BJP;10 ನಾಯಕರಿಂದ ಪ್ರತ್ಯೇಕ ಸಂಘಟನೆ: ರಮೇಶ್ ಜಾರಕಿಹೊಳಿ
ರಾಯಚೂರು: ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಿಲ್ಲ. ಬಿಜೆಪಿಯನ್ನು ಬಹುಮತದಿಂದ ಅಧಿಕಾರಕ್ಕೆ ತರಲು ಪ್ರತ್ಯೇಕವಾಗಿ ನಾವು 10 ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ. ನಾನು 6 ಜಿಲ್ಲೆಗಳ ಉಸ್ತುವಾರಿ ತೆಗೆದುಕೊಂಡಿ ದ್ದೇನೆ. ಯತ್ನಾಳ್, ಪ್ರತಾಪ ಸಿಂಹ, ಅರವಿಂದ ಲಿಂಬಾವಳಿ ಸೇರಿ ಕೆಲವು ನಾಯಕರು ಉಳಿದ ಜಿಲ್ಲೆಗಳ ಹೊಣೆ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಬಗ್ಗೆ ಗೌರವವಿದೆ. ವಿಜಯೇಂದ್ರ ಇರುವವರೆಗೆ ನಾವು ಯಾವುದೇ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಅವರ ಕಾರ್ಯವೈಖರಿ ಬಗ್ಗೆ ತೃಪ್ತಿ ಇಲ್ಲ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೇ ಸುಪ್ರೀಂ ಇದ್ದಂತೆ. ಡಿಸೆಂಬರ್ ಒಳಗಾಗಿ ಎಲ್ಲ ಸರಿ ಹೋಗುವ ವಿಶ್ವಾಸವಿದೆ. ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸವಿದ್ದು ಅದೇ ರೀತಿ ಮುನ್ನಡೆಯುತ್ತೇವೆ ಎಂದು ತಿಳಿಸಿದರು.