ಕಾಗವಾಡ ತಾಲೂಕಿನ ಕೂಸಿನ ಮನೆಗಳುವ ರಾಜ್ಯಕ್ಕೆ ಮಾದರಿಯಾಗಲಿ: ಜಿ ಎಸ್. ಮಠದ
ಅಥಣಿ: ಆರೈಕೆದಾರರು ಸಮಗ್ರ ತರಬೇತಿ ಪಡೆದುಕೊಂಡು ಕಾಗವಾಡ, ಅಥಣಿ ತಾಲೂಕಿನ ಕೂಸಿನ ಮನೆಗಳನ್ನು ರಾಜ್ಯದಲ್ಲಿ ಮಾದರಿಯಾಗಿಸಬೇಕು ಎಂದು ಸಹಾಯಕ ನಿರ್ದೇಶಕ ಜಿ.ಎಸ್.ಮಠದ ಹೇಳಿದರು.
ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಅಥಣಿ, ಕಾಗವಾಡ ತಾಲೂಕಿನ ಎರಡನೇ ಹಂತದ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ರೇಣುಕಾ ಹೊಸಮನಿ ಮಾತನಾಡಿ, ಈಗಾಗಲೇ ನಾಲ್ಕು ಜನ ಆರೈಕೆದಾರರಿಗೆ ತರಬೇತಿ ನೀಡಲಾಗಿದೆ. ಇನ್ನುಳಿದ ನಾಲ್ವರಿಗೆ ಈಗ ತರಬೇತಿ ಪ್ರಾರಂಭಿಸಲಾಗಿದೆ. ತರಬೇತಿ ಪಡೆದುಕೊಂಡು ಪ್ರವೇಶ ಪಡೆದಿರುವ ಮಕ್ಕಳ ಆರೈಕೆಯನ್ನು ಜವಾಬ್ದಾರಿಯಿಂದ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತರಬೇತಿದಾರರಾದ ಸುಜಾತಾ ಪಾಟೀಲ್, ಪ್ರಿಯದರ್ಶಿನಿ ಬಿರಾದಾರ, ಎಮ್ ಆರ್ ಡಬ್ಲ್ಯೂ ವಿಶ್ವನಾಥ ಮೋರೆ,
ಸಾವಿತ್ರಿ ತಮದಡ್ಡಿ, ಐಇಸಿ ಸಂಯೋಜಕರಾದ ಅಮೀತ ಇಂಗಳಗಾಂವಿ, ಶಿವಾನಂದ ಸಾವಗಾಂವ, ಗ್ರಾಮ ಕಾಯಕ ಮಿತ್ರರಾದ ಪ್ರೇಮಾ ಪಾಟೀಲ್, ರೂಪಾ ಪಟೀಲ್, ಸುರೇಖಾ ಮಧಾಳೆ, ಸಂಜೀವ ತಳವಾರ, ಮಾರುತಿ ಕನಾಳ ಭಾಗಿಯಾಗಿದ್ದರು.