ಹುಕ್ಕೇರಿ : ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ – IAS ಅಧಿಕಾರಿ ದಿನೇಶಕುಮಾರ ಮೀನಾ.
ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಪ್ರೋಭೆಷನರಿ IAS ಅಧಿಕಾರಿ ಖಾನಾಪುರ ತಾಲೂಕಾ ಪಂಚಾಯತ ಇಓ ದೀನೇಶಕುಮಾರ ಮೀನಾ ಹೇಳಿದರು.
ಅವರು ಗುರುವಾರ ಸಾಯಂಕಾಲ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಎ ಬಿ ಪಾಟೀಲ ಪಬ್ಲಿಕ್ ಶಾಲೆಯ ಉಡಾನ 2025 ರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್ ಡಿ ವಿ ಎಸ್ ಸಂಘದ ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನು ನಿಡಸೋಸಿಯ ನಿಜಲಿಂಗೇಶ್ವರ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎಮ್ ಎಸ್ ಕಾಮತ್ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ದಿನೇಶ ಕುಮಾರ ಮೀನಾ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ವಹಿಸಿ ನಿರಂತರ ಅಭ್ಯಾಸ ಮಾಡಿದರೆ ಯಶಸ್ಸು ಸಾಧಿಸಬಹುದು ಕಾರಣ ಪಾಲಕರು ಮಕ್ಕಳ ಕೌಶಲ್ಯ ಅರಿತು ಪ್ರೋತ್ಸಾಹ ನೀಡುವದು ಅವಶ್ಯವಾಗಿದೆ ಎಂದರು
ವೇದಿಕೆ ಮೇಲೆ ಸಂಘದ ಉಪಾದ್ಯಕ್ಷ ಕೆ ಸಿ ಶಿರಕೋಳಿ, ಕಾರ್ಯದರ್ಶಿ ಜಿ ಸಿ ಕೋಟಗಿ, ಆಡಳಿತಾಧಿಕಾರಿ ಡಾ, ಬಿ ಎ ಪೂಜಾರಿ, ನಿರ್ದೆಶಕರಾದ ಆರ್ ಬಿ ಪಾಟೀಲ, ವಿ ಬಿ ತೋಡಕರ, ಎಸ್ ಎಂ ಪಾಟೀಲ, ಸಂತೋಷ ಪಾಟೀಲ, ವಿಜಯ ರವದಿ, ಬಿ ಎಸ್ ವೈರಾಗಿ ಉಪಸ್ಥಿತರಿದ್ದರು.
ಎಸ್ ಡಿ ವಿ ಎಸ್ ಸಂಘದ ಅದ್ಯಕ್ಷ ಮಾಜಿ ಸಚಿವ ಎ ಬಿ ಪಾಟೀಲ ಮಾತನಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿ ಇರುವ ಸಂಕೇಶ್ವರ ನಗರದಲ್ಲಿ
ಕಳೆದ ಹನ್ನೊಂದು ವರ್ಷಗಳ ಹಿಂದೆ ಸಿ ಬಿ ಎಸ್ ಸಿ ಶಾಲೆ ಪ್ರಾರಂಭಿಸಿ ಈ ಭಾಗದ ಬಡ ಮತ್ತು ಪ್ರತಭಾವಂತ ವಿದ್ಯಾರ್ಥಿಗಳಿಗೆ ಅನಕೂಲ ಮಾಡಲಾಗಿದೆ ಇಂದು ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಶಾಲೆಯಾಗಿದೆ ಎಂದರು
ನಂತರ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ದುರದುಂಡೀಶ್ವರ ವಿದ್ಯಾವರ್ಧಕ ಸಂಘದ ವಿವಿಧ ವಿಭಾಗಗಳ ಮುಖ್ಯಸ್ಥರು ,ಪಾಲಕರು, ವಿದ್ಯಾರ್ಥಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಉಡಾನ ಸಾಂಸ್ಕೃತಿಕ ಸಂಭ್ರಮದ ನಿಮಿತ್ಯ ಶಾಲಾ ಕಟ್ಟಡಕ್ಕೆ ದೀಪಾಲಂಕಾರ ಮಾಡಲಾಗಿತ್ತು.
ಕೊನೆಯಲ್ಲಿ ಶ್ರೀ ಗಳು ಆಶಿರ್ವಚನ ನೀಡಿದರು.