ಹುಕ್ಕೇರಿ : ಹುಕ್ಕೇರಿ ನಗರದಲ್ಲಿ ಅಂಬೇಡ್ಕರ ಪ್ರತಿಮೆ ಅನಾವರಣಕ್ಕೆ ಸಿದ್ದತೆ.
ಹುಕ್ಕೇರಿ ನಗರದಲ್ಲಿ ಬಹುದಿನಗಳ ಬೇಡಿಕೆಯಾದ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಅನಾವರಣಕ್ಕೆ ಸಕಲ ಸಿದ್ದತೆಗಳು ನಡೆದಿವೆ.
ತಾಲೂಕಿನ ದಲಿತ ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ ಮತ್ತು ಸುರೇಶ ತಳವಾರ ನೇತ್ರತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಸಭೆ ಜರುಗಿಸಿ ಕಾರ್ಯಕ್ರಮದ ರೂಪ ರೇಷೆಗಳನ್ನು ಸಿದ್ದಪಡಿಸಿ ಮಾದ್ಯಮ ಗಳೊಂದಿಗೆ ಮಾತನಾಡಿದ ದೀಲಿಪ ಹೋಸಮನಿ ಹುಕ್ಕೇರಿ ತಾಲೂಕಿನಲ್ಲಿ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಯನ್ನು ಜನೇವರಿ 25 ರಂದು ಐತಿಹಾಸಿಕವಾಗಿ ಕಾರ್ಯಕ್ರಮ ಜರುಗಿಸಲು ರಾಜ್ಯದ ಸಚಿವರ ಆದಿಯಾಗಿ ಹುಕ್ಕೇರಿ ಶಾಸಕ ನಿಖಿಲ ಕತ್ತಿ
, ಸಂಸದರಾದ ಪ್ರೀಯಾಂಕ ಜಾರಕಿಹೋಳಿ ಸೇರಿದಂತೆ ಮತ್ತು ಮಾಜಿ ಸಂಸದರಾದ ರಮೇಶ ಕತ್ತಿ ಹಾಗೂ ಹುಕ್ಕೇರಿ, ಸಂಕೇಶ್ವರ, ಯಮಕನಮರ್ಡಿ ಭಾಗದ ಎಲ್ಲಾ ಸಮೂದಾಯದ ಮುಖಂಡರನ್ನು ಅವ್ಹಾನಿಸಿ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಗುವದು ಎಂದರು ( )
ನಂತರ ಕಾರ್ಯಕ್ರಮದ ಸ್ಥಳ ಪರಿಸಿಲಿಸಿದ ಮುಖಂಡರು ಮುಖ್ಯ ವೇದಿಕೆ, ವಾಹನ ನಿಲ್ದಾಣ , ಊಟೋಪಚಾರ, ಅಲಂಕಾರ, ಸ್ವಾಗತ ಕಮಾನಗಳು ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರಿಗೆ ಮಾರ್ಗದರ್ಶನ ನೀಡಿ ಮಾತನಾಡಿದ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ನಿರ್ದೆಶಕ ಸುರೇಶ ತಳವಾರ ಜನೇವರಿ 25 ರಂದು ಜರಗಲಿರುವ ಡಾ, ಬಾಬಾಸಾಹೇಬರ ಪ್ರತಿಮೆ ಸ್ಥಾಪನೆಗೆ ಬೇಕಾಗುವ ಎಲ್ಲ ಸಿದ್ದತೆಗಳನ್ನು ಮಾಡಲಾಗುತ್ತಿದ್ದು ತಾಲೂಕಿನ ಜನತೆ ಈ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಬೇಕು ಎಂದರು ( )
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ಜಿಲ್ಲಾ ಅದ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ, ಕೆ ಡಿ ಪಿ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಕೋಳಿ, ಉದಯ ಹುಕ್ಕೇರಿ, ಪ್ರಕಾಶ ಮೈಲಾಖೆ, ರಮೇಶ ಹುಂಜಿ, ಸದಾ ಕಾಂಬಳೆ, ಅಕ್ಷಯ ವೀರಮುಖ, ಕೆಂಪಣ್ಣಾ ಶಿರಹಟ್ಟಿ, ಶಂಕರ ತಿಪ್ಪನಾಯ್ಕ, ಮುಯೂರ ತಳವಾರ, ಬಹುಸಾಹೇಬ ಪಾಂಡ್ರೆ,ರಾಜೇಂದ್ರ ಮೋಶಿ ಮೊದಲಾದವರು ಉಪಸ್ಥಿತರಿದ್ದರು.