Home / ಜಿಲ್ಲೆ / ಬೆಂಗಳೂರು / ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವರಿಗೆ ಮತ ಹಾಕ್ತೀರಾ: ಸಿದ್ದರಾಮಯ್ಯ

ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವರಿಗೆ ಮತ ಹಾಕ್ತೀರಾ: ಸಿದ್ದರಾಮಯ್ಯ

Spread the love

ಬೆಂಗಳೂರು: ನಗರದ ಬಿನ್ನಿಪೇಟೆಯಲ್ಲಿ ನಿರ್ಮಿಸಲಾದ ಏಳು ಅಂತಸ್ತಿನ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ಶನಿವಾರ ಬಿರುಕಿನಿಂದಾಗಿ 1.5 ಅಡಿಗಳಷ್ಟು ಅಪಾಯಕಾರಿಯಾಗಿ ವಾಲಿದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕಟ್ಟಡಗಳ ಕುಸಿತ ಹೆಚ್ಚಾಗುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ, ಕುಸಿದ ಮನೆಗಳಿಂದ ಕುಟುಂಬಗಳನ್ನು ಸ್ಥಳಾಂತರಿಸುವಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರೇ ಈಗ ಸ್ಥಳಾಂತರಗೊಳ್ಳಬೇಕಾದ ದುಸ್ಥಿತಿ ಬಂದೊದಗಿದೆ.

ವಾಲಿದ ‘ಬಿ’ ಬ್ಲಾಕ್ ಕಟ್ಟಡದಲ್ಲಿ ವಾಸಿಸುತ್ತಿರುವ 38 ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಲ್ಲಿ ಪಕ್ಕದಲ್ಲಿರುವ ‘ಸಿ’ ಬ್ಲಾಕ್ ಕಟ್ಟಡದಿಂದಲೂ ಸ್ಥಳಾಂತರಿಸಲು ಚಿಂತನೆ ನಡೆಸಲಾಗಿದೆ. ಸ್ಥಳಾಂತರಗೊಂಡ ಕುಟುಂಬಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಕ್ವಾರ್ಟರ್ಸ್‌ಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಳಪೆ ಗುಣಮಟ್ಟದ ಕಾಮಗಾರಿಗೆ ಹೊಸ ಕಟ್ಟಡ ವಾಲಿರುವುದು ಸಾಕ್ಷಿಯಾಗಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುವ ಪೊಲೀಸರ ಕುಟುಂಬಗಳಿಗೆ 2020 ರಲ್ಲಿ ಕ್ವಾರ್ಟರ್ಸ್ ಮಂಜೂರು ಮಾಡಲಾಗಿತ್ತು, ಈ ಅಪಾರ್ಟ್ಮೆಂಟ್ ನಿರ್ಮಾಣ ಕಾರ್ಯ ಮೂರು ವರ್ಷಗಳ ಹಿಂದೆ ಪೂರ್ಣಗೊಂಡಿತ್ತು.

ಕಳೆದ ವಾರ ಬೆಂಗಳೂರು ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಅವರು ಪೊಲೀಸ್ ಕ್ವಾರ್ಟರ್ಸ್‌ಗೆ ಭೇಟಿ ನೀಡಿದ್ದರು ಮತ್ತು ಕಟ್ಟಡದ ಸ್ಥಿತಿಯ ಬಗ್ಗೆ ಪರಿಶೀಲಿಸಿದ್ದರು.

‘ಕಟ್ಟಡವನ್ನು ಜಪಾನ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಒಂದೂವರೆ ಇಂಚು ಬಿರುಕು ಉಂಟಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ತಿಳಿಸಿದ್ದಾರೆ.

ನಿರಂತರ ಮಳೆಯಿಂದಾಗಿ ನಗರದ ಹಳೆಯ ಮತ್ತು ದುರ್ಬಲ ಕಟ್ಟಡಗಳ ಸರಣಿ ಕುಸಿತ ಘಟನೆಗಳು ವರದಿಯಾದ ನಂತರ ಬಿಬಿಎಂಪಿಯಿಂದ ಸಮೀಕ್ಷೆಗೆ ಆದೇಶಿಸಲಾಗಿತ್ತು . ಕನಿಷ್ಠ ಮೂರು ಕುಸಿತ ಘಟನೆಗಳಲ್ಲಿ ಕುಟುಂಬಗಳು ಕೂದಲೆಳೆ ಅಂತರದಲ್ಲಿ ಪಾರಾಗಿವೆ.

ಇತ್ತೀಚಿನ ಸಮೀಕ್ಷೆಯ ಪ್ರಕಾರ ಬೆಂಗಳೂಇನಲ್ಲಿ 404 ದುರ್ಬಲ ಕಟ್ಟಡಗಳಿದ್ದು ಆ ಪೈಕಿ, ದಕ್ಷಿಣ ವಲಯದಲ್ಲಿ 103 ಹಾಗೂ ಪಶ್ಚಿಮ ವಲಯ 95 ಕಟ್ಟಡಗಳನ್ನು ಹೊಂದಿದೆ. ನುರಿತ ಎಂಜಿನಿಯರ್‌ಗಳು ಈ ಕಟ್ಟಡಗಳನ್ನು ಮೌಲ್ಯಮಾಪನ ಮಾಡಲು ಹೊರಟಿದ್ದು, ಅವರ ಮೌಲ್ಯಮಾಪನದ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ