ಚಿಕ್ಕೋಡಿ:ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಶಿರಗಾಂವ, ಚಿಂಚಣಿ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಸತ್ಕರಿಸಿ ,ಅಭಿನಂದಿಸಿದರು.
ಚಿಕ್ಕೋಡಿ-ತಾಲ್ಲೂಕಿನ ಚಿಂಚಣಿ, ಶಿರಗಾಂವ ಹಾಗೂ ಇಂಗಳಿ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಮೂರೂ ಪಿಕೆಪಿಎಸ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತ ತಲಾ 8 ಜನ , ಬಿಜೆಪಿ ಬೆಂಬಲಿತ 4 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಶಿರಗಾಂವ ಗ್ರಾಮದ ತಮ್ಮಣ್ಣ ಬೇಡರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂಗಳಿ ಗ್ರಾಮದ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಣ್ಣಾಸಾಬ ಜಾಧವ, ಹೂವಣ್ಣ ಚೌಗುಲೆ, ರಾಜಾರಾಮ ಮಾನೆ, ಸಾಗರ ಅವರಾದೆ, ಸುಭಾಷ ಘೋಸರವಾಡೆ, ತೇಜಶ್ರೀ ಮಧಬಾವೆ, ರಾಮಜಿ ಕಾಂಬಳೆ, ಅಜೀತಕುಮಾರ ಚಿಗರೆ, ರಮೇಶ ಪವಾರ, ಅಣ್ಣಾಸಾಬ ಚೌಗುಲೆ, ಲಕ್ಷ್ಮೀಬಾಯಿ ಮಿರ್ಜೆ, ಜ್ಯೋತಿಬಾ ಸಾವಂತ ಆಯ್ಕೆಯಾಗಿದ್ದಾರೆ.
ಶಿರಗಾಂವ ಗ್ರಾಮದ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಸವರಾಜ ಪವಾಡೆ, ಬಾಬಗೌಡ ಪಾಟೀಲ, ಶಂಕರ ಮಲಕಾಪೂರೆ, ಸಲೀಮ ತಾಶಿಲ್ದಾರ, ಸದಾಶಿವ ಉದಗಟ್ಟಿ, ಮೀನಾಕ್ಷಿ ಉದಗಟ್ಟಿ, ಯಶೋಫ ಮಾನೆ, ಪ್ರಸಾದ ಜೋಶಿ, ಸಂಜಯ ಪೂಜಾರಿ, ಸಾವಿತ್ರಿ ಬನ್ನೆ, ರಮೇಶ ಚೌಗುಲೆ ಗೆಲುವು ಸಾಧಿಸಿದ್ದಾರೆ.
ಚಿಂಚಣಿ ಗ್ರಾಮದ ಸಹಕಾರ ಸಂಘಕ್ಕೆ ನಡೆದ ಚುಣಾವಣೆಯಲ್ಲಿ ಕಲ್ಲಪ್ಪ ಭೋಸಲೆ, ಜಯಶ್ರೀ ಕುಂಬಾರ, ರಾಜಶ್ರೀ ಮುದ್ದಪ್ಪಗೋಳ, ಮಹಾದೇವ ಸನದಿ, ಸುನೀಲ ಗುರವ, ಅಪ್ಪಾಸಾಬ ಚೌಗಲಾ, ಸುನೀಲ ಕಿಲ್ಲೇದಾರ, ಚಂದ್ರಕಾಂತ ಕಮಾನೆ, ಶ್ರೀಧರ ಅಮ್ಮಣಗಿ, ಬಸವರಾಜ ಪಾಟೀಲ, ಲಕ್ಷ್ಮಣಗೌಡ ಪಾಟೀಲ, ಸಂಜಯಕುಮಾರ ಪರೀಟ ಆಯ್ಕೆಯಾಗಿದ್ದಾರೆ.