Breaking News
Home / ಜಿಲ್ಲೆ / ಮುಗಳಖೋಡದ ಜಿಡಗಾ ಮಠದಲ್ಲಿ ನಾಳೆ (ಭಾನುವಾರ) ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ

ಮುಗಳಖೋಡದ ಜಿಡಗಾ ಮಠದಲ್ಲಿ ನಾಳೆ (ಭಾನುವಾರ) ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ

Spread the love

ಬೆಳಗಾವಿ: ಲಕ್ಷಾಂತರ ಭಕ್ತರನ್ನು ಹೊಂದಿರುವ ರಾಯಬಾಗ ತಾಲೂಕು ಮುಗಳಖೋಡದ ಜಿಡಗಾ ಮಠದಲ್ಲಿ ನಾಳೆ (ಭಾನುವಾರ) ‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆ’ಯನ್ನು ಆಯೋಜಿಸಲಾಗಿದ್ದು, ಹತ್ತು ಸಾವಿರಕ್ಕಿಂತಲೂ ಹೆಚ್ಚು ಭಕ್ತಾದಿಗಳು ರೊಟ್ಟಿಯ ಬುತ್ತಿಯನ್ನು ಮಠಕ್ಕೆ ಸಲ್ಲಿಸಲಿದ್ದಾರೆ.

ಪ್ರತಿವಷ೯ ಬಣದ ಹುಣ್ಣಿಮೆಯಿಂದ ಶ್ರೀ ಯಲ್ಲಾಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ದಿನದ ವರೆಗೆ, ಅಂದರೆ 11 ದಿನಗಳ ಕಾಲ ಭಕ್ತರು ರೊಟ್ಟಿ ಬುತ್ತಿಯನ್ನು ತಂದು ಮಠಕ್ಕೆ ಅಪಿ೯ಸುತ್ತಿದ್ದರು. ಈ ಬಾರಿ ಈ ಕಾಯ೯ಕ್ರಮವನ್ನು ಒಂದೇ ದಿನ ಇಡಲಾಗಿದೆ.

ಅಂದು ಮುಗಳಖೋಡದ ಶ್ರೀ ವಿಠ್ಠಲ ಮಂದಿರದಿಂದ ಶ್ರೀಮಠದ ವರೆಗೆ ರೊಟ್ಟಿ ಬುತ್ತಿಗಳ ಮೆರವಣಿಗೆ ನಡೆಯಲಿದ್ದು, ಸಾವಿರಾರು ತಾಯಂದಿರು ಭಾಗವಹಿಸುತ್ತಾರೆ.

ಭಕ್ತರು ತಮ್ಮ ಶಕ್ತ್ಯಾನುಸಾರ ಬುತ್ತಿಯನ್ನು ತರುತ್ತಾರೆ. ಕೆಲವರು ಹತ್ತು ರೊಟ್ಟಿ ತಂದರೆ ಕೆಲವರು ಕ್ವಿಂಟಲ್ ಗಟ್ಟಲೆ ಹಿಟ್ಟಿನ ರೊಟ್ಟಿ ಮಾಡಿಸಿಕೊಂಡು ಬರುತ್ತಾರೆ. ಭಕ್ತರು ತರುವ ಬುತ್ತಿಯನ್ನು ಪ್ರಸಾದವಾಗಿ ಹಂಚಲಾಗುತ್ತದೆ. ಇಲ್ಲಿಯ ರೊಟ್ಟಿ ತಿಂದು ಅಂಬಲಿ ಕುಡಿದರೆ ರೋಗಗಳು ದೂರವಾಗುತ್ತವೆ ಎನ್ನುವ ಪ್ರತೀತಿ ಇದೆ. ಇದೇ ಸಂದಭ೯ದಲ್ಲಿ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ದೇಶೀಯ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ಹಲವು ಬಗೆಯ ಕಾಯ೯ಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕಾಯ೯ಕ್ರಮದ ವೇದಿಕೆಯನ್ನು ತರಕಾರಿಗಳಿಂದಲೇ ಅಲಂಕರಿಸಲಾಗುತ್ತಿದೆ.

ಮುಗಳಖೋಡದ ಜಿಡಗಾ ಮಠ ಜಾತ್ಯಾತೀತ ಮಠ ಎಂದು ಖ್ಯಾತಿ ಪಡೆದಿದ್ದು, ವಿಶೇಷವೆಂದರೆ ಮುಸ್ಲಿಮರು, ಜೈನರು ಆದಿಯಾಗಿ ಆ ಪ್ರದೇಶದ ಎಲ್ಲ ಸಮುದಾಯಗಳ ಜನರು ಮಠಕ್ಕೆ ಬುತ್ತಿಯನ್ನು ಅಪಿ೯ಸುತ್ತಾರೆ. ಜಿಡಗಾ ಮಠವು ಕನಾ೯ಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಸುಮಾರು 360 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ.

Advertisement


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ