ಹಾಸನದಲ್ಲಿ ಆಶ್ಲೀಲ ಪೆನ್‍ಡ್ರೈವ್ ಹಂಚಿಸಿದ್ದೇ ವಿಜಯೇಂದ್ರ; ಯತ್ನಾಳ ಗಂಭೀರ ಆರೋಪ
ವಿಜಯಪುರ: ಭ್ರಷ್ಟ ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷನೆಂದು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ವಿಜಯೇಂದ್ರನ ನಾಲ್ಕಾರು ಚೇಲಾ ಶಾಸಕರ ಹೊರತಾಗಿ 55ಕ್ಕೂ ಹೆಚ್ಚು ಶಾಸಕರ ವಿರೋಧವಿದ್ದು, ಈ ಬಗ್ಗೆ ಹೈಕಮಾಂಡ್ ನಾಯಕರನ್ನು ನಾವು ಪ್ರಶ್ನಿಸುತ್ತೇವೆ. ಪಕ್ಷದಲ್ಲಿ ಹೈಕಮಾಂಡ್ ಭ್ರಷ್ಟ ವಿಜಯೇಂದ್ರನನ್ನು ವಿರುದ್ಧ ಕ್ರಮ ಕೈಗೊಳ್ಳಲಿ, ತಪಿದ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವ ನನ್ನನ್ನು ಹೊರ ಹಾಕಲಿ ಎಂದು ರಾಜ್ಯದ ಜನರಿಗೆ ಹೇಳುತ್ತೇನೆ. ಪಕ್ಷದ ಹೈಕಮಾಂಡ ಯತ್ನಾಳ ಪಕ್ಷ ವಿರೋಧ ಚಟುವಟಿಕೆ ಮಾಡುತ್ತಿದ್ದಾರೆ ಎಂದು ನನ್ನನ್ನು ಹೊರಹಾಕಲಿ. ನನ್ನ ಭ್ರಷ್ಟಾಚಾರ ಇದ್ದರೆ ಹೊರ ಹಾಕಲಿ, ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.