ಧಾರವಾಡ: ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧಾರವಾಡ ಎಸಿಪಿ ಹಾಗೂ ಉಪನಗರ ಠಾಣೆಯ ಪಿಐ ಅವರು ಠಾಣೆ ವ್ಯಾಪ್ತಿಯಲ್ಲಿ ನೈಟ್ ಸಿಟಿ ರೌಂಡ್ಸ್ ಮಾಡುವ ಮೂಲಕ, ಪುಡಾರಿಗಳಿಗೆ ಬಿಸಿ ಮುಟ್ಟಿಸಿ ಸಾರ್ವಜನಿಕರ ಸಮಸ್ಯೆಗಳ ಆಲಿಸಿ ಪುಂಡರ ಕಿರಿಕಿರಿ ಇದ್ದಲ್ಲಿ ದೂರು ನೀಡಲು ಕರೆ ನೀಡಲಾಯಿತು.
ನಗರದ ಸಪ್ತಾಪುರ ಸೇರಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜನ ನಿಬಿಡ ಪ್ರದೇಶದಲ್ಲಿ ಎಸಿಪಿ ಪ್ರಶಾಂತ ಸಿದ್ಧನಗೌಡರ ನೇತೃತ್ವದಲ್ಲಿ ನೈಟ್ ಸಿಟಿ ರೌಂಡ್ಸ್ ಮಾಡುವ ಮೂಲಕ ಏರಿಯಾ ಫೇಮಲೈಸೇಶನ್ ಮಾಡಲಾಯಿತು. ಇದೇವೇಳೆ ತಡ ರಾತ್ರಿ ನಗದಿತ ಸಮಯ ಮೀರಿ ವ್ಯಾಪಾರ ವಹಿವಾಟು ನಡೆಸುವ ಅಗಂಡಿಕಾರರಿಗೆ, ಸೇರಿದಂತೆ ಲೇಟ್ ನೈಟ್ ಬಿದಿ ಬದಿಯ ಹರಟೆ ಮಾಡುವವರಿಗೆ ಬಿಸಿ ಮುಟ್ಟಿಸಿ ಖಡಕ್ ವಾರ್ನಿಂಗ್ ನೀಡಿ ಪೊಲೀಸರು ಬಿಸಿ ಮುಟ್ಟಿಸಿದಾರೆ.
ಇನ್ನೂ ಈ ವೇಳೆ ಹಲವು ಕಡೆಗಳಲ್ಲಿ ಸಾರ್ವಜನಿಕರ ಭೇಟಿ ಮಾಡಿದ ಪೊಲೀಸ್ ಅಧಿಕಾರಿಗಳು ತುರ್ತು ಸೇವೆ 112 ಜಾಗೃತಿ ಸೇರಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಿ ಸಹಾಕಾರ ನೀಡಲು ಮನವಿ ಮಾಡಿದರು. ಈ ವೇಳೆ ಉಪನಗರ ಪೊಲೀಸ್ ಠಾಣೆ ಮುಖ್ಯ ಅಧಿಕಾರಿ ದಯಾನಂದ ಶೇಗುಣಸಿ ಸೇರಿಅನೇಕರು ಉಪಸ್ಥಿತರಿದ್ದರು.