Breaking News
Home / ಜಿಲ್ಲೆ / ಕೊರೋನಾ ವೈರಸ್ ಯಾವುದೆ ಒಂದು ಕೋಮಿಗೆ ಬರುವದಿಲ್ಲ ಎಲ್ಲ ಧರ್ಮದವರಿಗೂ ಬರುತ್ತದೆ, ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು : ಜಿಲ್ಲಾಧಿಕಾರಿ ಕೆ. ರಾಜೇಂದ್ರ

ಕೊರೋನಾ ವೈರಸ್ ಯಾವುದೆ ಒಂದು ಕೋಮಿಗೆ ಬರುವದಿಲ್ಲ ಎಲ್ಲ ಧರ್ಮದವರಿಗೂ ಬರುತ್ತದೆ, ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು : ಜಿಲ್ಲಾಧಿಕಾರಿ ಕೆ. ರಾಜೇಂದ್ರ

Spread the love

ಜಮಖಂಡಿ. ಏ. 23 : ಬಾಗಲಕೋಟೆ ಜಿಲ್ಲೆಯಲ್ಲಿ ಮೂರುದಿಂದ ಯಾವುದೆ ಪಾಸಿಟಿವ್ ರೋಗಿಗಳ ಕಂಡು ಬಂದಿಲ್ಲ, ಚಿಕಿತ್ಸೆ ಪಡೆದುಕೊಂಡ ಗುಣಮುಖರಾಗಿರುವ 6 ಜನರನ್ನು ಡಿಸ್‌ಸಾರ್ಜ್ ಮಾಡುವ ಪ್ರಕ್ರೀಯೆ ನಡೆದಿದೆ ವರದಿಗಾಗಿ ಕಾಯುತಿದ್ದೆವೆ ಎಂದು ಜಿಲ್ಲಾಧಿಕಾರಿ ಕ್ಯಾ ಕೆ. ರಾಜೇಂದ್ರ ಹೇಳಿದರು.

ನಗರದ ಬಾರ್ಪೆಟ್‌ಗಲ್ಲಿಯ ನಿಷೇಧಿತ ವಲಯಕ್ಕೆ ಭೆಟ್ಟಿ ನೀಡಿ ನಂತರ ಸುದ್ದಿಗಾರರ ಜೋತೆ ಮಾತನಾಡಿದರು.
ಜಿಲ್ಲೆ ರೆಡ್ ಜೋನ್‌ನಲ್ಲಿರುವದರಿಂದ ಕೃಷಿ ಯೇತರ ಚಟುವಟಿಕೆ ಹೊರತು ಪಡಿಸಿ ಎಲ್ಲವನ್ನು ಬಂದ ಇಡಲಾಗುವುದು ಗ್ರೀಜ್ ಜೋನ್ ನಮ್ಮಲ್ಲಿ ಅನ್ವಯಿಸುವದಿಲ್ಲ ಎಂದರು.

ಕೊನೆಯದಾಗಿ ಪಾಸಿಟಿವ್ ಬಂದ ರೊಗಿಯಿಂದ 28 ದಿನಗಳವರೆಗೆ ಲಾಕ್‌ಡೌನ್ ಮುಂದು ವರೆಯಲಿದೆ ಎಂದರು.
ರಮಜಾನ್ ಇದ್ದರೂ ಮನೆಯಲ್ಲೆ ಆಚರಿಸಬೇಕು, ಕೊರೋನಾ ವೈರಸ್ ಯಾವುದೆ ಒಂದು ಕೋಮಿಗೆ ಬರುವದಿಲ್ಲ ಎಲ್ಲ ಧರ್ಮದವರಿಗೂ ಬರುತ್ತದೆ, ಕೋಮು ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದರು.

ಜಮಖಂಡಿಯಲ್ಲಿ ಪಾಸಿಟಿವ್ ಬಂದಿದ್ದರಿಂದ ವೈದ್ಯರು ಹೆದರಿದ್ದಾರೆ, ಐಎಂಎ ಅಧ್ಯಕ್ಷರಿಗೆ ನಗರದಲ್ಲಿ ಖಾಸಗಿ ಆಸ್ಪತ್ರೆಗಳು ತೆರೆಯುವಂತೆ ನಿರ್ದೇಶನ ನೀಡಲಾಗುವುದು ಎಂದರು.

ಬಾಗಲಕೋಟೆ ನಗರದಲ್ಲಿ ನಿಷೇಧಿತ ವಲಯದಲ್ಲಿನ ನಿವಾಸಿಗೆ 30 ದಿನದಿಂದ 30 ಸಾವಿರ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ, ಜಮಖಂಡಿಯಲ್ಲೂ ಅಷ್ಟೆ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಕೊರೋನಾ ಹರಡದಂತೆ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲಾಗುತ್ತಿದೆ, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಅನಾವಶ್ಯಕವಾಗಿ ಹೊರಗಡೆ ಗುಂಪು ಗೂಡಿ ನಿಲ್ಲುವುದು, ಕುಳಿತುಕೊಳ್ಳುವುದು, ಗಲ್ಲಿಗಳಲ್ಲಿ ಯಾರು ಅನಾವಶ್ಯಕವಾಗಿ ತಿರುಗಾಡದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಗತ್ಯ ವಸ್ತುಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ ಅವುಗಳನ್ನು ತಾವು ಖರಿದಿಸಿ ತೆಗೆದುಕೊಳ್ಳಬಹುದು ಎಂದರು.
ಎಸ್ಪಿ ಲೊಕೇಶ ಜಗಲಾಸರ ಮಾತನಾಡಿ, ಕೊರೊಂಟಾದಲ್ಲಿ ಇರುವ ಪೊಲೀಸ್ ಸಿಬ್ಬಂದಿಗಳನ್ನು ಡ್ಯೂಟಿಗೆ ಹಾಜರಾಗಿಲ್ಲ ಅವರೆಲ್ಲರನ್ನೂ ಲಾಡ್ಜ್ಗಳಲ್ಲಿ ಕೊರೊಂಟೈನ್‌ನಲ್ಲಿ ಇಡಲಾಗಿದೆ ಎಂದರು.

ಸಿಬ್ಬಂದಿಗಳ ಕೊರತೆ ಇರುವದರಿಂದ ಜಮಖಂಡಿಗೆ 20 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸಿ ಡಾ. ಸಿದ್ದು ಹುಲ್ಲೋಳಿ, ಡಿವೈಎಸ್‌ಪಿ ಆರ್.ಕೆ.ಪಾಟೀಲ, ತಹಸೀಲ್ದಾರ ಸಂಜಯ ಇಂಗಳೆ, ತಾಪಂ ಇಓ ಸಂಜು ಹಿಪ್ಪರಗಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಗೈಬುಸಾಬ ಗಲಗಲಿ, ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ. ಇತರರು ಇದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ