Breaking News

ಗೋಡೆಗಳಲ್ಲಿ ಅರಳಿದ ಕಲಾಕೃತಿ

Spread the love

ಕಿತ್ತೂರು: ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಹಾಗೂ ಸೋಮವಾರ ಪೇಟೆಯ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮನ ಪುತ್ಥಳಿಗೆ ಹೊಸಕಳೆ ಬಂದಿದ್ದು, ಹೆದ್ದಾರಿ ಕೆಳ ಸೇತುವೆಯ ಪಕ್ಕದ ಗೋಡೆಗಳಲ್ಲಿ ರಾಣಿ ಚನ್ನಮ್ಮ ಹಾಗೂ ಇತಿಹಾಸ ಬಿಂಬಿಸುವ ಕೆಲವು ಸನ್ನಿವೇಶ, ಚಿತ್ರಗಳು ಜೀವ ಪಡೆದಿದ್ದು, ಕಿತ್ತೂರು ಕಳೆಗಟ್ಟಿದೆ.

 

ಇಲ್ಲಿನ ಕೋಟೆ ಆವರಣದಲ್ಲಿ ಅ. 23ರಿಂದ 25 ರ ವರೆಗೆ ನಡೆಯಲಿರುವ ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಕಲಾಕೃತಿಗಳು ಜೀವತಳೆದಿವೆ.

ಅಶ್ವಾರೂಢ ಚನ್ನಮ್ಮನ ಪ್ರತಿಮೆಗೆ ಹಲವಾರು ಬಾರಿ ಬಣ್ಣ ಬಳಿದಿದ್ದರೂ ದಪ್ಪನೆಯ ರೂಪ ತಾಳಿತ್ತು. ಇದನ್ನು ಮನಗಂಡ ಶಾಸಕ ಬಾಬಾಸಾಹೇಬ ಪಾಟೀಲ ಅದಕ್ಕೆ ಹೊಸರೂಪ ಕೊಡಲು ನಿರ್ಧರಿಸಿದರು. ಕೇರಳದ ಕಲಾವಿದರನ್ನು ಈ ಕಾರ್ಯಕ್ಕಾಗಿ ಕರೆಯಿಸಲಾಗಿದ್ದು, ಪುತ್ಥಳಿಗೆ ಹೊಸ ರೂಪ ನೀಡಿ, ಗೋಡೆಗಳಿಗೆ ಹೊಸ ಮೆರುಗು ನೀಡಿದ್ದಾರೆ. ಇನ್ನ ೂಕೆಲ ಕೆಲಸಗಳು ಬಾಕಿ ಉಳಿದಿದ್ದು, ಸೋಮವಾರ ಮುಕ್ತಾಯವಾಗಲಿವೆ.

ಪೆಂಡಾಲ್ ಸಿದ್ಧಪಡಿಸುವುದು, ಪಟ್ಟಣಕ್ಕೆ ಲೈಟಿಂಗ್ ವ್ಯವಸ್ಥೆಯನ್ನು ಈ ಬಾರಿ ಬೇಗ ಮುಗಿಸಲಾಗಿದೆ. ಗಿಡಗಳಲ್ಲಿ ಬೆಳಕು ಅರಳಿದೆ. ಕೋಟೆ ಆವರಣ, ಸೋಮವಾರ ಪೇಟೆ ಮತ್ತು ಗುರುವಾರ ಪೇಟೆ, ಕೋಟೆ ಆವರಣದಲ್ಲಿ ಲೈಟ್ ಸರಮಾಲೆಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ. ಚನ್ನಮ್ಮನ ವೃತ್ತವೂ, ಪುತ್ಥಳಿಯ ಬಳಿ ಮಾಡಿರುವ ಲೈಟ್ ವ್ಯವಸ್ಥೆಯು ಸಾರ್ವಜನಿಕರನ್ನು ಹೆಚ್ಚು ಗಮನ ಸೆಳೆಯುವಂತೆ ಮಾಡಿದೆ.


Spread the love

About Laxminews 24x7

Check Also

ವೈಭವಯುತ ‘ಕಿತ್ತೂರು ಉತ್ಸವ’ಕ್ಕೆ ಭರದ ಸಿದ್ಧತೆ: ಶಾಸಕ ಬಾಬಾಸಾಹೇಬ ಪಾಟೀಲ

Spread the love ಬೆಳಗಾವಿ: ‘ಚನ್ನಮ್ಮನ ಕಿತ್ತೂರಿನಲ್ಲಿ ಅ.23ರಿಂದ 25ರವರೆಗೆ ನಡೆಯಲಿರುವ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ