ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಗೆ ಏಕಕಾಲಕ್ಕೆ 52 ಟನ್ ಕಬ್ಬು ತಂದ ರೈತರು ; ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಂದ ಚಾಲನೆ.
ಗೋಕಾಕ : ರೈತರೊಬ್ಬರು ಏಕಕಾಲಕ್ಕೆ 52.070 ಟನ್ ಕಬ್ಬು ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಗೆ ತಂದಿದ್ದು ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ವಾಹನಕ್ಕೆ ಚಾಲನೆ ನೀಡಿ, ಹರ್ಷ ವ್ಯಕ್ತಪಡಿಸಿದರು.
ಹಿರೇನಂದಿ ಗ್ರಾಮದಲ್ಲಿರುವ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಗೆ ರೈತರೊಬ್ಬರು ಏಕಕಾಲಕ್ಕೆ 52 ಟನ್ ಕಬ್ಬು ತಂದಿದ್ದು ಖುಷಿ ವಿಷಯವಾಗಿದ್ದು, ಈ ವಾಹನಕ್ಕೆ ಸ್ವತಃ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಬರಮಾಡಿಕೊಂಡು ಹರ್ಷ ವ್ಯಕ್ತಪಡಿಸಿ, ನಮ್ಮೊಂದಿಗೆ ರೈತರ ಸಂಬಂಧ ಹೀಗೆ ಇರಲಿ, ನಾವು ಸದಾ ಅವರೊಂದಿಗೆ ಇರುತ್ತವೆ ಎಂದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರು, ರೈತರು, ಕಾರ್ಖಾನೆಯ ಸಿಬ್ಬಂದಿಗಳು, ಮುಖಂಡರು ಉಪಸ್ಥಿತರಿದ್ದರು.