ಕಲಬುರ್ಗಿ: ಕೌಟುಂಬಿಕ ಕಲಹಕ್ಕೆ ಬೇಸತ್ತಂತ ಪತಿಯೊಬ್ಬ, ಪತ್ನಿಯನ್ನೇ ಕುಡುಗೋಲಿನಿಂದ ಕೊಚ್ಚಿ ಕೊಲೆಗೈದು, ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವಂತ ಘಟನೆ ಕಲಬುರ್ಗಿಯ ಸೇಡಂನ ಬೇಟಗೇರ(ಬಿ) ಗ್ರಾಮದಲ್ಲಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಬೇಡಗೇರ(ಬಿ) ಗ್ರಾಮದ ನಾಗಮ್ಮ ಹಾಗೂ ಶೇಖರಪ್ಪ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು.
ದಿನೇ ದಿನೇ ಹೆಚ್ಚಾಗಿ ಇದರಿಂದ ಬೇಸತ್ತು ಕೂಡ ಹೋಗಲಾಗಿತ್ತು ಎನ್ನಲಾಗಿದೆ.
ಕೌಟುಂಬಿಕ ಕಲಹಕ್ಕೆ ಬೇಸತ್ತಿದ್ದಂತ ಶೇಖರಪ್ಪ ತನ್ನ ಪತ್ನಿ ನಾಗಮ್ಮ(42) ಎಂಬುವರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಗೈದಿದ್ದಾರೆ. ಆ ಬಳಿಕ ಸೇಡಂ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.