ಹುಕ್ಕೇರಿ : ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ – ಮಂಜುಳಾ ನಾಯಿಕ.
ಜನೇವರಿ 26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರಕಾರಿ ಅಧಿಕಾರಿಗಳು ಕಡ್ಡಾಯವಾಗಿ ಭಾಗ ವಹಿಸಬೇಕು ಎಂದು ಹುಕ್ಕೇರಿ ತಹಸಿಲ್ದಾರ ಮಂಜುಳಾ ನಾಯಿಕ ಹೇಳಿದರು.
ಅವರು ಇಂದು ಗಣರಾಜ್ಯೋತ್ಸವ ಆಚರಣೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡುತ್ತಾ ಆರ್ ಟಿ ಆಯ್ ಕಾರ್ಯಕರ್ತ ರಾಜು ಕುರಂದವಾಡೆ ಯವರು ರಾಷ್ಟ್ರೀಯ ಹಬ್ಬಗಳಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸುವದಿಲ್ಲಾ ಈ ಕುರಿತು ಕ್ರಮ ಜರುಗಿಸ ಬೇಕು ಎಂದು ಮನವಿ ಸಲ್ಲಿಸಿದ್ದಾರೆ ಕಾರಣ ಸರಕಾರಿ ನೌಕರರು ಸಾರ್ವಜನಿಕ ದ್ವಜಾರೋಹಣ ಕಾರ್ಯಕ್ರಮದಲ್ಲಿ ಕಡ್ಡಯವಾಗಿ ಭಾಗವಹಿಸಬೇಕು ಎಂದು ಎಚ್ಚರಿಸಿದರು.
ವೇದಿಕೆ ಮೇಲೆ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಎ ಮಲ್ಲಾಡದ, ಗ್ರೇಡ 2 ತಹಸಿಲ್ದಾರ ಪ್ರಕಾಶ ಕಲ್ಲೋಳ್ಳಿ, ಬಿ ಇ ಓ ಪ್ರಭಾವತಿ ಪಾಟೀಲ, ಬಸವರಾಜ ನಾಂದೂಡಕರ, ಸಮಾಜ ಕಲ್ಯಾಣ ಅಧಿಕಾರಿ ಎಚ್ ಎ ಮಾಹುತ ಉಪಸ್ಥಿತರಿದ್ದರು.
ಬಿ ಇ ಓ ಪ್ರಭಾವತಿ ಪಾಟೀಲ ಮಾತನಾಡಿ ಶಾಲಾ ಮಕ್ಕಳ ಪರೇಡ ಅಭ್ಯಾಸ ಮಾಡುವಲ್ಲಿ ಪೋಲಿಸ್ ಇಲಾಖೆ ಸಹಕರಿಸುತ್ತಿಲ್ಲಾ ಎಂದು ಆರೋಪಿಸಿದರು.
ನಂತರ ಮುಖಂಡರಾದ ಉದಯ ಹುಕ್ಕೇರಿ, ಕಬೀರ ಮಲ್ಲಿಕ, ಸುನಿಲ ಭೈರನ್ನವರ ಸಲಹೆ ಸೂಚನೆಗಳನ್ನು ನೀಡಿದರು.