ಗೋಕಾಕ; ಗೋಕಾಕ ನಿವಾಸಿಯಾಗಿರುವ ಹಿರಿಯ ಪತ್ರಕರ್ತರಾದ ಶಹೀದ್ ಧಾರವಾಡಕರ್ (80) ಶುಕ್ರವಾರ ವಿಧಿವಶರಾಗಿದ್ದಾರೆ.
ದಿ.ಶಹೀದ್ ಧಾರವಾಡಕರ್ ಅವರು, 1970 ರ ದಶಕದಲ್ಲಿ ಕಮ್ಯೂನಿಷ್ಟೆ ಚಳುವಳಿ ಹಾಗೂ ಸಮದರ್ಶಿ ಪತ್ರಿಕೆ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾದರು. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿ.ಶಹೀದ್ ಧಾರವಾಡಕರ್ ಅವರು, ಇಂದು ಬೆಳಗಿನ ಜಾವ ಇಹಲೋಕ ತಳ್ಳಿಸಿದ್ದಾರೆ.
ಮೃತರು, ಪತ್ನಿ, ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.