Breaking News

ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಲೋಕಾಯುಕ್ತ ಸಂಸ್ಥೆ ಮಾಡುತ್ತಿದೆ – ಡಿಎಸ್ಪಿ ಬಿ ಎಸ್ ಪಾಟೀಲ.

Spread the love

ಹುಕ್ಕೇರಿ : ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಲೋಕಾಯುಕ್ತ ಸಂಸ್ಥೆ ಮಾಡುತ್ತಿದೆ – ಡಿಎಸ್ಪಿ ಬಿ ಎಸ್ ಪಾಟೀಲ.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳು ತಾಲೂಕಾ ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಬೆಳಗಾವಿ ಲೋಕಾಯುಕ್ತ ಡಿ ಎಸ್ಪಿ ಬಿ ಎಸ್ ಪಾಟೀಲ ಹೇಳಿದರು.

ಅವರು ಇಂದು ಹುಕ್ಕೇರಿ ತಾಲೂಕಿನ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಹಮ್ಮಿಕೊಂಡ ಸಾರ್ವಜನಿಕ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ನ್ಯಾಯವಾದಿ ರಾಮಚಂದ್ರ ಜೋಶಿ, ಚಂದು ಗಂಗಣ್ಣವ೪ ,ತಮ್ಮಣ್ಣಗೌಡ ಪಾಟೀಲ ಮಾತನಾಡಿ ಕಳೆದ ಎರಡು ವರ್ಷಗಳಿಂದ ಹುಕ್ಕೇರಿ ತಾಲೂಕಿನ ಅಡವಿಸಿದ್ದೇಶ್ವರ ಮತ್ತು ಶಂಕರಲಿಂಗ ಏತ ನೀರಾವರಿ ಯೋಜನೆಗಳು ಪ್ರಾರಂಭ ವಾಗಿವೆ ಆದರೆ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲಾ, ರೈತರ ಜಮಿನುಗಳಲ್ಲಿ ಪೈಪ ಲೈನ್ ಅಳವಡಿಸಲು ಸುಮಾರು 8 ತಿಂಗಳಿನಿಂದ ಜಮಿನು ಅಗೆದು ಹಾಗೆ ಬಿಟ್ಟಿದ್ದಾರೆ ಅಲ್ಲದೆ ಹಲವಾರು ರೈತರ ಜಮಿನುಗಳಲ್ಲಿ ರಸ್ತೆ ನಿರ್ಮಿಸಿದ್ದರಿಂದ ರೈತರು ಹಾನಿ ಅನುಭವಿಸುತ್ತಿದ್ದಾರೆ ಅಲ್ಲದೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪೋನ್ ಮಾಡಿದರು ಸ್ಪಂದನೆ ಸಿಗುತ್ತಿಲ್ಲಾ ಅಲ್ಲದೆ ಗುತ್ತಿಗೆದಾರ ಸಹ ರೈತರ ಸಮಸ್ಯೆಗಳನ್ನು ಆಲಿಸುತ್ತಿಲ್ಲಾ ಕೂಡಲೆ ಲೋಕಾಯುಕ್ತ ಅಧಿಕಾರಿಗಳು ನಿರಾವರಿ ಇಲಾಖೆ ಅಭಿಯಂತರ ಮೇಲೆ ದೂರು ದಾಖಲಿಸಿಕೊಂಡಿ ಕ್ರಮ ಜರುಗಿಸ ಬೇಕು ಎಂದು ಆಗ್ರಹಿಸಿದರು.

( )
ಅಲ್ಲದೆ ಹುಕ್ಕೇರಿ ನಗರದ ಸರ್ವೆ ನಂಬರ 116 ರಲ್ಲಿ ಜನ ವಸತಿ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಜರಗುತ್ತಿಲ್ಲಾ ಇತ್ಯಾದಿ ಸಮಸ್ಯೆಗಳನ್ನು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತಂದು ಲಿಖಿತ ರೂಪದಲ್ಲಿ ಅರ್ಜಿ ನೀಡಲಾಯಿತು.

ವೇದಿಕೆ ಮೇಲೆ ತಹಸಿಲ್ದಾರ ಮಂಜುಳಾ ನಾಯಿಕ, ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಲೋಕಾಯುಕ್ತ ಅಧಿಕಾರಿಗಳಾದ ಭರತ ರೇಡ್ಡಿ, ಎ ಆರ್ ಕಲಾದಗಿ, ಪುರಸಭೆ ಮುಖ್ಯಾಧಿಕಾರಿಗಳಾದ ಆಯ್ ಸಿ ಸಿದ್ನಾಳ, ಪ್ರಕಾಶ ಮಠದ ಉಪಸ್ಥಿತರಿದ್ದರು.

ನಂತರ ಮಾತನಾಡಿದ ಡಿಎಸ್ಪಿ ಬಿ ಎಸ್ ಪಾಟೀಲ ಸಾರ್ವಜನಿಕರ ಕುಂದು ಕೊರತೆಗಳನ್ನು ಮತ್ತು ಸರಕಾರಿ ಅಧಿಕಾರಿಗಳ ಕಿರುಕುಳ ,ಹಣ ಬೇಡಿಕೆ ಇತ್ಯಾದಿ ಸಾರ್ವಜನಿಕರ ಮತ್ತು ಸರಕಾರಿ ಯೋಜನೆಗಳು ಸಮರ್ಪಕವಾಗಿ ನಡೆಯಲು ಲೋಕಾಯುಕ್ತ ಸಂಸ್ಥೆ ಈ ರೀತಿ ಸಾರ್ವಜನಿಕ ಜನ ಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡು ಜನರ ಸಮಸ್ಯಗಳಿಗೆ ಸೂಕ್ತ ಪರಿಹಾರ ನೀಡಲಾಗುತ್ತಿದೆ ಎಂದರು


Spread the love

About Laxminews 24x7

Check Also

ಬೆಳಗಾವಿ ಕೆ.ಎಲ್.ಇ ಆಸ್ಪತ್ರೆ ಎದುರಿನ ಬೈಕ್ ಕದಿಯುತ್ತಿದ್ದ ಕಳ್ಳ ಅಂದರ್; ಒಟ್ಟು 4 ಬೈಕ್ ವಶ.

Spread the loveಬೆಳಗಾವಿ:  ಎಪಿಎಂಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿನ ಕೆಎಲ್ಇ ಆಸ್ಪತ್ರೆಯ ಮುಂದುಗಡೆ ನಿಲಿಸಲಾಗಿರುವ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ