆ ಮಾಡಿದೆ. ಭ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳಲಿರುವ ಜೀವನದಿಯ ದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ‘ತೀರ್ಥೋದ್ಭವ’ ಅಗಸ್ತ್ಯ ಮುನಿಯ ಪತ್ನಿಯಾಗಿದ್ದ ಕಾವೇರಿ ಲೋಕಕಲ್ಯಾಣಕ್ಕಾಗಿ ನದಿಯಾಗಿ ಹರಿಯುತ್ತಿದ್ದಾಳೆ ಅನ್ನೋದು ಪ್ರತೀತಿ. ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಅದೇ …

Read More »