ಚಿಕ್ಕಮಗಳೂರು : ಅಕ್ಕಿ ಚೀಲವನ್ನು ಆಸರೆಯಾಗಿ ಬಳಸಿಕೊಂಡು ಟಾರ್ಪಲ್ ಮುಚ್ಚಿ ಪಿಕಪ್ ವಾಹನದಲ್ಲಿ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಗೆ ಹೊರಟಿದ್ದ ವಾಹನವನ್ನು ವಶಕ್ಕೆ ಪಡೆದು ಜಿಲ್ಲಾ ಪೊಲೀಸರು 30 ಜನರನ್ನು ಹಾಸ್ಟೆಲ್ ಒಂದರಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಜಿಲ್ಲೆಯ ಗಡಿ ಪ್ರದೇಶವಾದ ಬೇಲೂರು ತಾಲೂಕಿನ ಪುರ ಎಸ್ಟೇಟ್ ನಿಂದ ಬಂದಿದ್ದ ಇವರು ತೋಟದಲ್ಲಿ ಕೆಲಸವಿಲ್ಲದೆ ಮಾಲೀಕರು ತಮ್ಮ ಮನೆಗಳಿಗೆ ತೆರಳಲು ತಿಳಿಸಿದ್ದು ಕೆಲಸವಿಲ್ಲದೆ ಹೊಟ್ಟೆ ಬಟ್ಟೆಗೂ ಕಷ್ಟವಾಗಿದೆ ವಾಹನದಲ್ಲಿ ಊರಿಗೆ ಬರುತ್ತಿದ್ದೇವೆ ಎಂದು ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿರುವ ವೈದ್ಯರಾಗಿರುವ ತೋಟದ ಮಾಲಿಕ ಕೂಲಿಕಾರ್ಮಿಕರಿಗೆ ಹಣವನ್ನೂ ನೀಡಿಲ್ಲ ಕಳೆದ ಹತ್ತು ದಿನಗಳಿಂದ ಊಟದ ವ್ಯವಸ್ತೆಯನ್ನು ಮಾಡಿಲ್ಲ ಇವರೇ ಅಡುಗೆ ಮಾಡಿಕೊಳ್ಳಲು ತೋಟದಲ್ಲಿ ಸ್ವಲ್ಪ ಸೌದೆಯನ್ನು ಬಳಸಿಕೊಂಡಿದ್ದಕೆ 5000 ಕೂಲಿ ಹಣದಲ್ಲಿ ಮುರಿದು ಕೊಟ್ಟಿದ್ದಾರೆ ಎಂದು ದೂರಿದ್ದಾರೆ.
ಸದ್ಯ ಜಿಲ್ಲಾಡಳಿತ ಇವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು ಮುಂದೇನು ಎಂಬುದನ್ನು ಜಿಲ್ಲಾಡಳಿತ ನಿರ್ಧರಿಸಬೇಕಾಗಿದೆ.